ಅಶ್ವಿನಿ-ಜಾನ್ವಿ ಕಳ್ಳಾಟಕ್ಕೆ ತಾಳ್ಮೆ ಕಳೆದುಕೊಂಡ ಬಿಗ್ ಬಾಸ್; ಇಷ್ಟೆಲ್ಲ ಆದರೂ ನಗು
ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಮತ್ತು ಆ್ಯಂಕರ್ ಜಾನ್ವಿ ಪದೇ ಪದೇ ಮೈಕ್ ನಿಯಮ ಉಲ್ಲಂಘಿಸಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಸುದೀಪ್ ಎಚ್ಚರಿಕೆ ನೀಡಿದ್ದರೂ, ಚೇಂಜಿಂಗ್ ರೂಂನಲ್ಲಿ ಮೈಕ್ ಇಲ್ಲದೆ ಮಾತನಾಡಿ, ಪಶ್ಚಾತ್ತಾಪವಿಲ್ಲದೆ ನಕ್ಕಿದ್ದಾರೆ. ಅವರ ಉದ್ಧಟತನದಿಂದ ತಾಳ್ಮೆ ಕಳೆದುಕೊಂಡ ಬಿಗ್ ಬಾಸ್ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಇದು ಅವರ ಕಳ್ಳಾಟಕ್ಕೆ ದೊರೆತ ಕಠಿಣ ಶಿಕ್ಷೆಯಾಗಿದೆ.

ಅಶ್ವಿನಿ ಗೌಡ ಹಾಗೂ ಆ್ಯಂಕರ್ ಜಾನ್ವಿ ಕಳೆದ ವಾರವಷ್ಟೇ ಸುದೀಪ್ ಅವರಿಂದ ಬೈಸಿಕೊಂಡಿದ್ದರು. ಇದಕ್ಕೆ ಕಾರಣ ಆಗಿದ್ದು ಚೇಂಜಿಂಗ್ ರೂಂನಲ್ಲಿ ಮೈಕ್ ಇಲ್ಲದೆ ಮಾತನಾಡಿದ್ದು. ಸುದೀಪ್ ಬೈದು ಕೆಲವೇ ಗಂಟೆಗಳಲ್ಲಿ ಅಶ್ವಿನಿ ಹಾಗೂ ಜಾನ್ವಿ ಮತ್ತದೇ ತಪ್ಪು ಮಾಡಿದ್ದಾರೆ. ಸಾಮಾನ್ಯವಾಗಿ ತಪ್ಪು ಮಾಡಿದಾಗ ಕೆಲವರಿಗೆ ಪಶ್ಚಾತಾಪ ಆಗುತ್ತದೆ, ನಾಚಿಕೆ ಆಗುತ್ತದೆ. ಆದರೆ, ಇವರ ಮುಖದಲ್ಲಿ ಅದ್ಯಾವುದೂ ಕಾಣಿಸಲೇ ಇಲ್ಲ. ಇಬ್ಬರು ಹಾಯಾಗಿ ನಗುತ್ತಿದ್ದರು. ಇದರಿಂದ ಬಿಗ್ ಬಾಸ್ ತಾಳ್ಮೆ ಕಳೆದುಕೊಂಡರು.
ಎಲಿಮಿನೇಷನ್ ಎಪಿಸೋಡ್ ಮುಗಿದ ಬಳಿಕ ಜಾನ್ವಿ ಹಾಗೂ ಅಶ್ವಿನಿ ಚೇಂಜಿಂಗ್ ರೂಂಗೆ ತೆರಳಿದರು. ಈ ವೇಳೆ ಜಾನ್ವಿ ಹಾಗೂ ಅಶ್ವಿನಿ ಪಿಸುಧ್ವನಿಯಲ್ಲಿ ಮಾತನಾಡಿದರು. ಆ ಕೂಡಲೇ ಬಿಗ್ ಬಾಸ್ ಈ ಬಗ್ಗೆ ಎಚ್ಚರಿಸಿ ಚೇಂಜಿಂಗ್ ರೂಂನಿಂದ ಹೊರ ಬರುವಂತೆ ಸೂಚಿಸಿದರು. ಮರುದಿನ ಬಿಗ್ ಬಾಸ್ ಎಲ್ಲರನ್ನೂ ಕರೆದು ವಿಟಿ ಕೂಡ ತೋರಿಸಿದರು.
ಸಾಮಾನ್ಯವಾಗಿ ಜಾನ್ವಿ ಅವರು ತಪ್ಪು ಮಾಡಿ ತಾವು ತಪ್ಪೇ ಮಾಡಿಲ್ಲ ಎಂದು ಹೇಳುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಈ ಕಾರಣದಿಂದಲೇ ಮನೆ ಮಂದಿಗೆ ಬಿಗ್ ಬಾಸ್ ವಿಟಿ ತೋರಿಸಿದರು. ಇದೆಲ್ಲ ಆದ ಬಳಿಕವೂ ಜಾನ್ವಿ ಹಾಗೂ ಅಶ್ವಿನಿ ಅವರು ಸ್ಪಷ್ಟನೆ ನೀಡಲು ಬಂದರು. ‘ಹುಕ್ ತೆಗೆಯುತ್ತಾ ಇದ್ದೆವು. ನಾವು ಬೇಕಂತಲೇ ಈ ರೀತಿ ಮಾಡಿಲ್ಲ’ ಎಂದು ಜಾನ್ವಿ ಹೇಳಿದರು. ಬಿಗ್ ಬಾಸ್ ಬಯ್ಯುತ್ತಿದ್ದರೆ ಇಬ್ಬರೂ ನಗುತ್ತಲೇ ಇದ್ದರು.
ಇದನ್ನೂ ಓದಿ: ಸುದೀಪ್ ಮಾತಿಗೂ ಬೆಲೆ ಕೊಡದ ಜಾಹ್ನವಿ, ಅಶ್ವಿನಿ ಗೌಡ: ಮನೆ ದಾರಿ ನೆನಪಿಸಿದ ಬಿಗ್ ಬಾಸ್
ತಾಳ್ಮೆ ಕಳೆದುಕೊಂಡ ಬಿಗ್ ಬಾಸ್ ಜಾನ್ವಿ ಹಾಗೂ ಅಶ್ವಿನಿ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಚೇಂಜಿಂಗ್ ರೂಂನಲ್ಲಿ ಮೈಕ್ ಇಲ್ಲದೆ ಮಾತನಾಡಿದ್ದಕ್ಕೆ ಬಿಗ್ ಬಾಸ್ ಕೊಟ್ಟ ಶಿಕ್ಷೆ ಇದಾಗಿದೆ. ‘ನಾವು ಅಷ್ಟೆಲ್ಲ ದೊಡ್ಡ ತಪ್ಪು ಮಾಡಿಯೇ ಇಲ್ಲ’ ಎಂದು ಇಬ್ಬರೂ ಸ್ಪಷ್ಟನೆ ನೀಡೋಕೆ ಬಂದಿದ್ದಾರೆ. ಆದರೆ, ಇದನ್ನೆಲ್ಲ ಇಬ್ಬರೂ ಕಿವಿಗೆ ಹಾಕಿಕೊಂಡೇ ಇಲ್ಲ. ಉದ್ಧಟತನ ತೋರಿದ್ದಕ್ಕೆ, ಕಳ್ಳಾಟ ಆಡಿದ್ದಕ್ಕೆ ಸುದೀಪ್ ಮತ್ತೆ ಕ್ಲಾಸ್ ತೆಗೆದುಕೊಳ್ಳಬೇಕು ಎಂಬುದು ಅನೇಕರ ಕೋರಿಕೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




