
ಅಶ್ವಿನಿ ಹಾಗೂ ರಕ್ಷಿತಾ (Rakshitha) ಮಧ್ಯೆ ಈ ವಾರ ದೊಡ್ಡ ವಾರ್ ನಡೆದಿತ್ತು. ಅಶ್ವಿನಿ ಅವರು ತುಂಬಾನೇ ಪರ್ಸನಲ್ ಆಗಿ ತೆಗೆದುಕೊಂಡು ಟೀಕೆಗಳನ್ನು ಮಾಡಿದ್ದನ್ನು ಕಾಣಬಹುದು. ಈ ಟೀಕೆಯಿಂದ ರಕ್ಷಿತಾ ಅವರಿಗೆ ಬೇಸರ ಆಗಿದೆ. ವಾರಾಂತ್ಯದಲ್ಲಿ ಸುದೀಪ್ ಅವರು ಖಡಕ್ ಆಗಿ ಪಾಠ ಹೇಳಿದರು. ಈ ಪಾಠದ ಬಳಿಕ ಅವರು ಕ್ಷಮೆ ಕೇಳಿದರು. ಈ ಕ್ಷಣವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಆದರೆ, ಅಶ್ವಿನಿಗೆ ಸ್ವಲ್ಪವೂ ಪಶ್ಚಾತಾಪ ಮಾತ್ರ ಇರಲಿಲ್ಲ.
ಅಶ್ವಿನಿ ಹಾಗೂ ಜಾನ್ವಿ ಒಟ್ಟಾಗಿ ಗೆಜ್ಜೆ ಆಡಿಸುವ ಮೂಲಕ ಆ ತಪ್ಪನ್ನು ರಕ್ಷಿತಾ ಮೇಲೆ ಹಾಕಿದ್ದರು. ಈ ವಿಚಾರದಲ್ಲಿ ರಕ್ಷಿತಾ ಅವರು ತುಂಬಾನೇ ನೊಂದುಕೊಂಡರು. ರಕ್ಷಿತಾ ಅವರ ಮೇಲೆ ವೈಯಕ್ತಿಕ ದಾಳಿಗಳು ನಡೆಯುತ್ತಲೇ ಇದ್ದವು. ಕೊನೆಗೆ ರಕ್ಷಿತಾ ಅವರು ಈ ವಿಚಾರದಲ್ಲಿ ಸಿಡಿದೆದ್ದರು. ಅವರು ಕೂಡ ಅಶ್ವಿನಿ ಮೇಲೆ ವಾಗ್ದಾಳಿ ನಡೆಸಿದರು.
ಈ ಘಟನೆಗಳನ್ನು ಇಟ್ಟುಕೊಂಡು ಅಶ್ವಿನಿ ಅವರಿಗೆ ಸುದೀಪ್ ಪಾಠ ಹೇಳಿದರು. ಪದೇ ಪದೇ ಈ ರೀತಿ ಆಗುತ್ತಿರುವುದನ್ನು ಸುದೀಪ್ ಕೂಡ ಸಹಿಸಿಲ್ಲ. ಅವರು ಅಶ್ವಿನಿಗೆ ಪಾಠ ಹೇಳಿದ್ದೂ ಅಲ್ಲದೆ, ರಕ್ಷಿತಾಗೆ ಈ ಘಟನೆಗಳಿಂದ ಬೇಸರ ಆಗಿದೆ ಎಂಬುದನ್ನು ಒತ್ತಿ ಹೇಳಿದರು. ‘ಬಹುಶಃ ಅವರಿಗೆ ಈ ಘಟನೆ ನೋವು ತಂದಿರಬಹುದು’ ಎಂದು ಹೇಳಿದರು ಅಶ್ವಿನಿ. ಆಗ ಸುದೀಪ್, ‘ನಿಜ ಹೇಳಿ ನಿಮಗೆ ಏನು ಅನಿಸುತ್ತದೆ? ಅವರಿಗೆ ನೋವು ಆಗಿಲ್ಲವಾ’ ಎಂದು ಸುದೀಪ್ ಕೇಳಿದರು.
ಇದನ್ನೂ ಓದಿ: ರಕ್ಷಿತಾ ಪರ ನಿಂತ ಗಿಲ್ಲಿಗೆ ಕಿಚ್ಚನ ಚಪ್ಪಾಳೆ; ಇದು ನನ್ನದು ಮಾತ್ರವಲ್ಲ, ಕರ್ನಾಟಕದ ಚಪ್ಪಾಳೆ ಎಂದ ಸುದೀಪ್
ಇದಕ್ಕೆ ಅಶ್ವಿನಿ, ‘ಇದೆಲ್ಲ ನೋಡಿದ ಮೇಲೆ ನೋವಾಗಿದೆ, ಕ್ಷಮೆ ಇರಲಿ ಕಂದಾ’ ಎಂದು ರಕ್ಷಿತಾಗೆ ಹೇಳಿದರು. ಆದರೆ ಪಶ್ಚಾತಾಪ ಇರಲಿಲ್ಲ. ರಕ್ಷಿತಾ ಅವರು ಸುಲಭದಲ್ಲಿ ಅಶ್ವಿನಿ ಅವರನ್ನು ಕ್ಷಮಿಸಿ ಬಿಟ್ಟರು. ಇದು ರಕ್ಷಿತಾ ಅವರ ದೊಡ್ಡ ಗುಣ ಎಂದು ಎಲ್ಲರೂ ಹೇಳಿದ್ದಾರೆ. ಸದ್ಯ ಈಗ ನಡೆದ ಘಟನೆಗಳಿಂದ ರಕ್ಷಿತಾ ಅವರ ಬಿಗ್ ಬಾಸ್ ಮನೆಯ ಓಟ್ಟಕ್ಕೆ ಮೈಲಜ್ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.