BBK 11 Elimination: ಎಲಿಮಿನೇಟ್ ಆದ ಶಿಶಿರ್​; ಐಶ್ವರ್ಯಾ ಜತೆಗಿನ ಸಂಬಂಧಕ್ಕೆ ಸ್ಪಷ್ಟನೆ ನೀಡಿದ ನಟ

|

Updated on: Dec 15, 2024 | 11:05 PM

ಗೆಲ್ಲುವ ಸ್ಪರ್ಧಿ ಎಂದುಕೊಂಡಿದ್ದ ಶಿಶಿರ್​ ಅವರು ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್​ ಆಗಿದ್ದಾರೆ. ಡೇಂಜರ್​ ಝೋನ್​ನಲ್ಲಿ ಭವ್ಯಾ ಮತ್ತು ಶಿಶಿರ್​ ಇದ್ದರು. ಅಂತಿಮವಾಗಿ ಶಿಶಿರ್​ ಅವರ ಆಟ ಅಂತ್ಯ ಆಗಿದೆ. ಶಿಶಿರ್​ ಎಲಿಮಿನೇಟ್​ ಆಗಿದ್ದಕ್ಕೆ ಅವರ ಅಭಿಮಾನಿಗಳಿಗೆ ಬೇಸರ ಆಗಿದೆ. ಇನ್ನುಳಿದ ಸ್ಪರ್ಧಿಗಳು ಭಾವುಕವಾಗಿ ವಿದಾಯ ಹೇಳಿದ್ದಾರೆ.

BBK 11 Elimination: ಎಲಿಮಿನೇಟ್ ಆದ ಶಿಶಿರ್​; ಐಶ್ವರ್ಯಾ ಜತೆಗಿನ ಸಂಬಂಧಕ್ಕೆ ಸ್ಪಷ್ಟನೆ ನೀಡಿದ ನಟ
ಶಿಶಿರ್​, ಐಶ್ವರ್ಯಾ, ಮೋಕ್ಷಿತಾ
Follow us on

‘ಬಿಗ್ ಬಾಸ್ ಕನ್ನಡ ಸೀಸನ್​ 11’ ಶೋನಲ್ಲಿ ಈ ವಾರ ಶಿಶಿರ್​ ಅವರ ಆಟ ಅಂತ್ಯವಾಗಿದೆ. ಟ್ರೋಫಿ ಗೆಲ್ಲುವ ಆತ್ಮವಿಶ್ವಾಸ ಹೊಂದಿದ್ದ ಅವರಿಗೆ ಆಘಾತ ಆಗಿದೆ. ಶಿಶಿರ್​ ಎಲಿಮಿನೇಟ್​ ಆಗಿದ್ದಕ್ಕೆ ಖಂಡಿತವಾಗಿಯೂ ಅವರ ಅಭಿಮಾನಿಗಳಿಗೆ ಬೇಸರವಾಗಿದೆ. ಶಿಶಿರ್​ ಜೊತೆ ಭವ್ಯಾ ಗೌಡ ಕೂಡ ಡೇಂಜರ್​ ಝೋನ್​ ತಲುಪಿದ್ದರು. ಇಬ್ಬರಲ್ಲಿ ಯಾರು ಎಲಿಮಿನೇಟ್​ ಆಗಬಹುದು ಎಂಬ ಕೌತುಕ ಮೂಡಿತ್ತು. ಶಿಶಿರ್​ ಅವರಿಗೆ ಪ್ರೇಕ್ಷಕರಿಂದ ಕಡಿಮೆ ವೋಟ್ ಬಂದಿದ್ದರಿಂದ ಅವರು ದೊಡ್ಮನೆಯಿಂದ ಹೊರಗೆ ಬರಬೇಕಾಯಿತು. ಬಿಗ್ ಬಾಸ್​ ಮನೆಯಿಂದ ಅವರು ಎಮೋಷನಲ್​ ಆಗಿ ಹೊರಗೆ ಬಂದಿದ್ದಾರೆ.

ದೊಡ್ಮನೆಯಿಂದ ಹೊರಗೆ ಬರುವುದಕ್ಕೂ ಮುನ್ನ ಶಿಶಿರ್​ ಅವರು ಎಲ್ಲರನ್ನು ಉದ್ದೇಶಿಸಿ ಮಾತನಾಡಿದರು. ಆ ಮನೆಯಲ್ಲಿ ಹುಟ್ಟಿಕೊಂಡ ಕೆಲವು ಸಂಬಂಧಗಳ ಬಗ್ಗೆ ಶಿಶಿರ್​ ಸ್ಪಷ್ಟನೆ ನೀಡಿದರು. ಉಗ್ರಂ ಮಂಜು, ಚೈತ್ರಾ ಕುಂದಾಪುರ, ಐಶ್ವರ್ಯಾ ಸಿಂಧೋಗಿ ಬಗ್ಗೆ ಅವರು ಕೆಲವು ಮಾತುಗಳನ್ನು ಹೇಳಿ ಮುಖ್ಯದ್ವಾರದ ಮೂಲಕ ಹೊರನಡೆದರು.

‘ಸಂಬಂಧ, ಬಾಂಧವ್ಯ ಇಲ್ಲಿ ವರ್ಕ್​ ಆಗಲ್ಲ ಅಂತ ಸುದೀಪ್ ಹೇಳಿದ್ದರು. ಆದರೂ ಸಂಬಂಧ ಸೃಷ್ಟಿ ಆಗಿವೆ. ಮಂಜುಗೆ ಅಣ್ಣನ ಸ್ಥಾನ ನೀಡಿದ್ದೇನೆ. ಚೈತ್ರಾನ ಮೊದಲ ದಿನವೇ ತಂಗಿ ಅಂತ ಒಪ್ಪಿಕೊಂಡೆ, ಅದು ಕೊನೆ ತನಕ ಇರಲಿದೆ. ಐಶ್ವರ್ಯಾ ಜೊತೆ ನನಗೆ ಇರುವುದು ನಿಶ್ಕಲ್ಮಶ ಸ್ನೇಹ. ಅದು ಮುಂದುವರಿಯುತ್ತದೆ. ಎಲ್ಲರನ್ನೂ ಮಿಸ್ ಮಾಡಿಕೊಳ್ಳುತ್ತೇನೆ’ ಎಂದು ಶಿಶಿರ್​ ಅವರು ಹೇಳಿದರು.

ಇದನ್ನೂ ಓದಿ: ಕುಟುಂಬದಲ್ಲಿ ತುರ್ತು ಪರಿಸ್ಥಿತಿ; ಬಿಗ್ ಬಾಸ್​ನಿಂದ ಹೊರಬಂದ ಗೋಲ್ಡ್ ಸುರೇಶ್

‘ಖಂಡಿತಾ ಇದನ್ನು ನಿರೀಕ್ಷಿಸಿರಲಿಲ್ಲ. ಈ ವಾರ ಚೆನ್ನಾಗಿ ಆಡಿದ್ದೆ. ನನಗೆ ಆರೋಗ್ಯ ಸಮಸ್ಯೆ ಹೆಚ್ಚುತ್ತ ಹೋಯಿತು. ದೈಹಿಕವಾಗಿ ನಾನು ವೀಕ್ ಆಗಿದ್ದೆ. ಮಾನಸಿಕವಾಗಿ ಗಟ್ಟಿಯಾಗಿದ್ದೆ. ಕೆಲವು ವಿಷಯ ತಪ್ಪಾಯಿತು ಎನಿಸಿತು’ ಎಂದು ಶಿಶಿರ್ ಅವರು ತಮ್ಮ ಸೋಲಿಗೆ ಕಾರಣಗಳನ್ನು ಹೇಳಿದರು. ‘ಅವನು ಮನೆಯಲ್ಲಿ ಸೈಲೆಂಟ್​ ಆಗಿದ್ದ. ಅದು ಇಷ್ಟ ಆಗಲಿಲ್ಲ’ ಎಂದು ಶಿಶಿರ್​ ಅವರ ತಾಯಿ ಹೇಳಿದರು. ‘ಶಿಶಿರ್​ ತುಂಬ ಘನತೆಯಿಂದ ಆಟ ಆಡಿದರು’ ಎಂದು ಸುದೀಪ್​ ಹೊಗಳಿದರು.

ಶಿಶಿರ್​ ಎಲಿಮಿನೇಟ್ ಆದ ಬಳಿಕ ಭವ್ಯಾ ಅವರು ಸುದೀಪ್ ಬಳಿ ಒಂದು ವಿಶೇಷ ಬೇಡಿಕೆ ಇಟ್ಟರು. ಪ್ರತಿ ವಾರ ಸುದೀಪ್ ಅವರು ತಪ್ಪದೇ ಕಿಚ್ಚನ ಚಪ್ಪಾಳೆ ನೀಡಬೇಕು ಎಂದು ಅವರು ಮನವಿ ಮಾಡಿಕೊಂಡರು. ಆ ಬಗ್ಗೆ ಯೋಚನೆ ಮಾಡುವುದಾಗಿ ಸುದೀಪ್ ಭರವಸೆ ನೀಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.