ನಂದ ಗೋಕುಲ: ಮೀನಾಳ ಒಪ್ಪಿಕೊಂಡ ನಂದ? ಸೊಸೆಗೆ ಆರತಿ ಎತ್ತಿ ಸ್ವಾಗತಿಸಿದ ಮಾವ

ಇಷ್ಟು ದಿನ ಮೀನಾಳನ್ನು ನಂದ ದೂರ ಇಟ್ಟಿದ್ದ. ಆದರೆ, ಈಗ ಆಕೆಯನ್ನು ಸ್ವಾಗತಿಸಿದ್ದಾನೆ. ಪ್ರೇಕ್ಷಕರು ಬಹಳ ದಿನಗಳಿಂದ ಕಾಯುತ್ತಿದ್ದ ಕ್ಷಣ ಬಂದೇ ಬಿಟ್ಟಿದೆ ಎಂದರೂ ತಪ್ಪಾಗಲಾರದು. ‘ನಂದ ಗೋಕುಲ’ ಧಾರಾವಾಹಿಯಲ್ಲಿ ಅನಿರೀಕ್ಷಿತ ತಿರುವು ಬಂದಿದೆ. ನಂದ ಕೊನೆಗೂ ಮೀನಾಳನ್ನು ತನ್ನ ಸೊಸೆಯೆಂದು ಒಪ್ಪಿಕೊಂಡಿದ್ದಾನೆ.

ನಂದ ಗೋಕುಲ: ಮೀನಾಳ ಒಪ್ಪಿಕೊಂಡ ನಂದ? ಸೊಸೆಗೆ ಆರತಿ ಎತ್ತಿ ಸ್ವಾಗತಿಸಿದ ಮಾವ
ನಂದಗೋಕುಲ
Updated By: ರಾಜೇಶ್ ದುಗ್ಗುಮನೆ

Updated on: Nov 20, 2025 | 10:52 AM

‘ನಂದ ಗೋಕುಲ’ ಧಾರಾವಾಹಿ ಗಮನ ಸೆಳೆಯುತ್ತಿದೆ. ಮೀನಾಳ ವಿವಾಹ ಕೇಶವನ ಜೊತೆ ನಡೆದಿದೆ. ಇವರು ಓಡಿ ಹೋಗಿ ಮದುವೆ ಆಗಿದ್ದರು. ನಂದ ಇವಳನ್ನು ಸೊಸೆಯಾಗಿ ಈವರೆಗೆ ಒಪ್ಪಿಕೊಂಡಿರಲಿಲ್ಲ. ಇದು ಮನೆಯವರ ಬೇಸರಕ್ಕೆ ಕಾರಣ ಆಗಿತ್ತು. ಆದರೆ, ಈಗ ಧಾರಾವಾಹಿಯಲ್ಲಿ ಹೊಸ ತಿರುವು ಎದುರಾಗಿದೆ. ಸೊಸೆ ಮೀನಾಳನ್ನು ಮಾವ ನಂದ ಒಪ್ಪಿಕೊಂಡಿದ್ದಾನೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಇದರ ಹಿಂದೆ ಯಾವುದಾದರೂ ಸಂಚು ಇದೆಯೇ ಎಂಬ ಪ್ರಶ್ನೆಯೂ ಮೂಡುವಂತೆ ಆಗಿದೆ.

ನಂದ ತನ್ನ ಮೂವರು ಮಕ್ಕಳನ್ನು ಮುದ್ದಿನಿಂದ ಸಾಕಿದ್ದಾನೆ. ತಾನು ಓಡಿ ಬಂದು ಮದುವೆ ಆಗಿದ್ದಕ್ಕೆ ಕುಟುಂಬದಿಂದ ಅಂತರ ಕಾಯ್ದುಕೊಳ್ಳಬೇಕಾಯಿತು. ಹೀಗಾಗಿ ತನ್ನ ಮಕ್ಕಳಿಗೆ ಈ ರೀತಿ ಆಗಬಾರದು ಎಂಬುದು ನಂದನ ಉದ್ದೇಶ ಆಗಿತ್ತು. ಈ ಕಾರಣದಿಂದಲೇ ಯಾರೊಬ್ಬರೂ ಲವ್ ಮ್ಯಾರೇಜ್ ಆಗಬಾರದು ಎಂದು ಭಾಷೆ ತೆಗೆದುಕೊಂಡಿದ್ದ. ಆದರೆ, ಈಗ ಇಲ್ಲಾಗಿದ್ದೇ ಬೇರೆ. ಮಗ ಕೇಶವ ಲವ್ ಮಾಡಿ ಬಂದಿದ್ದ.

ಇಷ್ಟು ದಿನ ಮೀನಾಳನ್ನು ನಂದ ದೂರ ಇಟ್ಟಿದ್ದ. ಆದರೆ, ಈಗ ಆಕೆಯನ್ನು ಸ್ವಾಗತಿಸಿದ್ದಾನೆ. ಪ್ರೇಕ್ಷಕರು ಬಹಳ ದಿನಗಳಿಂದ ಕಾಯುತ್ತಿದ್ದ ಕ್ಷಣ ಬಂದೇ ಬಿಟ್ಟಿದೆ ಎಂದರೂ ತಪ್ಪಾಗಲಾರದು. ‘ನಂದ ಗೋಕುಲ’ ಧಾರಾವಾಹಿಯಲ್ಲಿ ಅನಿರೀಕ್ಷಿತ ತಿರುವು ಬಂದಿದೆ. ನಂದ ಕೊನೆಗೂ ಮೀನಾಳನ್ನು ತನ್ನ ಸೊಸೆಯೆಂದು ಒಪ್ಪಿಕೊಂಡಿದ್ದಾನೆ. ಅವಳಿಗೆ ಹೊಸ್ತಿಲು ಶಾಸ್ತ್ರವನ್ನು ನೆರವೇರಿಸುತ್ತಾನೆ.

ಇದನ್ನೂ ಓದಿ: ‘ನಂದ ಗೋಕುಲ’: ನಡೆದೇ ಬಿಡ್ತು ವಲ್ಲಭ-ಅಮೂಲ್ಯ ಮದುವೆ; ತಲೆತಿರುಗಿ ಬಿದ್ದ ನಂದ

ಆದರೆ ಅವನ ಈ ಒಪ್ಪಿಕೊಳ್ಳುವಿಕೆ ಹೃದಯಪೂರ್ವಕವೋ ಅಥವಾ ನಾಟಕವೋ ಎಂಬ ಪ್ರಶ್ನೆ ಮೂಡಿದೆ. ಇಷ್ಟು ದಿನ ಮೀನಾಳನ್ನು ದ್ವೇಷಿಸುತ್ತಿದ್ದ ನಂದ ಏಕಾಏಕಿ ಬದಲಾಗಲು ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ.  ಇದು ಕಥೆಯಲ್ಲಿ ಮತ್ತೊಂದು ತಿರುವು ನೀಡುವ ಸಾಧ್ಯತೆ ಇದೆ. ಈ ಶಾಸ್ತ್ರವು ಮೀನಾಳಿಗೆ ನಿಜವಾದ ಆರಂಭವೋ ಅಥವಾ ಕುಟುಂಬದೊಳಗೆ ಹೊಸ ಅಪಾಯಗಳನ್ನು ತೆರೆದಿಡುತ್ತದೆಯೇ ಎಂಬ ಪ್ರಶ್ನೆ ಹುಟ್ಟುಹಾಕಿದೆ. ಕಲರ್ಸ್ ಕನ್ನಡದಲ್ಲಿ  ಸೋಮ-ಶುಕ್ರ ರಾತ್ರಿ 9 ಗಂಟೆಗೆ ನಂದ ಗೋಕುಲ ಧಾರಾವಾಹಿ ಪ್ರಸಾರ ಕಾಣುತ್ತಾ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.