ನಿತ್ಯಾ ಮದುವೆ ಆಗೋ ಹುಡುಗ ಮಂಟಪದಿಂದ ಜೂಟ್; ಪೆಟ್ರೋಲ್ ಸುರಿದುಕೊಂಡ ಶಾಂತಿ
ನಿತ್ಯಾಳ ಮದುವೆಯ ಸಂಭ್ರಮದಲ್ಲಿ ತೇಜಸ್ ಕೊನೆಯ ಕ್ಷಣದಲ್ಲಿ ಮಂಟಪದಿಂದ ಓಡಿಹೋಗಿದ್ದಾನೆ. ಕರ್ಣನ ತಂದೆ ರಮೇಶ್‌ನ ಪಿತೂರಿಯಿಂದಾಗಿ ಈ ಘಟನೆ ನಡೆದಿದೆ. ಈಗ ನಿತ್ಯಾ ಮತ್ತು ಕರ್ಣನ ವಿವಾಹಕ್ಕೆ ಸಿದ್ಧತೆ ನಡೆದಿದೆ. ತೇಜಸ್‌ನ ಪ್ರೀತಿಸಿದ ನಿತ್ಯಾ, ಮತ್ತು ಕರ್ಣನನ್ನು ಇಷ್ಟಪಟ್ಟ ನಿಧಿ ಇಬ್ಬರ ಕನಸುಗಳನ್ನೂ ರಮೇಶ್ ನುಚ್ಚು ನೂರು ಮಾಡಿದ್ದಾನೆ.

ನಿತ್ಯಾ ಮದುವೆ ಸಂಭ್ರಮದಿಂದ ನಡೆಯುತ್ತಿದೆ. ನಿತ್ಯಾ ಹಾಗೂ ತೇಜಸ್ ವಿವಾಹ ಆಗುವುದರಲ್ಲಿದ್ದರು. ಅರಿಶಿಣ ಶಾಸ್ತ್ರ ಕೂಡ ನಡೆದಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಹುಡುಗ ಹಾಗೂ ಆತನ ಕುಟುಂಬದವರು ಮದುವೆ ಮಂಟಪದಿಂದ ಓಡಿ ಹೋಗಿದ್ದಾರೆ. ಇದಕ್ಕೆಲ್ಲ ಕಾರಣ ಆಗಿದ್ದು, ಕರ್ಣನ (Karna) ತಂದೆ ರಮೇಶ್. ಮುಂದೆ ಕರ್ಣ ಹಾಗೂ ನಿತ್ಯಾ ವಿವಾಹ ನಡೆಯಲಿದೆ. ಅದಕ್ಕೆ ಈಗ ಪೀಠಿಕೆ ಆರಂಭ ಆಗಿದೆ.
ನಿತ್ಯಾ ಮದುವೆ ಬಗ್ಗೆ ಸಾಕಷ್ಟು ಕನಸು ಕಂಡಿದ್ದಳು. ಆದರೆ, ಅವಳ ಕನಸು ಈಡೇರುತ್ತಿಲ್ಲ. ಈ ಬಗ್ಗೆ ಆಕೆಗೆ ಬೇಸರ ಇದೆ. ಆದರೂ ಮದುವೆ ಆಗಬೇಕಲ್ಲ ಎಂದು ಆಗುತ್ತಿದ್ದಾಳೆ. ಆದರೆ, ಈಗ ಮದುವೆ ಮಂಟಪದಿಂದ ತೇಜಸ್ ಓಡಿ ಹೋಗಿದ್ದಾನೆ. ಇದು ಆಕೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಆಕೆ ಇನ್ನೂ ಶಾಕ್ನಲ್ಲಿ ಇದ್ದಾಳೆ.
ನಿತ್ಯಾ ಹಲವು ವರ್ಷಗಳಿಂದ ತೇಜಸ್‌ನ ಪ್ರೀತಿಸುತ್ತಿದ್ದಳು. ಆತನನ್ನು ತುಂಬಾನೇ ನಂಬಿದ್ದಳು. ಆದರೆ, ಕೊನೆಯ ಕ್ಷಣದಲ್ಲಿ ಆತ ಓಡಿ ಹೋಗಿದ್ದು, ನಿತ್ಯಾ ಅಜ್ಜಿ ಶಾಂತಿಗೆ ಸಾಕಷ್ಟು ಬೇಸರ ಮೂಡಿಸಿದೆ. ಆಕೆಯೂ ಶಾಕ್ಗೆ ಒಳಗಾಗಿದ್ದಾಳೆ. ಹೀಗಾಗಿ, ಪ್ರತಿಯೊಬ್ಬರ ಬಳಿ ತೆರಳಿ ಮದುವೆ ಆಗುವಂತೆ ಕೋರಿದ್ದಾಳೆ. ಆದರೆ, ಯಾರೊಬ್ಬರೂ ಮದುವೆ ಆಗಲು ಒಪ್ಪಿಲ್ಲ. ಕೊನೆಗೆ ಬೇರೆ ದಾರಿ ಕಾಣದೆ ನಿತ್ಯಾಳಿಗೂ ಪೆಟ್ರೋಲ್ ಸುರಿದು, ತಾನೂ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ನಿತ್ಯಾ ನಿರ್ಧರಿಸಿದ್ದಾಳೆ.
ರಮೇಶ್ ಕಿತಾಪತಿ
ಈ ಕೆಲಸದ ಹಿಂದೆ ಇರೋದು ರಮೇಶ್ ಕಿತಾಪತಿ. ಕರ್ಣನ ತಂದೆ ರಮೇಶ್ ಮೊದಲಿನಿಂದಲೂ ಕರ್ಣನ ಬಗ್ಗೆ ದ್ವೇಷ ಸಾಧಿಸುತ್ತಲೇ ಬರುತ್ತಿದ್ದಾನೆ. ಆತ ನಿಧಿಯನ್ನು ಪ್ರೀತಿಸುತ್ತಿರೋ ವಿಚಾರ ರಮೇಶ್ಗೆ ತಿಳಿದಿದೆ. ಹೇಗಾದರೂ ಮಾಡಿ ನಿಧಿಯಿಂದ ಆತನನ್ನು ದೂರ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾನೆ. ಈ ಕಾರಣಕ್ಕೆ ಕರ್ಣ ಹಾಗೂ ನಿತ್ಯಾ ಮದುವೆ ಮಾಡಲು ಆತ ಮುಂದಾಗಿದ್ದಾನೆ. ಮುಂದೇನಾಗುತ್ತದೆ ಎಂಬ ಕುತೂಹಲ ಮೂಡಿದೆ.
ಇದನ್ನೂ ಓದಿ: ಮದುವೆಗೂ ಮೊದಲೇ ಸಪ್ತಪದಿ ತುಳಿದ ಕರ್ಣ-ನಿಧಿ; ಕಣ್ಣೀರೇ ಬಂತು
ನಿತ್ಯಾ-ನಿಧಿ ಕನಸು ನುಚ್ಚು ನೂರು
ತೇಜಸ್‌ನ ವಿವಾಹ ಆಗಬೇಕು ಎಂಬುದು ನಿತ್ಯಾಳ ಕನಸಾಗಿತ್ತು. ಆದರೆ, ಈ ಕನಸು ಈಡೇರಿಲ್ಲ. ಅತ್ತ ಕರ್ಣನ ಮದುವೆ ಆಗಬೇಕು ಎಂಬುದು ನಿಧಿ ಆಸೆ ಆಗಿತ್ತು. ಅದು ಕೂಡ ನೆರವೇರುತ್ತಿಲ್ಲ. ಹೀಗಾಗಿ, ಒಂದೇ ಕಲ್ಲಲ್ಲಿ ಇಬ್ಬರ ಕನಸನ್ನು ರಮೇಶ್ ನುಚ್ಚುನೂರು ಮಾಡಿದ್ದಾನೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







