
‘ಬಿಗ್ ಬಾಸ್ ಕನ್ನಡ ಸೀಸನ್ 12’ರ (BBK 12) ಸ್ಪರ್ಧಿ ಅಶ್ವಿನಿ ಗೌಡ ಸದ್ಯ ಸಾಕಷ್ಟು ಚರ್ಚೆಯಲ್ಲಿರುವ ಹೆಸರುಗಳಲ್ಲಿ ಒಂದು. ಅವರು ದೊಡ್ಮನೆಯಲ್ಲಿ ಕೂಗಾಡಿಕೊಂಡು ಸಾಕಷ್ಟು ಚರ್ಚೆಗೆ ಕಾರಣ ಆಗಿದ್ದರು. ರಕ್ಷಿತಾ ಶೆಟ್ಟಿ ಹೇಳಿದ ಮಾತನ್ನು ತಿರುಚಿದ ವಿಚಾರದಲ್ಲೂ ಅಶ್ವಿನಿ ಅವರು ಸುದೀಪ್ ಕಡೆಯಿಂದ ಪಾಠ ಹೇಳಿಸಿಕೊಳ್ಳಬೇಕಾಯಿತು. ಹೀಗಿರುವಾಗಲೇ ಅಶ್ವಿನಿ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಸೈಲೆಂಟ್ ಆಗಿ ಬಿಟ್ಟಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಅಶ್ವಿನಿ ಗೌಡ ಅವರು ಸಖತ್ ಸೈಲೆಂಟ್ ಆಗಿದ್ದಾರೆ. ಇದಕ್ಕೆ ನವೆಂಬರ್ 10ರ ಎಪಿಸೋಡ್ ಒಳ್ಳೆಯ ಉದಾಹರಣೆ. ಯಾರ ಗುಣದಿಂದ ಉಳಿದವರಿಗೆ ನೋವಾಗುತ್ತಿದೆ ಎಂಬುದನ್ನು ಹಸಿ ಮೆಣಸು ನೀಡಿ ಹೇಳುವ ಟಾಸ್ಕ್ ನೀಡಲಾಗಿತ್ತು. ಈ ವೇಳೆ ಅನೇಕರು ಅಶ್ವಿನಿ ಗೌಡ ಹೆಸರನ್ನು ತೆಗೆದುಕೊಂಡರು.
ಮೊದಲಾಗಿದ್ದರೆ ಹೆಸರು ತೆಗೆದುಕೊಳ್ಳುತ್ತಿದ್ದಂತೆ ಅಶ್ವಿನಿ ಗೌಡ ಅವರು ಸಿಟ್ಟಾಗುತ್ತಿದ್ದರು. ಯಾರು ಏನೇ ಆರೋಪ ಮಾಡಿದರೂ ಅದಕ್ಕೆ ತಿರುಗೇಟು ಕೊಡುತ್ತಿದ್ದರು. ಆದರೆ, ಅಶ್ವಿನಿ ಗೌಡ ಈಗ ಬದಲಾದರೇ ಎಂಬ ಪ್ರಶ್ನೆ ಮೂಡಿದೆ. ನವೆಂಬರ್ 10ರ ಎಪಿಸೋಡ್ನಲ್ಲಿ ಅವರು ಬಹುತೇಕ ಸಂದರ್ಭದಲ್ಲಿ ಮೌನವಾಗೇ ಇದ್ದರು. ಏನೇ ಹೇಳಿದರೂ ನಗುತ್ತಾ ಸ್ವೀಕರಿಸಿದ್ದರು. ಈ ಬದಲಾವಣೆ ಸಾಕಷ್ಟು ಜನರಿಗೆ ಅಚ್ಚರಿ ತಂದಿದೆ.
ಸೋಮವಾರದ ಚಟುವಟಿಕೆ ನಡೆಯುವಾಗ ಅಶ್ವಿನಿ ಗೌಡ ಹೆಸರನ್ನು ಅನೇಕರು ತೆಗೆದುಕೊಂಡರು. ಈ ವಿಚಾರವಾಗಿ ಮಾತನಾಡಿದ್ದ ಗಿಲ್ಲಿ, ‘ಅಶ್ವಿನಿ ಗೌಡ ಸೈಲೆಂಟ್ ಆಗಿದ್ದಾರೆ. ಯಾವುದಕ್ಕೂ ಏನನ್ನೂ ಹೇಳುತ್ತಿಲ್ಲ. ಹೀಗಾಗಿಯೇ ಅನೇಕರು ಅಶ್ವಿನಿ ಹೆಸರು ತೆಗೆದುಕೊಳ್ಳುತ್ತಿದ್ದಾರೆ’ ಎಂದಿದ್ದರು. ಅಶ್ವಿನಿ ಸೈಲೆಂಟ್ ಆಗಿದ್ದಾರೆ ಎಂಬುದು ವೀಕ್ಷಕರ ಗಮನಕ್ಕೆ ಮಾತ್ರವಲ್ಲ, ಗಿಲ್ಲಿ ಗಮನಕ್ಕೂ ಬಂದಿದೆ ಎಂಬುದಕ್ಕೆ ಇದುವೇ ಸಾಕ್ಷಿ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಫುಲ್ ಸೈಲೆಂಟ್ ಆದ ಅಶ್ವಿನಿ ಗೌಡ
ಅಶ್ವಿನಿ ಗೌಡ ಅವರು ಕಳೆದ ವಾರ ಸುದೀಪ್ ಅವರಿಂದ ಸರಿಯಾಗಿ ಪಾಠ ಹೇಳಿಸಿಕೊಂಡಿದ್ದರು. ಒಂದಿಡೀ ಎಪಿಸೋಡ್ ಬಹುತೇಕ ಅವರ ಮೇಲೆ ಸಾಗಿತ್ತು ಎಂದರೂ ತಪ್ಪಾಗಲಾರದು. ಈ ತಪ್ಪು ಮತ್ತೆ ಆಗಬಾರದು ಎಂಬ ಕಾರಣಕ್ಕೆ ಅವರು ಸೈಲೆಂಟ್ ಆದರೇ ಎಂಬ ಪ್ರಶ್ನೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:50 pm, Tue, 11 November 25