ಫಿನಾಲೆಗೆ ಮೂರು ವಾರ ಇರುವಾಗ ತ್ರಿವಿಕ್ರಂ ಅವರಿಗೆ ಜ್ಞಾನೋದಯ ಆಗಿದೆ. ನಾನು ಒಂಟಿಯಾಗಿ ಆಟ ಆಡಿ ಕಪ್ ಗೆಲ್ಲಬೇಕು ಎಂಬ ಹಠಕ್ಕೆ ಅವರು ಬಂದಿದ್ದಾರೆ. ಇದಕ್ಕೆಲ್ಲ ಕಾರಣ ಆಗಿದ್ದು ಫ್ಯಾಮಿಲಿ ವಾರ. ತ್ರಿವಿಕ್ರಂ ತಾಯಿ ಆಗಮಿಸಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಭವ್ಯಾ ಅವರು ಸ್ವಾರ್ಥ ತೋರಿಸುತ್ತಿದ್ದಾರೆ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ತ್ರಿವಿಕ್ರಂ ಅವರು ಭವ್ಯಾನಿಂದ ದೂರ ಆಗುವ ಪ್ರಯತ್ನದಲ್ಲಿ ಇದ್ದಾರೆ. ಈ ಮಧ್ಯೆ ಅವರು ಆಡಿದ ಮಾತೊಂದು ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ.
ಭವ್ಯಾ ಗೌಡ ಹಾಗೂ ತ್ರಿವಿಕ್ರಂ ಮಧ್ಯೆ ಒಳ್ಳೆಯ ಬಾಂಧವ್ಯ ಇತ್ತು. ಇಬ್ಬರೂ ಒಟ್ಟಾಗಿ ಸಮಯ ಕಳೆಯುತ್ತಿದ್ದರು. ಒಬ್ಬರ ನೆರಳು ಒಬ್ಬರ ಮೇಲೆ ಇತ್ತು. ಇತ್ತೀಚೆಗೆ ಕುಟುಂಬದವರು ಬಂದಾಗ ತ್ರಿವಿಕ್ರಂನ ತಿದ್ದುವ ಕೆಲಸ ಆಗಿತ್ತು. ಅಲ್ಲದೆ, ಸುದೀಪ್ ಕಡೆಯಿಂದಲೂ ಈ ವಿಚಾರವಾಗಿ ಸಾಕಷ್ಟು ಸಲಹೆಗಳು ಸಿಕ್ಕಿದ್ದವು. ಈಗ ತ್ರಿವಿಕ್ರಂ ಅವರು ಇದನ್ನು ಅಳವಡಿಸಿಕೊಂಡಿದ್ದಾರೆ.
ಭವ್ಯಾ ಬಳಿ ಆದಷ್ಟು ಕಟುವಾಗಿ ನಡೆದುಕೊಳ್ಳುವ ಪ್ರಯತ್ನದಲ್ಲಿ ತ್ರಿವಿಕ್ರಂ ಇದ್ದಾರೆ. ಇದನ್ನು ಅವರು ನೇರವಾಗಿ ಹೇಳುವ ಕೆಲಸವನ್ನೂ ಮಾಡಿದ್ದಾರೆ. ಇದು ಭವ್ಯಾಗೆ ಬೇಸರ ಮೂಡಿಸಿದೆ. ಆದರೆ, ಕಲ್ಲು ಹೃದಯ ಮಾಡಿಕೊಂಡು ತ್ರಿವಿಕ್ರಂ ನಿರ್ಧಾರದಿಂದ ಹಿಂದೆ ಸರಿಯುತ್ತಿಲ್ಲ. ಹಾಗಾದರೆ ಭವ್ಯಾ ಇಲ್ಲಿಯವರೆಗೆ ಬರೋಕೆ ತ್ರಿವಿಕ್ರಂ ಅವರು ಕಾರಣವಾ? ಹೀಗೊಂದು ಪ್ರಶ್ನೆ ಹುಟ್ಟುಹಾಕುವಂಥ ಮಾತು ಅವರ ಕಡೆಯಿಂದ ಬಂದಿದೆ.
ತ್ರಿವಿಕ್ರಂ ಹಾಗೂ ರಜತ್ ಅವರು ಕುಳಿತು ಮಾತನಾಡುತ್ತಿದ್ದರು. ‘ಮನೆಗೆ ಬಂದು ಕಾಂಪಿಟೇಟರ್ನ ರೆಡಿ ಮಾಡಿ ಅಪೋಸಿಟ್ ಬಿಟ್ಟುಕೊಂಡಂತೆ ಆಯಿತು’ ಎಂದರು ತ್ರಿವಿಕ್ರಂ. ಅಂದರೆ, ಭವ್ಯಾನ ಒಳ್ಳೆಯ ಎದುರಾಳಿಯನ್ನಾಗಿ ಮಾಡಿ ಈಗ ಅವರ ಎದುರೇ ನಿಲ್ಲುವಂತೆ ಮಾಡಿದ್ದು ಎಂಬುದು ಇದರ ಅರ್ಥ ಎಂದು ಅನೇಕರು ಹೇಳಿದ್ದಾರೆ. ‘ನನ್ನ ಜೊತೆ ಇರುವುದಕ್ಕೆ ಭವ್ಯಾ ಇಲ್ಲಿಯವರೆಗೆ ಬಂದಿದ್ದಾರೆ ಎಂಬುದು ತ್ರಿವಿಕ್ರಂ ಯೋಚನೆ’ ಎಂಬ ಅರ್ಥವನ್ನೂ ಕೆಲವರು ಹುಡುಕಿದ್ದಾರೆ.
ಇದನ್ನೂ ಓದಿ: ‘ರಾಮರಸ’ ಚಿತ್ರದಲ್ಲಿ ಮಿಂಚಲು ಬಂದ ‘ಅಧ್ಯಕ್ಷ’ ಸುಂದರಿ ಹೆಬಾ ಪಟೇಲ್
ಬಿಗ್ ಬಾಸ್ನಲ್ಲಿ ಸದ್ಯ 9 ಸ್ಪರ್ಧಿಗಳು ಇದ್ದಾರೆ. ಐ ಪೈಕಿ ಫಿನಾಲೆ ತಲುಪೋದು ಐವರು ಮಾತ್ರ. ಆ ಸ್ಥಾನಕ್ಕೆ ಯಾರು ಬರುತ್ತಾರೆ ಎನ್ನುವ ಕುತೂಹಲ ಮೂಡಿದೆ. ಸದ್ಯ ಫಿನಾಲೆ ಟಿಕೆಟ್ ಟಾಸ್ಕ್ ಕೂಡ ನಡೆಯುತ್ತಿದ್ದು, ಒಬ್ಬರಿಗೆ ಟಿಕೆಟ್ ಸಿಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.