
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಅಶ್ವಿನಿ ಗೌಡ (Ashwini Gowda) ಅವರ ಒಂದೊಂದೇ ಮುಖ ಕಳಚುತ್ತಿದೆ. ತಾವು ಒಳ್ಳೆಯವರಂತೆ ತೋರಿಸಿಕೊಳ್ಳಬೇಕು ಎಂದು ಸಾಕಷ್ಟು ಪ್ರಯತ್ನಿಸಿದರೂ ಅದು ಸಾಧ್ಯವಾಗುತ್ತಿಲ್ಲ. ಈಗ ಅವರು ತೀರಾನೆ ಕೆಳ ಹಂತಕ್ಕೆ ಹೋಗಿದ್ದಾರೆ ಎಂಬ ಮಾತು ವ್ಯಕ್ತವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಅಶ್ವಿನಿ ಕಡೆಯಿಂದಲೇ ಸ್ಪಷ್ಟನೆ ಸಿಗಬೇಕಿದೆ.
ಅಶ್ವಿನಿ ಗೌಡ ಅವರಿಗೆ ರಿವೇಂಜ್ ತೆಗೆದುಕೊಳ್ಳೋದು ಎಂದರೆ ಎಲ್ಲಿಲ್ಲದ ಖುಷಿ. ಕಳೆದ ವಾರ ರಕ್ಷಿತಾ ಶೆಟ್ಟಿ ಅವರ ಮೇಲೆ ಆಪಾದನೆ ಹೊರಿಸಿ, ಅವರನ್ನು ಕೆಟ್ಟವರು ಎಂದು ಬಣ್ಣಿಸುವ ಪ್ರಯತ್ನ ಮಾಡಿದ್ದರು. ಆದರೆ, ಇದು ಅವರಿಗೆ ಉಲ್ಟಾ ಹೊಡೆಯಿತು. ಸುದೀಪ್ ಅವರು ಅಶ್ವಿನಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡರು. ಆದಾಗ್ಯೂ ಅಶ್ವಿನಿ ಗೌಡ ಅವರು ಬದಲಾದಂತೆ ಕಾಣುತ್ತಿಲ್ಲ.
ಈ ವಾರವೂ ಅವರು ತಮ್ಮ ಚಾಳಿ ಮುಂದುವರಿಸಿದ್ದಾರೆ. ಗೊತ್ತಿದ್ದೇ ನಿಯಮ ಮುರಿಯೋದು, ಬೇರೆಯವರನ್ನು ಏಕವಚನದಲ್ಲಿ ಮಾತನಾಡಿಸೋದು ಮತ್ತು ಬೇರೆಯವರು ತಮ್ಮನ್ನು ಏಕವಚನದಲ್ಲಿ ಮಾತನಾಡಿಸಿದಾಗ ಕೋಪಗೊಳ್ಳೋದು ಇತ್ಯಾದಿಗಳು ನಡೆದೇ ಇದ್ದವು. ಆದರೆ, ಈ ಮಧ್ಯೆ ಅವರು ಮಾಡಿದ ಒಂದು ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.
This is insane.
ವಿನಾಶ ಕಾಲೇ ವಿಪರೀತ ಬುದ್ಧಿ #BBK12pic.twitter.com/bCrUEb3zXX
— ಅಲ್ಪಸಂಖ್ಯಾತ (@alpasankhyata) October 24, 2025
ಅಶ್ವಿನಿ ಗೌಡ ಅವರಿಗೆ ರಘು ಗೌಡ ಅವರು ಕಳಪೆ ನೀಡಿದರು. ಇದರಿಂದ ಅಶ್ವಿನಿ ಗೌಡ ಸಿಟ್ಟಾದರು. ಆ ಬಳಿಕ ಅವರು ಪದೇ ಪದೇ ಟಾಯ್ಲೆಟ್ ಹೋಗೋ ಬಗ್ಗೆ ಬೇಡಿಕೆ ಇಟ್ಟರು. ಹೀಗೆ ಟಾಯ್ಲೆಟ್ ಹೋದ ಸಂದರ್ಭದಲ್ಲಿ ಅವರು ಇತರ ಸ್ಪರ್ಧಿಗಳ ಹಲ್ಲುಜ್ಜುವ ಬ್ರೆಶ್ಗಳನ್ನು ಒಟ್ಟುಗೂಡಿಸಿಕೊಂಡು ಟಾಯ್ಲೆಟ್‌ಗೆ ಹೋಗಿದ್ದಾರೆ. ಈ ವಿಚಾರ ಚರ್ಚೆಗೆ ಕಾರಣ ಆಗಿದೆ.
ಇದನ್ನೂ ಓದಿ: ‘ನಂಗೂ ನಿನ್ನ ಪಂಚೆ ಎಳೆಯೋಕೆ ಬರುತ್ತೆ, ಥೂ’; ಗಿಲ್ಲಿ ವಿರುದ್ಧ ಕೀಳು ಮಟ್ಟಕ್ಕೆ ಇಳಿದ ಅಶ್ವಿನಿ
‘ಅಶ್ವಿನಿ ಗೌಡ ಅವರು ಇತರ ಸ್ಪರ್ಧಿಗಳ ಬ್ರೆಶ್ ಅಲ್ಲಿ ಟಾಯ್ಲೆಟ್ ಕ್ಲೀನ್ ಮಾಡಿದ್ದಾರೆ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು, ಅಶ್ವಿನಿ ಗೌಡ ಟಾಯ್ಲೆಟ್ನಲ್ಲಿ ಇದನ್ನು ಬಚ್ಚಿಟ್ಟಿರಬಹುದು ಎಂದಿದ್ದಾರೆ. ಈ ಬಗ್ಗೆ ಅವರೇ ಸ್ಪಷ್ಟನೆ ನೀಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.