
‘ನಾ ನಿನ್ನ ಬಿಡಲಾರೆ’ ಧಾರಾವಾಹಿ (Kannada Serial) ಹಲವು ಟ್ವಿಸ್ಟ್ಗಳನ್ನು ಪಡೆದು ಸಾಗುತ್ತಿದೆ. ಈ ಧಾರಾವಾಹಿಯಲ್ಲಿ ದುಷ್ಟ ಶಕ್ತಿಗಳು, ಮಾಟ ಮಂತ್ರ, ದೇವಿ ಮಹಾತ್ಮೆಯನ್ನು ತೋರಿಸುವ ಕೆಲಸ ಆಗುತ್ತಿದೆ. ಹೀಗಿರುವಾಗಲೇ ಧಾರಾವಾಹಿಯಲ್ಲಿ ಒಂದು ದೊಡ್ಡ ಟ್ವಿಸ್ಟ್ ಎದುರಾಗಿದೆ. ಈ ದಾರಾವಾಹಿಯಲ್ಲಿ ದುರ್ಗಾ ಹಾಗೂ ಶರತ್ ಮದುವೆ ಮಾಡಲು ಸಿದ್ಧತೆ ನಡೆದಿದೆ. ಈ ತಿರುವು ಧಾರಾವಾಹಿಯ ವಿಲನ್ ಪಾತ್ರಧಾರಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗದೇ ಇರಬಹುದು ಎಂದು ಅನೇಕರು ಭಾವಿಸಿದ್ದಾರೆ.
ದುರ್ಗಾಳನ್ನು ಮದುವೆ ಮಾಡಿ ಮನೆಯಿಂದ ಹೊರಹಾಕಬೇಕು ಎಂಬುದು ಮಾಯಾ ಪ್ಲ್ಯಾನ್. ಈ ಕಾರಣದಿಂದಲೇ ಒಂದು ಫ್ರಾಡ್ ಸಂಬಂಧವನ್ನು ಕರೆದುಕೊಂಡು ಬರಲಾಗಿತ್ತು. ಆ ಹುಡುಗ ಒಳ್ಳೆಯವರ ರೀತಿಯೇ ನಡೆದುಕೊಂಡಿದ್ದ. ಹೀಗಾಗಿ ಎಲ್ಲರೂ ಆತನನ್ನು ನಂಬಿದ್ದರು. ಆದರೆ, ಹಿತಾ ಎಲ್ಲವನ್ನೂ ಕಂಡು ಹಿಡಿದಿದ್ದಾಳೆ. ಆತ ತನ್ನ ಲವರ್ ಜೊತೆ ಮಾತನಾಡುವಾಗ ಅದನ್ನು ರೆಕಾರ್ಡ್ ಮಾಡಿ ಶರತ್ಗೆ ತೋರಿಸಿದ್ದಾಳೆ.
ಈ ಮಾತನ್ನು ಕೇಳಿ ಶರತ್ ಶಾಕ್ ಆದ ಮತ್ತು ನೇರವಾಗಿ ಹೋಗಿ ಈ ವಿಚಾರವನ್ನು ದುರ್ಗಾ ಬಳಿ ಹೇಳಿದ. ಇದನ್ನು ಆಕೆ ನಂಬಲು ರೆಡಿ ಇರಲಿಲ್ಲ. ಏಕೆಂದರೆ ಆಕೆಯ ಚಿಕ್ಕಮ್ಮ ಮಾಡಿದ ಕೆಲಸವೇ ಇದಕ್ಕೆ ಕಾರಣ. ದುರ್ಗಾಳ ಚಿಕ್ಕಮ್ಮ ಬಂದು ‘ಏನೇ ಆದರೂ ನೀನು ಮದುವೆ ಆಗಬೇಕು’ ಎಂದು ಎಚ್ಚರಿಸಿ ಹೋಗಿದ್ದಳು. ಹೀಗಾಗಿ, ಮದುವೆ ಆಗೇ ಆಗುತ್ತೇನೆ ಎಂದು ದುರ್ಗಾ ನಿರ್ಧರಿಸಿಯಾಗಿತ್ತು.
ಇದನ್ನೂ ಓದಿ: ಸತತ ಮೂರನೇ ವಾರ ಡಬಲ್ ಡಿಜಿಟ್ ಟಿಆರ್ಪಿ, ನಂಬರ್ 1 ಸ್ಥಾನ ಪಡೆದ ‘ಕರ್ಣ’ ಧಾರಾವಾಹಿ
ಸದ್ಯ ಬಿಡುಗಡೆ ಆಗಿರುವ ಪ್ರೋಮೋ ಪ್ರಕಾರ ಶರತ್ ಹಾಗೂ ದುರ್ಗಾಳ ಮದುವೆ ನಡೆಯಲಿದೆ. ಒಬ್ಬರು ಎಣ್ಣೆ ಆದರೆ, ಮತ್ತೊಬ್ಬರು ಸೀಗೆಕಾಯಿ. ಇಬ್ಬರ ಮಧ್ಯೆ ಹೊಂದಾಣಿಕೆ ಸಾಧ್ಯವೇ ಇಲ್ಲ. ಆದರೆ, ಶರತ್ ಮಗಳು ಹಿತಾಳನ್ನು ನೋಡಿಕೊಳ್ಳುವ ಕಲೆ ಆಕೆಗೆ ಗೊತ್ತಿದೆ. ಈ ಕಾರಣದಿಂದಲೇ ಶರತ್ಗೆ ಆಕೆಯ ಮೇಲೆ ವಿಶೇಷ ಕಾಳಜಿ. ಈಗ ಇಬ್ಬರೂ ಮದುವೆ ಆದರೆ ಹಿತಾ ತುಂಬಾನೇ ಖುಷಿ ಪಡುತ್ತಾಳೆ. ಸದ್ಯ ರಿಲೀಸ್ ಆಗಿರೋ ಪ್ರೋಮೋ ನಿಜವೇ ಅಥವಾ ಯಾರಿಗಾದರೂ ಬಿದ್ದ ಕನಸೇ ಎಂಬುದನ್ನು ಕಾದು ನೋಡಬೇಕಿದೆ. ಇಂದು (ಜುಲೈ 30) ಇದರ ಎಪಿಸೋಡ್ ಪ್ರಸಾರ ಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.