ತ್ರಿವಿಕ್ರಂ ಅವರು ಈ ವಾರ ನಾಮಿನೇಟ್ ಆಗಿದ್ದರು. ಟಾಸ್ಕ್ ಸರಿಯಾಗಿ ಆಡಲು ಸಿಗದ ಕಾರಣ ಅವರಿಗೆ ಗೆಲ್ಲೋಕೆ ಸಾಧ್ಯ ಆಗಿರಲಿಲ್ಲ. ಈ ಕಾರಣಕ್ಕೆ ಫಿನಾಲೆ ವಾರ ತಲುಪುವ ಅವಕಾಶ ಅವರ ಕೈ ತಪ್ಪಿತ್ತು. ಆದರೆ, ಈಗ ಎಲ್ಲವೂ ಬದಲಾಗಿದೆ. ಬಿಗ್ ಬಾಸ್ನ ಒಂದು ಅಚ್ಚರಿಯ ನಿರ್ಧಾರದಿಂದ ಎಲ್ಲವೂ ಬದಲಾಗಿಬಿಟ್ಟಿದೆ. ಆಟ ಆಡಿ ಗೆದ್ದವರು ನಾಮಿನೇಟ್ ಆದರೆ, ಆಟದಲ್ಲಿ ಸೋತವರು ಎಲಿಮಿನೇಷನ್ನಿಂದ ಬಚಾವ್ ಆಗಿದ್ದಾರೆ.
ಧನರಾಜ್ ಅವರು ಮೋಸ ಮಾಡಿ ಗೆದ್ದಿದ್ದಾರೆ ಎಂಬ ಆರೋಪ ಇದೆ. ಇದನ್ನು ಅವರೂ ಒಪ್ಪಿಕೊಂಡಿದ್ದಾರೆ. ಈ ಕಾರಣಕ್ಕೆ ಮಧ್ಯ ವಾರದ ಎಲಿಮಿನೇಷನ್ ರದ್ದು ಮಾಡಲಾಯಿತು. ಟಾಸ್ಕ್‌ನಲ್ಲಿ ಗೆದ್ದ ಹನುಮಂತ ಅವರ ಇಮ್ಯೂನಿಟಿಯನ್ನು ರದ್ದು ಮಾಡಲಾಯಿತು. ಆ ಬಳಿಕ ಮತ್ತೆ ನಾಮಿನೇಷನ್ ಪ್ರಕ್ರಿಯೆ ನಡೆಸಲಾಗಿದೆ.
ನಾಮಿನೇಷನ್ ಪ್ರಕ್ರಿಯೆಯಲ್ಲಿ ಭವ್ಯಾ ಅವರನ್ನು ಹೊರತುಪಡಿಸಿ ಇನ್ಯಾರೂ ಕೂಡ ತ್ರಿವಿಕ್ರಂ ಅವರ ಹೆಸರನ್ನು ತೆಗೆದುಕೊಂಡೇ ಇಲ್ಲ. ನಾಮಿನೇಟ್ ಆಗಬೇಕು ಎಂದರೆ ಕನಿಷ್ಠ ಎರಡು ವೋಟ್ ಬೀಳಬೇಕು. ಒಂದು ವೋಟ್ ಬಿದ್ದರೆ ಬಿಗ್ ಬಾಸ್ ಅದನ್ನು ಎಂದಿಗೂ ಪರಿಗಣಿಸುವುದಿಲ್ಲ. ನಾಮಿನೇಷನ್ ಪ್ರಕ್ರಿಯೆಯಲ್ಲಿ ಭವ್ಯಾ ವೋಟ್ ಬಿಟ್ಟು ಮತ್ಯಾರೂ ತ್ರಿವಿಕ್ರಂ ಅವರನ್ನು ನಾಮಿನೇಟ್ ಮಾಡಿರಲಿಲ್ಲ. ಹೀಗಾಗಿ, ಅವರು ಫಿನಾಲೆ ವಾರ ತಲುಪಿದರು.
ಮೋಕ್ಷಿತಾ ಅವರು ನಾಮಿನೇಷನ್ ಲಿಸ್ಟ್ನಲ್ಲಿ ಇದ್ದರು. ಆದರೆ, ಅವರು ಕೂಡ ಬಚಾವ್ ಆಗಿದ್ದಾರೆ. ನಾಮಿನೇಷನ್‌ನಿಂದ ಒಬ್ಬರನ್ನು ಸೇವ್ ಮಾಡುವ ಅವಕಾಶವನ್ನು ಅಲ್ಟಿಮೇಟ್ ಕ್ಯಾಪ್ಟನ್ ಹನುಮಂತಗೆ ಬಿಗ್ ಬಾಸ್ ನೀಡಿದರು. ಆಗ ಹನುಮಂತ ಅವರು ಮೋಕ್ಷಿತಾ ಹೆಸರನ್ನು ತೆಗೆದುಕೊಂಡರು.
ಇದನ್ನೂ ಓದಿ: ಇಂದು ಶೋ ಆರಂಭಕ್ಕೂ ಮೊದಲೇ ನಡೆಯಲಿದೆ ಒಂದು ಎಲಿಮಿನೇಷನ್? ಟ್ವಿಸ್ಟ್ ಕೊಡಲು ಕಿಚ್ಚ ರೆಡಿ
ಹನುಮಂತ ಅವರು ಅಲ್ಟಿಮೇಟ್ ಕ್ಯಾಪ್ಟನ್ ಆಗಿ ನಾಮಿನೇಷನ್‌ನಿಂದ ಬಚಾವ್ ಆಗಿದ್ದಾರೆ. ಅಂತಿಮವಾಗಿ ಧನರಾಜ್, ಗೌತಮಿ, ಮಂಜು, ರಜತ್ ಹಾಗೂ ಭವ್ಯಾ ನಾಮಿನೇಷನ್ ಸಾಲಿನಲ್ಲಿ ಇದ್ದಾರೆ. ಇವರ ಪೈಕಿ ಇಬ್ಬರು ಮನೆಯಿಂದ ಹೊರ ಹೋಗಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.