ಬಿಗ್ ಬಾಸ್ ಎಲಿಮಿನೇಷನ್​​ನಲ್ಲಿ ಈ ವಾರ ಇರಲಿದೆ ದೊಡ್ಡ ಟ್ವಿಸ್ಟ್

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಅನಿರೀಕ್ಷಿತ ಟ್ವಿಸ್ಟ್‌ಗಳು ಮುಂದುವರಿದಿವೆ. ರಜತ್ ಮತ್ತು ಚೈತ್ರಾ ವೈಲ್ಡ್ ಕಾರ್ಡ್ ಆಗಿ ಪ್ರವೇಶಿಸಿದ್ದಾರೆ. ಇದಾದ ಬಳಿಕ ಆಟದ ಸ್ಟೈಲ್ ಚೇಂಜ್ ಆಗಿದೆ. ಈ ವಾರ ಎಲಿಮಿನೇಷನ್ ಇಲ್ಲ ಎನ್ನಲಾಗುತ್ತಿದೆ. ನಾಮಿನೇಟ್ ಆದ ಘಟಾನುಘಟಿಗಳು ಸೇಫ್ ಆಗಲಿದ್ದಾರೆ.

ಬಿಗ್ ಬಾಸ್ ಎಲಿಮಿನೇಷನ್​​ನಲ್ಲಿ ಈ ವಾರ ಇರಲಿದೆ ದೊಡ್ಡ ಟ್ವಿಸ್ಟ್
ಬಿಗ್ ಬಾಸ್

Updated on: Dec 13, 2025 | 12:23 PM

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ (BBK 12) ಯಾರೂ ಊಹಿಸದ ಒಂದಷ್ಟು ಟ್ವಿಸ್ಟ್​ಗಳನ್ನು ಇಡುವ ಕೆಲಸವನ್ನು ಮಾಡುತ್ತಿದ್ದಾರೆ. 58ನೇ ದಿನಕ್ಕೆ ರಜತ್ ಹಾಗೂ ಚೈತ್ರಾ ಅವರು ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟರು. ಇವರು ಅದ್ಭುತವಾಗಿ ಆಟ ಆಡುತ್ತಿದ್ದಾರೆ. ಈ ವಾರ ಎಲಿಮಿನೇಷನ್​ ಅಲ್ಲಿ ದೊಡ್ಡ ಟ್ವಿಸ್ಟ್ ಒಂದನ್ನು ಕೊಡಲು ಬಿಗ್ ಬಾಸ್ ರೆಡಿ ಆಗಿದ್ದಾರೆ ಎನ್ನಲಾಗಿದೆ. ಈ ವಿಷಯ ಕುತೂಹಲ ಮೂಡಿಸಿದೆ.

ಈ ವಾರ ಘಟಾನುಘಟಿಗಳೇ ನಾಮಿನೇಟ್ ಆಗಿದ್ದಾರೆ. ಗಿಲ್ಲಿ ನಟ, ರಜತ್, ಧ್ರುವಂತ್, ರಕ್ಷಿತಾ ಶೆಟ್ಟಿ, ಸ್ಪಂದನಾ ಸೋಮಣ್ಣ, ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ ನಾಮಿನೇಷನ್ ಸ್ಥಾನದಲ್ಲಿ ಇದ್ದಾರೆ. 7 ಮಂದಿ ಪೈಕಿ ಯಾರು ಹೊರ ಹೋಗುತ್ತಾರೆ ಎನ್ನುವ ಕುತೂಹಲ ಮೂಡಿದೆ. ಈ ಕುತೂಹಲಕ್ಕೆ ಹೊರಗಿದ್ದವರಿಗೆ ಉತ್ತರ ಸಿಕ್ಕಿದೆ. ಈ ವಾರ ವೋಟಿಂಗ್ ಲೈನ್ ತೆರೆದಿಲ್ಲ. ಹೀಗಾಗಿ ನಾಮಿನೇಟ್ ಆದವರು ಹೊರ ಹೋಗೋದಿಲ್ಲ ಎಂದು ಸ್ಪಷ್ಟವಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ವದಂತಿ ಕೂಡ ಹಬ್ಬಿದೆ. ರಜತ್ ಹಾಗೂ ಚೈತ್ರಾ ಕುಂದಾಪುರ ಅವರು ಸ್ಪರ್ಧಿಗಳಲ್ಲ, ಅತಿಥಿಗಳು ಎಂಬ ಮಾತುಗಳು ಕೇಳಿ ಬಂದಿವೆ. ಹೀಗಾಗಿ, ಅವರನ್ನು ಹೊರಕ್ಕೆ ಕಳಿಸುವ ಕೆಲಸ ಈ ವಾರ ಆಗುತ್ತದೆ ಎಂಬ ಮಾತೂ ಇದೆ. ಅಂದಹಾಗೆ, ಕಳೆದ ವಾರ ಕೂಡ ಇದೇ ರೀತಿ ಸುದ್ದಿ ಹಬ್ಬಿತ್ತು. ಆದರೆ, ಅದು ನಿಜವಾಗಿಲ್ಲ. ಈ ವಾರ ಏನಾಗುತ್ತದೆ ಎಂಬ ಕುತೂಹಲ ಮೂಡಿದೆ.

ಇದನ್ನೂ ಓದಿ: ಬಿಗ್ ಬಾಸ್ ಮೇಲಿನ ಪ್ರೀತಿಗೆ ಶಾಶ್ವತವಾಗಿ ಹಚ್ಚೆ ಹಾಕಿಸಿಕೊಂಡ ರಜತ್

ಈ ಸೀಸನ್​ ಅಲ್ಲಿ ಒಂದು ಬಾರಿ ಮಾತ್ರ ಫೇಕ್ ಎಲಿಮಿನೇಷನ್ ಮಾಡಲಾಗಿದೆ. ಅದು ಈ ಬಾರಿಯೂ ಅದು ಮುಂದುವರಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಕೆಲವರನ್ನು ಕೊನೆಯವರಿಗೆ ಕರೆದುಕೊಂಡು ಬಂದು ಫೇಕ್ ಎಲಿಮಿನೇಷನ್ ಎಂದು ಘೋಷಿಸುವ ಸಾಧ್ಯತೆ ಇರುತ್ತದೆ. ಜನವರಿಯಲ್ಲಿ ಫಿನಾಲೆ ನಡೆಯುವ ಸಾಧ್ಯತೆ ಇದೆಯಂತೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:17 pm, Sat, 13 December 25