ಕಟ್ಟಪ್ಪ ಬಾಹುಬಲಿಗೆ ಚುಚ್ಚಿದಂತೆ; ಗಿಲ್ಲಿ ಬೆನ್ನಿಗೆ ರಘು ಚಾಕು ಹಾಕಿದ್ದನ್ನು ಹೀಗೆ ಅಂದ್ರು ಫ್ಯಾನ್ಸ್

ಬಿಗ್ ಬಾಸ್ ಕನ್ನಡ ಮನೆಯಲ್ಲಿ ರಘು, ಗಿಲ್ಲಿಗೆ ಚಾಕು ಹಾಕಿ ನಾಮಿನೇಟ್ ಮಾಡಿದ್ದು ವೈರಲ್ ಆಗಿದೆ. ರಘು ಅವರ ಈ ನಡೆಯನ್ನು ಕಟ್ಟಪ್ಪ ಬಾಹುಬಲಿಗೆ ಚುಚ್ಚಿದ ಘಟನೆಗೆ ಅಭಿಮಾನಿಗಳು ಹೋಲಿಸಿದ್ದಾರೆ. ಇವರ ಗೆಳೆತನದಲ್ಲಿ ಬಿರುಕು ಮೂಡಲು ಗಿಲ್ಲಿಯ ಆಟದ ತಂತ್ರಗಳೇ ಕಾರಣ ಎಂಬುದು ರಘು ಆರೋಪ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಕಟ್ಟಪ್ಪ ಬಾಹುಬಲಿಗೆ ಚುಚ್ಚಿದಂತೆ; ಗಿಲ್ಲಿ ಬೆನ್ನಿಗೆ ರಘು ಚಾಕು ಹಾಕಿದ್ದನ್ನು ಹೀಗೆ ಅಂದ್ರು ಫ್ಯಾನ್ಸ್
ಬಾಹುಬಲಿ
Updated By: ರಾಜೇಶ್ ದುಗ್ಗುಮನೆ

Updated on: Dec 02, 2025 | 12:57 PM

‘ಬಾಹುಬಲಿ’ ಸಿನಿಮಾದ ಕ್ಲೈಮ್ಯಾಕ್ಸ್​ನ ನೋಡಿಯೇ ಇರುತ್ತೀರಿ. ಇದರಲ್ಲಿ ಕಟ್ಟಪ್ಪನು ಬಾಹುಬಲಿಗೆ ಖಡ್ಗದಿಂದ ಚುಚ್ಚುತ್ತಾನೆ. ಬಾಹುಬಲಿಯ ಆಪ್ತನಾಗಿರೋ ಕಟ್ಟಪ್ಪ ಹೀಗೇಕೆ ಮಾಡಿದ, ಇವರ ನಡುವಿನ ಗೆಳೆತನಕ್ಕೆ ಬೆಲೆಯೇ ಇಲ್ಲದಂತೆ ಆಯಿತೇ ಎಂಬ ಪ್ರಶ್ನೆಗಳು ಮೂಡುವಂತೆ ಆದವು. ಇದಕ್ಕೆ ಎರಡನೇ ಪಾರ್ಟ್​ನಲ್ಲಿ ಉತ್ತರ ಸಿಗುತ್ತದೆ ಎಂಬುದು ಬೇರೆ ವಿಷಯ. ಈಗ ಬಿಗ್ ಬಾಸ್ (Bigg Boss) ಅಲ್ಲಿ ಗಿಲ್ಲಿ ಬೆನ್ನಿಗ್ಗೆ ರಘು ಅವರು ಚಾಕು ಹಾಕಿದ್ದನ್ನು ಹೀಗೆಯೇ ಬಿಂಬಿಸಲಾಗುತ್ತಾ ಇದೆ. ಈ ವಿಡಿಯೋ ವೈರಲ್ ಮಾಡಲಾಗಿದೆ.

ಬಿಗ್ ಬಾಸ್ ಅಲ್ಲಿ ರಘು ಹಾಗೂ ಗಿಲ್ಲಿ ಮಧ್ಯೆ ಒಳ್ಳೆಯ ಗೆಳೆತನ ಮೂಡಿದೆ. ಆದರೆ ಕಳೆದ ವಾರದಿಂದ ಇವರ ಮಧ್ಯೆ ಬಿರುಕು ಮೂಡಿದ್ದನ್ನು ನೀವು ಕಾಣಬಹುದು. ಗಿಲ್ಲಿ ಬಟ್ಟೆಯನ್ನು ಸಿಟ್ಟಿನಿಂದ ರಘು ಅವರು ಎಸೆದಿದ್ದರು. ಇದು ಚರ್ಚೆಗೆ ಕಾರಣ ಆಗಿತ್ತು. ಗಿಲ್ಲಿಯನ್ನು ನಂಬ ಬಾರದು, ಆತನಿಗೆ ಕಿವಿಮಾತು ಹೇಳಬಾರದು ಎಂಬ ನಿರ್ಧಾರಕ್ಕೆ ರಘು ಬಂದಿದ್ದಾನೆ. ಆದರೆ, ಗಿಲ್ಲಿ ಮಾತ್ರ ರಘು ಗೆಳೆತನ ಬಿಡುತ್ತಿಲ್ಲ.

ಇದನ್ನೂ ಓದಿ: ‘ಆ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ’; ಬಿಗ್ ಬಾಸ್​ನಿಂದ ಹೊರ ಬಂದ ಜಾನ್ವಿ ಬೇಸರ

ನವೆಂಬರ್ 1ರ ಎಪಿಸೋಡ್​ನಲ್ಲಿ ನಾಮಿನೇಷನ್ ಮಾಡಲು ಬಿಗ್ ಬಾಸ್ ಒಂದು ಚಟುವಟಿಕೆ ನೀಡಿದರು. ಬೆನ್ನಿಗೆ ಬೆಂಡಿನ ವಸ್ತು ಇರುತ್ತದೆ. ಇದಕ್ಕೆ ಚಾಕು ಹಾಕುವ ಮೂಲಕ ನಾಮಿನೇಷನ್ ಮಾಡಬೇಕು. ರಘು ಅವರು ಒಂದು ಚಾಕುವನ್ನು ಗಿಲ್ಲಿಗೆ ಹಾಕಿದ್ದು, ಅವರನ್ನು ನಾಮಿನೇಟ್ ಮಾಡಿದರು. ಗಿಲ್ಲಿಯನ್ನು ರಘು ನಾಮಿನೇಟ್ ಮಾಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ರಘು ನಾಮಿನೇಟ್ ಮಾಡಿದ್ದನ್ನು ಅನೇಕರು ಕಟ್ಟಪ್ಪನು ಬಾಹುಬಲಿಗೆ ಚಾಕು ಹಾಕಿದಕ್ಕೆ ಹೋಲಿಕೆ ಮಾಡಿದ್ದಾರೆ.

ಗಿಲ್ಲಿ ಬಿಗ್ ಬಾಸ್ ಮನೆಯಲ್ಲಿ ಕೆಲವೊಮ್ಮೆ ಅತಿರೇಕದಿಂದ ಆಡಿದ ಉದಾಹರಣೆ ಇದೆ. ಗಿಲ್ಲಿ ಬಳಿ ಸಾಕಷ್ಟು ಬಟ್ಟೆ ಇದೆ. ಆದರೆ, ಇದನ್ನು ಅವರು ಧರಿಸೋದಿಲ್ಲ ಎಂಬುದು ರಘು ಆರೋಪ. ಇದು ಸಿಂಪತಿ ಗಿಟ್ಟಿಸಿಕೊಳ್ಳುವ ಟ್ರಿಕ್ ಎಂಬ ರೀತಿಯಲ್ಲೂ ಬಿಂಬಿತವಾಗಿದೆ. ಈ ವಿಷಯವನ್ನು ಗಿಲ್ಲಿ ಹಾಗೂ ಕಾವ್ಯಾ ಒಪ್ಪಿಕೊಂಡಿಲ್ಲ. ಅಶ್ವಿನಿ ಕೂಡ ಗಿಲ್ಲಿ ಪರವಾಗಿ ಇದ್ದರು. ರಘು ಹಾಗೂ ಗಿಲ್ಲಿ ಎಷ್ಟೇ ಕಿತ್ತಾಡಿಕೊಂಡರೂ ಕೊನೆಯಲ್ಲಿ ಒಂದಾಗುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.