ಗೌತಮ್ ಇರುವ ವಠಾರಕ್ಕೇ ಬಂದಳು ಭೂಮಿಕಾ; ಮತ್ತೆ ಒಂದಾದ ಜೋಡಿ
Amruthadhare Kannada serial: ‘ಅಮೃತಧಾರೆ’ ಕನ್ನಡ ಧಾರಾವಾಹಿ ಕತೆ ತುಸು ಬದಲಾಗಿದೆ. ಭೂಮಿಕಾ ಇಷ್ಟು ದಿನ ಕುಶಾಲನಗರದಲ್ಲಿ ಟೀಚರ್ ಆಗಿದ್ದರು. ಈ ವೇಳೆ ಗೌತಮ್ ಅಲ್ಲಿಗೆ ಬಂದ. ಆಕೆಯನ್ನು ಕಂಡು ಹಿಡಿದೇ ಬಿಟ್ಟ. ಈ ವಿಚಾರದಲ್ಲಿ ಆಕೆಗೆ ಬೇಸರ ಇತ್ತು. ಅಲ್ಲದೆ, ಎಂಎಲ್ಎ ಕಡೆಯಿಂದ ತೊಂದರೆ ಆಯಿತು. ಈ ಕಾರಣದಿಂದಲೇ ಅಲ್ಲಿಂದ ಆಕೆ ಬೆಂಗಳೂರಿಗೆ ಬಂದಳು.

‘ಅಮೃತಧಾರೆ’ ಧಾರಾವಾಹಿಯಲ್ಲಿ (Serial) ಕಥೆ ಐದು ವರ್ಷ ಮುಂದಕ್ಕೆ ಹೋಗಿದೆ. ಗೌತಮ್ ಹಾಗೂ ಭೂಮಿಕಾ ಬೇರೆ ಆಗಿದ್ದಾರೆ. ಗೌತಮ್ ಮಲತಾಯಿ ಶಕುಂತಲಾ ಹಾಗೂ ಜಯದೇವ್ ಮಾಡಿದ ಕಿತಾಪತಿಯಿಂದ ಇಬ್ಬರೂ ದೂರ ಆಗುವ ಪರಿಸ್ಥಿತಿ ಬಂತು. ಈಗ ಇವರು ಮತ್ತೆ ಒಂದಾಗುವ ಪರಿಸ್ಥಿತಿ ಬಂದಿದೆ. ಗೌತಮ್ ಇರೋ ವಠಾರಕ್ಕೆ ಭೂಮಿಕಾ ಕೂಡ ಬಂದಿದ್ದಾಳೆ. ಇಬ್ಬರೂ ಮತ್ತೆ ಒಂದಾಗಿದ್ದಾರೆ.
ಭೂಮಿಕಾ ಇಷ್ಟು ದಿನ ಕುಶಾಲನಗರದಲ್ಲಿ ಟೀಚರ್ ಆಗಿದ್ದರು. ಈ ವೇಳೆ ಗೌತಮ್ ಅಲ್ಲಿಗೆ ಬಂದ. ಆಕೆಯನ್ನು ಕಂಡು ಹಿಡಿದೇ ಬಿಟ್ಟ. ಈ ವಿಚಾರದಲ್ಲಿ ಆಕೆಗೆ ಬೇಸರ ಇತ್ತು. ಅಲ್ಲದೆ, ಎಂಎಲ್ಎ ಕಡೆಯಿಂದ ತೊಂದರೆ ಆಯಿತು. ಈ ಕಾರಣದಿಂದಲೇ ಅಲ್ಲಿಂದ ಆಕೆ ಬೆಂಗಳೂರಿಗೆ ಬಂದಳು. ‘ಬೆಂಗಳೂರು ದೊಡ್ಡ ನಗರ. ಹೀಗಾಗಿ, ಇಲ್ಲಿ ಸುಲಭವಾಗಿ ಯಾರ ಕಣ್ಣಿಗೂ ಬೀಳೋದಿಲ್ಲ’ ಎಂಬ ಆಲೋಚನೆ ಭೂಮಿಕಾದ್ದಾಗಿತ್ತು. ಆದರೆ, ವಿಧಿಯಾಟವೇ ಬೇರೆ ಇತ್ತು.
ಗೌತಮ್ ಉಳಿದುಕೊಂಡಿರುವ ವಠಾರದಲ್ಲಿ ಆತ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಈ ವಠಾರಕ್ಕೆ ಹೊಸ ಅತಿಥಿಯಾಗಿ ಭೂಮಿಕಾ ಬರುತ್ತಾಳೆ. ‘ನಮ್ಮ ವಠಾರಕ್ಕೆ ಹೊಸಬರು ಬಂದಿದ್ದಾರೆ. ಅವರಿಗೆ ಕಾಫಿ ಮಾಡಿಕೊಡಲ್ವ’ ಎಂದು ಅಲ್ಲಿದ್ದವರು ಕೇಳುತ್ತಾರೆ. ತಕ್ಷಣಕ್ಕೆ ಗೌತಮ್ ಕಾಫಿ ಮಾಡಿಕೊಂಡು ಹೋಗುತ್ತಾನೆ. ಆಗ ಎದುರಾಗುತ್ತೆ ನೋಡಿ ಶಾಕ್. ಗೌತಮ್ ಬಾಗಿಲು ತೆರೆದಾಗ ಭೂಮಿಕಾ ಕಾಣಿಸುತ್ತಾಳೆ. ಇದನ್ನು ನೋಡಿ ಭೂಮಿಕಾ ಕೂಡ ಶಾಕ್ ಆಗುತ್ತಾಳೆ. ಆದರೆ, ಗೌತಮ್ ಖುಷಿಗೆ ಪಾರವೇ ಇರೋದಿಲ್ಲ.
ಇವರಿಬ್ಬರು ಮತ್ತೆ ಎಂದಿಗೂ ಒಂದಾಗಬಾರದು ಎಂಬುದು ಶಕುಂತಲಾ ಆಲೋಚನೆ ಆಗಿತ್ತು. ಆದರೆ, ಈಗ ವಿಧಿಯೇ ಇವರನ್ನು ಮತ್ತೆ ಒಂದು ಮಾಡಿದೆ. ಪ್ರತಿ ಬಾರಿ ಗೌತಮ್ ಎದುರಾದಾಗಲೂ ಭೂಮಿಕಾ ಮುಖ ತಿರಿಸಿಕೊಂಡು ಹೋಗುತ್ತಿದ್ದಳು. ಆದರೆ, ಈಗ ಅವನೇ ಮತ್ತೆ ಬಂದಿರುವುದರಿಂದ ಮುಂದೇನಾಗುತ್ತದೆ ಎಂಬ ಕುತೂಹಲ ಮೂಡಿದೆ.
ಮತ್ತೊಂದು ಕಡೆ ಯಾರೋ ಬಿಟ್ಟು ಹೋದ ಮಗುವನ್ನು ಗೌತಮ್ ದತ್ತು ತೆಗೆದುಕೊಂಡಿದ್ದಾನೆ. ಇದು ಅವನ್ನದೇ ಮಗಳಾ ಎನ್ನುವ ಪ್ರಶ್ನೆ ಮೂಡಿದೆ. ಭವಿಷ್ಯದಲ್ಲಿ ಇದಕ್ಕೆ ಉತ್ತರ ಸಿಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



