‘ಹಿಂಗಾಯ್ತು ಅಂತ ಬಗ್ಗೋದು ಬೇಡ’- ಜಾನ್ವಿ; ‘ಇವರು ಏನಂದ್ರೂ ಬದಲಾಗಲ್ಲ’ ಎಂದ ಸುದೀಪ್

ಎಲಿಮಿನೇಟ್ ಆದ ಅಶ್ವಿನಿ ಹಾಗೂ ಮಂಜು ಭಾಷಿಣಿ ವೇದಿಕೆ ಮೇಲೆ ಬಂದಾಗ ಸುದೀಪ್ ಅವರು ಜಾನ್ವಿ ಹಾಗೂ ಅಶ್ವಿನಿ ಗೌಡ ಬಗ್ಗೆ ಕೇಳಿದರು. ‘ಈಗ ನೀವು ಪಾಠ ಮಾಡಿದ ಬಳಿಕ ಅವರು ಬದಲಾಗುತ್ತಾರೆ’ ಎಂದು ಮಂಜು ಅವರು ಹೆಮ್ಮೆಯಿಂದ ಹೇಳಿದರು. ಆದರೆ, ಸುದೀಪ್ ಇದನ್ನು ಒಪ್ಪಿಕೊಳ್ಳಲೇ ಇಲ್ಲ.

‘ಹಿಂಗಾಯ್ತು ಅಂತ ಬಗ್ಗೋದು ಬೇಡ’- ಜಾನ್ವಿ; ‘ಇವರು ಏನಂದ್ರೂ ಬದಲಾಗಲ್ಲ’ ಎಂದ ಸುದೀಪ್
ಅಶ್ವಿನಿ,ಜಾನ್ವಿ-ಸುದೀಪ್
Updated By: ಮಂಜುನಾಥ ಸಿ.

Updated on: Oct 19, 2025 | 8:52 PM

ಅಶ್ವಿನಿ ಗೌಡ (Ashwini Gowda) ಹಾಗೂ ಆ್ಯಂಕರ್ ಜಾನ್ವಿ ನೇರವಾಗಿ ರಕ್ಷಿತಾ ಶೆಟ್ಟಿಗೆ ಕಿರುಕುಳ ನೀಡಿದ್ದರು. ಈ ವಿಚಾರ ಸಾಕಷ್ಟು ಚರ್ಚೆ ಆಗಿತ್ತು. ಈ ವಿಚಾರದ ಬಗ್ಗೆ ಸುದೀಪ್ ಅವರು ಖಡಕ್ ಆಗಿ ತಿರುಗೇಟು ಕೊಟ್ಟರು. ಸಾಕಷ್ಟು ಸಮಯ ತೆಗೆದುಕೊಂಡು ಸುದೀಪ್ ಅವರು ಅಶ್ವಿನಿ ಗೌಡ ಹಾಗೂ ಜಾನ್ವಿಗೆ ಬುದ್ಧಿವಾದ ಹೇಳಿದರು. ಆದರೆ, ಇವರು ಬದಲಾಗುವುದಿಲ್ಲ ಎಂಬುದು ಸುದೀಪ್ ಅವರಿಗೆ ನೇರವಾಗಿ ಗೊತ್ತಾಗಿ ಹೋಯಿತು. ಈ ಎಪಿಸೋಡ್ ಇಂದು (ಅಕ್ಟೋಬರ್ 19) ಪ್ರಸಾರ ಕಂಡಿದೆ.

ಸುದೀಪ್ ಅವರು ಬುದ್ಧಿವಾದ ಹೇಳಿದ್ದರಿಂದ ಅಶ್ವಿನಿ ಗೌಡ ಅವರು ಹೋಗಿ ರಕ್ಷಿತಾ ಶೆಟ್ಟಿ ಬಳಿ ಕ್ಷಮೆ ಕೇಳಿದ್ದಾರೆ. ಈ ಕ್ಷಮೆ ಕೇಳಿದ ಬಳಿಕ ರಕ್ಷಿತಾ ಅವರು ಈ ಕ್ಷಮೆಯನ್ನು ಒಪ್ಪಿಕೊಂಡರು. ಆ ಬಳಿಕ ರಕ್ಷಿತಾ ಶೆಟ್ಟಿ ಅವರು ಅಶ್ವಿನಿ ಗೌಡ ಅವರನ್ನು ಕ್ಷಮಿಸಿಯೇ ಬಿಟ್ಟರು. ಆದರೆ, ಜಾನ್ವಿ ಅವರ ಅಹಂಗೆ ಇದು ಪೆಟ್ಟು ಕೊಟ್ಟಂತೆ ಇತ್ತು. ಹೀಗಾಗಿ ಅವರು ನೇರವಾಗಿ ಒಂದು ಮಾತನ್ನು ಹೇಳಿದರು.

‘ನೇರವಾಗಿ ಇರ್ತೀವಿ, ಅದರಿಂದ ಕೆಟ್ಟವರು ಆಗ್ತೀವಿ. ಹಿಂಗಾಯ್ತು ಅಂತ ಬಗ್ಗೋದು ಬೇಡ. ಒಳ್ಳೆಯ ರೀತಿಯಲ್ಲಿ ಇರೋಣ’ ಎಂದು ಜಾನ್ವಿ ಹೇಳಿದರು. ಇದನ್ನು ನೋಡುತ್ತಿದ್ದಂತೆ ವೀಕ್ಷಕರಿಗೆ ಇವರು ಬದಲಾಗಲ್ಲ ಅನ್ನೋದು ಸ್ಪಷ್ಟವಾಗಿ ಹೋಯ್ತು.

ಇದನ್ನೂ ಓದಿ: ‘ಕ್ಷಮೆ ಇರಲಿ ಕಂದಾ’; ಸುದೀಪ್ ಬುದ್ಧಿವಾದದ ಬಳಿಕ ರಕ್ಷಿತಾ ಬಳಿ ಕ್ಷಮೆ ಕೇಳಿದ ಅಶ್ವಿನಿ

ಎಲಿಮಿನೇಟ್ ಆದ ಅಶ್ವಿನಿ ಹಾಗೂ ಮಂಜು ಭಾಷಿಣಿ ವೇದಿಕೆ ಮೇಲೆ ಬಂದಾಗ ಸುದೀಪ್ ಅವರು ಜಾನ್ವಿ ಹಾಗೂ ಅಶ್ವಿನಿ ಗೌಡ ಬಗ್ಗೆ ಕೇಳಿದರು. ‘ಈಗ ನೀವು ಪಾಠ ಮಾಡಿದ ಬಳಿಕ ಅವರು ಬದಲಾಗುತ್ತಾರೆ’ ಎಂದು ಮಂಜು ಅವರು ಹೆಮ್ಮೆಯಿಂದ ಹೇಳಿದರು. ಆಗ ಸುದೀಪ್ ಅವರು ಒಂದು ವಿಡಿಯೋ ಹಾಕಿದರು. ಈ ವಿಡಿಯೋದಲ್ಲಿ ಅಶ್ವಿನಿ ಗೌಡ ಹಾಗೂ ಜಾನ್ವಿ ಅವರು ಒಟ್ಟಿಗೆ ಮಾತನಾಡುತ್ತಾ ಕುಳಿತಿದ್ದರು. ‘ಇವರು ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ. ಅವರ ಟಾರ್ಗೆಟ್ ಬದಲಾಗಬಹುದು. ಇದನ್ನು ಮುಂದುವರಿಸುತ್ತಾರೆ’  ಎಂದು ನೇರವಾಗಿ ಹೇಳಿಯೇಬಿಟ್ಟರು. ಸುದೀಪ್ ಹೇಳಿದ ಮಾತು ಅನೇಕರಿಗೆ ನಿಜ ಎನಿಸಿದೆ.

ಅತ್ತ, ಕಿಚ್ಚನ ಚಪ್ಪಾಳೆ ಪಡೆದ ಗಿಲ್ಲಿ ವಿಚಾರಕ್ಕೆ ಅಶ್ವಿನಿ ಗೌಡ ಹಾಗೂ ಜಾನ್ವಿ ಗೌಡ ಸಾಕಷ್ಟು ಉರಿದುಕೊಂಡಿದ್ದು ಸ್ಪಷ್ಟವಾಗಿ ಕಂಡು ಬಂತು. ಗಿಲ್ಲಿ ಲಾಭ ಮಾಡಿದ ಎಂದೆಲ್ಲ ಅಶ್ವಿನಿ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:46 pm, Sun, 19 October 25