ಗಿಲ್ಲಿ ಜೊತೆಗಿನ ಗೆಳೆತನಕ್ಕಾಗಿ ಫಿನಾಲೆ ಚಾನ್ಸ್ ತ್ಯಾಗ ಮಾಡಿದ ಚಂದ್ರಪ್ರಭ?

ಬಿಗ್ ಬಾಸ್ ಮನೆಯಲ್ಲಿ ಸಂಬಂಧಗಳಿಗಿಂತ ಆಟ ಮುಖ್ಯ ಎಂಬುದು ಸ್ಪಷ್ಟ. ಆದರೆ, ಚಂದ್ರಪ್ರಭ ಅವರು ಗಿಲ್ಲಿಯೊಂದಿಗಿನ ಆರು ವರ್ಷಗಳ ಗೆಳೆತನಕ್ಕಾಗಿ ತಮ್ಮ ಆಟವನ್ನು ತ್ಯಾಗ ಮಾಡಿದ್ದಾರೆ. ಮೂರನೇ ವಾರವೇ ಎಲಿಮಿನೇಷನ್ ಭೀತಿ ಇರುವಾಗ, ಈ ನಿರ್ಧಾರ ಸರಿಯೇ? ಗೆಳೆತನದ ಬೆಲೆ ತೆತ್ತು ಚಂದ್ರಪ್ರಭ ತಪ್ಪು ಮಾಡಿದರೇ ಎಂಬ ಚರ್ಚೆ ಶುರುವಾಗಿದೆ.

ಗಿಲ್ಲಿ ಜೊತೆಗಿನ ಗೆಳೆತನಕ್ಕಾಗಿ ಫಿನಾಲೆ ಚಾನ್ಸ್ ತ್ಯಾಗ ಮಾಡಿದ ಚಂದ್ರಪ್ರಭ?
ಗಿಲ್ಲಿ ನಟ-ಚಂದ್ರಪ್ರಭ

Updated on: Oct 15, 2025 | 7:39 AM

ಬಿಗ್ ಬಾಸ್ ಮನೆಯಲ್ಲಿ ಗೆಳೆತನ, ಪ್ರೀತಿ-ಪ್ರೇಮ, ಅಕ್ಕ-ತಂಗಿ ಬಾಂಧವ್ಯ ಹೀಗೆ ಯಾವ ಸಂಬಂಧಗಳೂ ಕೆಲಸಕ್ಕೆ ಬರೋದಿಲ್ಲ. ಅಲ್ಲೇನಿದ್ದರೂ ಆಟ ಆಡಬೇಕು, ಗೆಲ್ಲಬೇಕು. ಜನರಿಗೆ ನಿಮ್ಮ ಆಟ ಇಷ್ಟ ಆದರೆ ಮಾತ್ರ ನಿಮಗೆ ಹೆಚ್ಚು ವೋಟ್ ಬೀಳುತ್ತದೆ. ಅಲ್ಲಿ ಸಂಬಂಧಗಳಿಗೆ ಹೆಚ್ಚು ಬೆಲೆ ಕೊಟ್ಟರೆ ಮುಂದೊಂದು ದಿನ ಅದು ಅವರದ್ದೇ ಆಟವನ್ನು ನುಂಗಿಹಾಕಿ ಬಿಡುತ್ತದೆ. ಹೀಗಿದ್ದರೂ ಚಂದ್ರಪ್ರಭ ತಪ್ಪೊಂದು ಮಾಡಿದ್ದಾರೆ. ಇದು ಚರ್ಚೆಗೆ ಗ್ರಾಸವಾಗಿದೆ.

ಬಿಗ್ ಬಾಸ್​ನಲ್ಲಿ ಮೂರನೇ ವಾರವೇ ಒಂದು ಫಿನಾಲೆ ನಡೆಯುತ್ತಿದೆ. ಈ ಫಿನಾಲೆಯಲ್ಲಿ ಒಂದಷ್ಟು ಮಂದಿ ಔಟ್ ಆಗೋದು ಪಕ್ಕಾ. ಈಗಾಗಲೇ ಕಾಕ್ರೋಚ್ ಸುಧಿ, ಅಶ್ವಿನಿ ಗೌಡ, ಸ್ಪಂದನಾ ಸೋಮಣ್ಣ, ಮಾಳು ಫಿನಾಲೆ ತಲುಪಿದ್ದಾರೆ. ಉಳಿದ ಸ್ಪರ್ಧಿಗಳಿಗೆ ಫಿನಾಲೆ ತಲುಪಲು ಬಿಗ್ ಬಾಸ್ ಅವಕಾಶ ಒಂದನ್ನು ಮಾಡಿಕೊಟ್ಟಿದ್ದಾರೆ. ಈ ವೇಳೆ ಚಂದ್ರಪ್ರಭ ಅವರು ಗಿಲ್ಲಿ ನಟನಿಗಾಗಿ ಆಟ ತೊರೆದರೇ ಎನ್ನುವ ಪ್ರಶ್ನೆ ಮೂಡಿದೆ.

ಮ್ಯೂಸಿಕ್ ಚೇರ್ ಮಾದರಿಯಲ್ಲೇ ಒಂದು ಟಾಸ್ಕ್ ನೀಡಲಾಗಿತ್ತು. ಎಂಟು ಸ್ಪರ್ಧಿಗಳು ರೇಸ್​​ನಲ್ಲಿ ಇದ್ದರು. ಅಲ್ಲಿ ಇರೋದು ಐದು ಬಾಲ್. ಯಾರು ಬಾಲ್ ಕಲೆಕ್ಟ್ ಮಾಡಿಕೊಳ್ಳುತ್ತಾರೋ ಅವರು ಮುಂದಿನ ಆಟಕ್ಕೆ ಆಯ್ಕೆ ಆಗುತ್ತಾರೆ. ಬಾಲ್ ಸಿಗದ ಮೂವರು ಎಲಿಮಿನೇಟ್ ಆಗುತ್ತಾರೆ.

ಇದನ್ನೂ ಓದಿ
ಮಂಗಳವಾರವೂ ‘ಕಾಂತಾರ: ಚಾಪ್ಟರ್ 1’ ಅಧಿಕ ಕಲೆಕ್ಷನ್; 500 ಕೋಟಿ ಇನ್ನೂ ಸನಿಹ
ಸ್ಪರ್ಧಿಗಳಿಗೆ ಕೊನೆಯ ಅವಕಾಶ ಕೊಟ್ಟ ‘ಬಿಗ್ ಬಾಸ್​’; ಮಾಡು ಇಲ್ಲವೇ ಮಡಿ
‘ಕಾಂತಾರ: ಚಾಪ್ಟರ್ 2’ ಯಾವಾಗ? ಕೊನೆಗೂ ಉತ್ತರಿಸಿದ ರಿಷಬ್ ಶೆಟ್ಟಿ
ದಂಡಿಗೆ ಹೆದರಲಿಲ್ಲ, ದಾಳಿಗೆ ಹೆದರಲಿಲ್ಲ, ಕಾವ್ಯಾ ಕಣ್ಣಿಗೆ ಹೆದರಿದ ಗಿಲ್ಲಿ

ಈ ಆಟದಲ್ಲಿ ಕೊನೆಯದಾಗಿ ಒಂದು ಬಾಲ್ ಉಳಿದುಕೊಂಡಿತ್ತು. ಜಾನ್ವಿ, ರಕ್ಷಿತಾ ಶೆಟ್ಟಿ, ಚಂದ್ರಪ್ರಭ ಹಾಗೂ ಗಿಲ್ಲಿ ನಟ ರೇಸ್​ನಲ್ಲಿ ಇದ್ದರು. ಚಂದ್ರಪ್ರಭ ಹಾಗೂ ಗಿಲ್ಲಿ ಬಾಲ್​ಗಾಗಿ ಕಿತ್ತಾಟ ನಡೆಸುತ್ತಿದ್ದರು. ಆಗ ಜಾನ್ವಿ ಹಾಗೂ ರಕ್ಷಿತಾ ಕೂಡ ಇವರ ಜೊತೆ ರೇಸ್​ಗೆ ಇಳಿದರು. ಈ ವೇಳೆ ಚಂದ್ರಪ್ರಭ ಎದುರು ಗಿಲ್ಲಿ ಒಂದು ಬೇಡಿಕೆ ಇಟ್ಟರು.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಅಸಲಿ ಮುಖ ತೋರಿಸಿದ ಕಾವ್ಯ ಶೈವ: ಶಾಕ್ ಆದ ಅಶ್ವಿನಿ

‘ಆರು ವರ್ಷದ ಗೆಳೆತನ. ಚಂದ್ರಣ್ಣ ಇದೊಂದು ತ್ಯಾಗ ಮಾಡು. ನೀನು ಬಿಟ್ಟುಕೊಟ್ಟರೆ ನಾನು ಬಾಲ್​ನ ತೆಗೆದುಕೊಂಡು ಹೋಗುತ್ತೇನೆ’ ಎಂದು ಗಿಲ್ಲಿ ಹೇಳುತ್ತಿದ್ದಂತೆ ಚಂದ್ರಪ್ರಭ ತ್ಯಾಗ ಮಾಡಿಯೇ ಬಿಟ್ಟರು. ರಕ್ಷಿತಾ ಹಾಗೂ ಜಾನ್ವಿಯನ್ನು ದೂಕಿ ಗಿಲ್ಲಿ ಬಾಲ್ ತೆಗೆದುಕೊಂಡು ಗೆದ್ದು, ಮುಂದಿನ ಆಟಕ್ಕೆ ಬಡ್ತಿ ಪಡೆದರು. ಗೆಳೆತನಕ್ಕಾಗಿ ಚಂದ್ರಪ್ರಭಾ ಆಟ ಬಿಟ್ಟುಕೊಟ್ಟರೇ ಎನ್ನುವ ಪ್ರಶ್ನೆ ಅನೇಕರಿಗೆ ಮೂಡಿದೆ. ಇನ್ನೂ ಕೆಲವರು, ಚಂದ್ರಪ್ರಭಾ ಸುಸ್ತಾಗಿದ್ದರಿಂದ ಆಟ ತ್ಯಾಗ ಮಾಡಿದರು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.