‘ಇನ್ಮುಂದೆ ನಿನ್ನ ಬಳಿ ಮಾತನಾಡಲ್ಲ’; ಕಾವ್ಯಾ ಎದುರು ಶಪಥ ಮಾಡಿದ ಗಿಲ್ಲಿ ನಟ

ಬಿಗ್ ಬಾಸ್ ಕನ್ನಡ ಮನೆಯಲ್ಲಿ ಗಿಲ್ಲಿ ನಟರಾಜ್ ಮತ್ತು ಕಾವ್ಯಾ ಶೈವ ಅವರ ಗೆಳೆತನ ಗಟ್ಟಿಯಾಗಿತ್ತು. ಇದನ್ನು ಮುರಿಯಲು ಇತರ ಸ್ಪರ್ಧಿಗಳು ಪ್ರಯತ್ನಿಸಿದರು. ಆದರೆ, ಅದು ಸಾಧ್ಯವಾಗಿರಲಿಲ್ಲ. ಆದರೆ, ಈಗ ಕಾವ್ಯಾಗೆ ತಮ್ಮ ಗೆಳೆತನ ಆಟದ ಮೇಲೆ ಪರಿಣಾಮ ಬೀರುತ್ತಿದೆ ಎನಿಸಿದೆ. ಈ ಬಗ್ಗೆ ಚರ್ಚಿಸಿದಾಗ, ಗಿಲ್ಲಿ ಬೇಸರಗೊಂಡು ಇನ್ನು ಮಾತನಾಡುವುದಿಲ್ಲ ಎಂದು ಶಪಥ ಮಾಡಿದರು.

‘ಇನ್ಮುಂದೆ ನಿನ್ನ ಬಳಿ ಮಾತನಾಡಲ್ಲ’; ಕಾವ್ಯಾ ಎದುರು ಶಪಥ ಮಾಡಿದ ಗಿಲ್ಲಿ ನಟ
ಕಾವ್ಯಾ-ಗಿಲ್ಲಿ

Updated on: Nov 12, 2025 | 7:01 AM

ಗಿಲ್ಲಿ ನಟ (Gilli Nata) ಹಾಗೂ ಕಾವ್ಯಾ ಶೈವ ಅವರು ಜಂಟಿಯಾಗಿದ್ದಾಗ ಒಟ್ಟಾಗಿ ಇದ್ದರು. ಬಿಗ್ ಬಾಸ್​ಗೆ ಬರುವ ಮೊದಲೇ ಪರಿಚಯ ಇದ್ದ ಕಾರಣದಿಂದ ಇಬ್ಬರ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆದಿದೆ. ಈ ಗೆಳೆತನ ಗಾಢವಾಗಿದೆ. ಆದರೆ, ಈ ಫ್ರೆಂಡ್​ಶಿಪ್ ತಮ್ಮ ಆಟದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಕಾವ್ಯಾಗೆ ಅನಿಸಿದೆ. ಈ ಕಾರಣದಿಂದಲೇ ಗಿಲ್ಲಿ ಬಳಿ ಈ ಬಗ್ಗೆ ಅವರು ಚರ್ಚೆ ಮಾಡಿದ್ದಾರೆ. ಇದರಿಂದ ಬೇಸರಗೊಂಡ ಗಿಲ್ಲಿ ಅವರು ‘ಇನ್ಮುಂದೆ ನಿನ್ನ ಬಳಿ ಮಾತನಾಡುವುದಿಲ್ಲ’ ಎಂದು ಶಪಥ ಮಾಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಹಾಗೂ ಕಾವ್ಯಾ ಶೈವ ಫ್ರೆಂಡ್​ಶಿಪ್ ಬ್ರೇಕ್ ಮಾಡಬೇಕು ಎಂಬುದು ರಿಷಾ, ಅಶ್ವಿನಿ ಹಾಗೂ ರಾಶಿಕಾ ಅವರ ಪ್ಲ್ಯಾನ್. ‘ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಗೆಳೆತನವೂ ಮುರಿದಿದೆ. ಆದರೆ, ಕಾವ್ಯಾ ಹಾಗೂ ಗಿಲ್ಲಿ ಬೇರೆ ಆಗಿಲ್ಲ. ಅವರನ್ನು ಬೇರೆ ಮಾಡಬೇಕು’ ಎಂದು ಇವರು ಅನೇಕ ಬಾರಿ ಮಾತನಾಡಿಕೊಂಡಿದ್ದರು. ಆದರೆ, ಇವರ ಗೆಳೆತನ ಅದೆಷ್ಟು ಸ್ಟ್ರಾಂಗ್ ಆಗಿತ್ತು ಎಂದರೆ ಎಂತಹುದೇ ಪರಿಸ್ಥಿತಿ ಬಂದರೂ ಇವರು ಬೇರೆ ಆಗಿರಲಿಲ್ಲ.

ಆದರೆ, ಏಕೋ ಇವರ ಗೆಳೆತನದಲ್ಲಿ ಬಿರುಕು ಮೂಡುವ ಲಕ್ಷಣ ಕಾಣುತ್ತಿದೆ. ಬಿಗ್ ಬಾಸ್​ನಲ್ಲಿ ಒಂದು ವಿಚಾರವನ್ನು ಪದೇಪದೇ ಹೇಳುತ್ತಿದ್ದರೆ ಅದು ಸುಳ್ಳಾಗಿದ್ದರೂ ನಿಜ ಎನಿಸೋಕೆ ಆರಂಭ ಆಗುತ್ತದೆ. ಕಾವ್ಯಾ ಶೈವಗೂ ಹೀಗೇ ಆಯಿತೇ ಎನ್ನುವ ಪ್ರಶ್ನೆ ಮೂಡಿದೆ. ‘ಗಿಲ್ಲಿಯಿಂದ ಕಾವ್ಯಾ’ ಎಂಬ ಮಾತು ಕಾವ್ಯಾಗೆ ತುಂಬಾನೇ ಚುಚ್ಚಿದೆ.

ಇದನ್ನೂ ಓದಿ: ‘ಸದಾಶಿವ ನಗರದಲ್ಲಿ ಮನೆ ಇದೆ, ಇದು 40 ಸಾವಿರ ರೂಪಾಯಿ ಬನಿಯನ್’; ಆಸ್ತಿ ವಿವರ ಹೇಳಿದ ಗಿಲ್ಲಿ ನಟ

‘ನೀನು ಇನ್ನು ನನ್ನನ್ನು ರೇಗಿಸಬೇಡ. ಅದು ನನಗೆ ಇಷ್ಟ ಆಗೋದಿಲ್ಲ. ನಾನು ಇದನ್ನು ಗಂಭೀರವಾಗಿ ಹೇಳುತ್ತಿದ್ದೇನೆ’ ಎಂದು ಕಾವ್ಯಾ ಅವರು ಗಿಲ್ಲಿಗೆ ಹೇಳಿದರು. ಆದರೆ, ಗಿಲ್ಲಿ ಒಪ್ಪಲಿಲ್ಲ. ‘ನಾನು ನಿನ್ನ ರೇಗಿಸಿಯೇ ರೇಗಿಸುತ್ತೇನೆ’ ಎಂದರು. ಈ ಬಾರಿ ಕಾವ್ಯಾ ಮತ್ತಷ್ಟು ಗಂಭೀರವಾಗಿ ಮಾತನಾಡಿದರು. ‘ಸರಿ ನಾನು ಇನ್ಮುಂದೆ ನಿನ್ನ ಬಳಿ ಮಾತನಾಡುವುದೇ ಇಲ್ಲ’ ಎಂದರು ಗಿಲ್ಲಿ. ಇದರಿಂದ ಕಾವ್ಯಾ ಶೈವ ಅವರು ಪೆಚ್ಚು ಮೋರೆ ಹಾಕಿಕೊಂಡರು. ಇವರ ಸಂಭಾಷಣೆ ಇಲ್ಲಿಗೆ ಪೂರ್ಣಗೊಂಡಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.