AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಾಂಪ್ರಮೈಸ್ ಆಗಬೇಕು’; ನಟಿ ಚಂದನಾಗೆ ಹೀಗೆ ನೇರವಾಗಿ ಹೇಳಿದ ನಿರ್ಮಾಪಕ ಯಾರು?

ಚಂದನಾ ಅನಂತಕೃಷ್ಣ ಅವರು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಕಾಸ್ಟಿಂಗ್ ಕೌಚ್‌ನಂತಹ ಅನುಭವಗಳ ಬಗ್ಗೆ ಮಾತನಾಡಿದ್ದಾರೆ. ಒಂದು ಏಜೆನ್ಸಿ ಅವರಿಗೆ ಕಳುಹಿಸಿದ ಪ್ರಸ್ತಾಪದಲ್ಲಿ ‘3 ತಿಂಗಳು ಶೂಟ್ + ಕಾಂಪ್ರಮೈಸ್’ ಎಂದು ಸ್ಪಷ್ಟವಾಗಿ ಬರೆದಿತ್ತು ಎಂದು ಅವರು ಹೇಳಿದ್ದಾರೆ. ಈ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.

‘ಕಾಂಪ್ರಮೈಸ್ ಆಗಬೇಕು’; ನಟಿ ಚಂದನಾಗೆ ಹೀಗೆ ನೇರವಾಗಿ ಹೇಳಿದ ನಿರ್ಮಾಪಕ ಯಾರು?
ಚಂದನಾ
ರಾಜೇಶ್ ದುಗ್ಗುಮನೆ
|

Updated on: May 09, 2025 | 2:58 PM

Share

ನಟಿ ಚಂದನಾ ಅನಂತಕೃಷ್ಣ (Chandana Ananthakrishna) ಅವರು ‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿ ಗಮನ ಸೆಳೆದರು. ಅವರು ಉತ್ತಮ ಭರತನಾಟ್ಯ ಡ್ಯಾನ್ಸರ್ ಹಾಗೂ ನಟಿ. ಸದ್ಯ ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಚಂದನಾ ಅವರು ನಟಿಸುತ್ತಿದ್ದಾರೆ. ಈಗ ಅವರು ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ತಾವು ಎದುರಿಸಿದ ಸಮಸ್ಯೆಗಳ ಬಗ್ಗೆಯೂ ಹೇಳಿಕೊಂಡಿದ್ದಾರೆ. ಅವರಿಗೂ ಕಾಸ್ಟಿಂಗ್ ಕೌಚ್ ರೀತಿಯ ಅನುಭವ ಆಗಿತ್ತು. ಈ ಬಗ್ಗೆ ಚಂದನಾ ನೇರ ಮಾತುಗಳಲ್ಲಿ ವಿವರಣೆ ನೀಡಿದ್ದಾರೆ.

‘ವೈ5 ಟಿವಿ ಕನ್ನಡ’ ಯೂಟ್ಯೂಬ್ ಚಾನೆಲ್​ಗೆ ಚಂದನಾ ಸಂದರ್ಶನ ನೀಡಿದ್ದಾರೆ. ಈ ವೇಳೆ ಅವರು ತಮ್ಮ ಜೀವನದಲ್ಲಾದ ಕೆಲ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಹಾಗಂತ ಅವರಿಗೆ ಕರೆ ಮಾಡಿದ ಯಾರೊಬ್ಬರೂ ನಿರ್ಮಾಪಕರಾಗಿರಲಿಲ್ಲ. ಆಫರ್ ಕೊಡೋ ಹೆಸರಲ್ಲಿ ಚಾನ್ಸ್ ಪಡೆದುಕೊಳ್ಳಲು ಬಯಸಿದವರಾಗಿದ್ದರು ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರ.

ಇದನ್ನೂ ಓದಿ
Image
ಪೊಲೀಸರಿಗೆ ಆವಾಜ್ ಹಾಕಿದ ‘ಜೈಲರ್’ ಖ್ಯಾತಿಯ ವಿನಾಯಕನ್; ಮತ್ತೆ ನಟನ ಕಿರಿಕ್
Image
ಮದುವೆ ವಿಚಾರದಲ್ಲಿ ಕಿಚ್ಚ ಸುದೀಪ್ ಹೇಳಿದ ಮಾತಿನಂತೆ ನಡೆದುಕೊಂಡ ಚೈತ್ರಾ
Image
ಚೈತ್ರಾ ಕುಂದಾಪುರ ಮದುವೆ; ವಿಡಿಯೋ ಮೂಲಕ ಹುಡುಗನ ಪರಿಚಯ
Image
‘ನಿನ್ನ ದೇಹ ನೀನೇ ನಿರ್ಧರಿಸು’; ದೀಪಿಕಾಗೆ ನೇರವಾಗಿ ಹೇಳಿದ್ದ ರಣವೀರ್ ಸಿಂಗ್

‘ಒಬ್ಬರು ಕರೆ ಮಾಡಿದ್ದರು. ಮಾಡರ್ನ್​ ಫೋಟೋಶೂಟ್ ಬೇಕು ಎಂದರು. ನಾನು ಅಷ್ಟು ಮಾಡರ್ನ್​ ಫೋಟೋಶೂಟ್ ಮಾಡಿಸಿರಲಿಲ್ಲ. ಇದ್ದಿದ್ದರಲ್ಲೇ ಮಾಡರ್ನ್ ಆಗಿರೋ ಫೋಟೋ ಕಳುಹಿಸಿದೆ. ಆ ಬಳಿಕ ಮೇಕಪ್ ಇಲ್ಲದ ಫೋಟೋ ಕಳುಹಿಸಿ ಎಂದರು. ಅದನ್ನೂ ಕಳುಹಿಸಿದೆ’ ಎಂದು ಮಾತು ಆರಂಭಿಸಿದರು ಚಂದನಾ.

‘ವಿಡಿಯೋ ಕಾಲ್ ಮಾಡಿ ಎಂದು ಕೇಳಿದರು. ನನಗೆ ವಿಚಿತ್ರ ಅನಿಸಿತು. ಯಾರು ವಿಡಿಯೋ ಕಾಲ್ ಅಲಾ ಮಾಡಿ ಅಂತಾರೆ? ಅದಕ್ಕೆ ರಿಪ್ಲೈ ಮಾಡಲಿಲ್ಲ. ಅವರು ಪದೇ ಪದೇ ಕರೆ ಮಾಡುತ್ತಲೇ ಇದ್ದ. ಆಗ ನನ್ನ ಗೆಳೆಯರ ಜೊತೆ ಇದ್ದ. ನನ್ನ ಫ್ರೆಂಡ್ ಒಬ್ಬರು ಮಾತನಾಡಿದರು. ಆ ಬಳಿಕ ಕಾಲ್ ಕಟ್ ಮಾಡಿದೆ. ನಂತರ ಬ್ಲಾಕ್ ಮಾಡಿದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಟಿಆರ್​ಪಿಯಲ್ಲಿ ಮೊದಲ ಸ್ಥಾನದಲ್ಲಿ ಎರಡು ಜನಪ್ರಿಯ ಧಾರಾವಾಹಿಗಳು; ಟಾಪ್ 5 ಸೀರಿಯಲ್ ಲಿಸ್ಟ್ ಇಲ್ಲಿದೆ

‘ಒಂದು ಏಜೆನ್ಸಿ ಅವರು ಕರೆ ಮಾಡಿದ್ದರು. ವಯಸ್ಸು, ಸಂಭಾವನೆ ಎಲ್ಲವೂ ಬರೆದುಕೊಂಡಿತ್ತು. 3 ತಿಂಗಳು ಶೂಟ್ ಪ್ಲಸ್ ಕಾಂಪ್ರಮೈಸ್ ಅಂತ ಅಲ್ಲಿಯೇ ಬರೆದುಕೊಂಡಿತ್ತು. ಈ ರೀತಿಯ ಏಜೆನ್ಸಿಗಳು ಇರುತ್ತವೆ. ಏಜೆನ್ಸಿಗಳ ಸತ್ಯಾಸತ್ಯಯತೆ ನೋಡಿಕೊಂಡು ನಾವು ನಿರ್ಧರಿಸಬೇಕು’ ಎಂದಿದ್ದಾರೆ ಚಂದನಾ. ನಟನೆ ಮಾಡಬೇಕು ಎಂಬ ಹುಮ್ಮಸ್ಸಿನಲ್ಲಿ ಇರುವವರಿಗೆ ಈ ರೀತಿಯವರು ಕರೆ ಮಾಡಿದಾಗ ಆ ಬಗ್ಗೆ ಜ್ಞಾನ ಇರೋದಿಲ್ಲ. ಈಗ ಚಂದನಾ ಹೇಳಿದ ಮಾತಿನಿಂದ ಕೆಲವರಲ್ಲಿ ಜಾಗೃತಿ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ