ಬಿಗ್​ ಬಾಸ್​ ಮನೆಯಲ್ಲಿ ಮಾರಾಮಾರಿ; ಹೆಣ್ಣುಮಕ್ಕಳಿಗೂ ಬಿತ್ತು ಪೆಟ್ಟು

ಬಿಗ್​ ಬಾಸ್​ ಮನೆಯಲ್ಲಿ ಮಾರಾಮಾರಿ; ಹೆಣ್ಣುಮಕ್ಕಳಿಗೂ ಬಿತ್ತು ಪೆಟ್ಟು

ಬಿಗ್​ ಬಾಸ್​ ಮನೆಯನ್ನು ಕಾಡಿನ ರೀತಿಯಲ್ಲೇ ಸಿದ್ಧಮಾಡಲಾಗಿದೆ. ಇಡೀ ಮನೆಗೆ ವಿಶೇಷ ಲುಕ್​ ನೀಡಲಾಗಿದೆ. ಇದು ವೀಕ್ಷಕರಿಗೆ ಸಾಕಷ್ಟು ಖುಷಿ ನೀಡಿದೆ. ಬಿಗ್​ ಬಾಸ್​ ಮನೆ ಬದಲಾದರೂ ಮನೆಗೆ ತೆರಳುವವರ ಸ್ಥಿತಿ ಬದಲಾಗಿಲ್ಲ.

TV9kannada Web Team

| Edited By: Rajesh Duggumane

Oct 15, 2021 | 5:02 PM

ಬಿಗ್​ ಬಾಸ್​ ಎಂದಾಕ್ಷಣ ನೆನಪಿಗೆ ಬರೋದು ಕಾಂಟ್ರವರ್ಸಿ. ಮನೆ ಸೇರಿದ ನಂತರ ಎಲ್ಲರೂ ತಮ್ಮ ತನವನ್ನು ಮರೆತು, ಹೊಡೆದಾಡಿಕೊಳ್ಳಲು, ಕೈಕೈ ಮಿಲಾಯಿಸಿಕೊಳ್ಳಲು ಮುಂದಾಗುತ್ತಾರೆ. ಈ ವಿಚಾರದಲ್ಲಿ ಬಿಗ್​ ಬಾಸ್ ಪ್ರತಿ ಬಾರಿಯೂ ಹೈಲೈಟ್​ ಆಗುತ್ತದೆ. ಈ ಬಾರಿಯ ಬಿಗ್​ ಬಾಸ್​ ಸೀಸನ್​ 15ರಲ್ಲಿಯೂ ಇದು ಮುಂದುವರಿದಿದೆ. ದೊಡ್ಮನೆ ಆಟ ಶುರುವಾದ ಕೆಲವೇ ದಿನಗಳಲ್ಲಿ ಹೊಡೆದಾಟ-ಬಡಿದಾಟ ಆರಂಭವಾಗಿದೆ.

ಈ ಬಾರಿಯ ‘ಬಿಗ್​ ಬಾಸ್​ 15’ ಕಾಡಿನ ಥೀಮ್​ನೊಂದಿಗೆ ಮೂಡಿ ಬರುತ್ತಿದೆ. ಈ ಕಾರಣಕ್ಕೆ ಬಿಗ್​ ಬಾಸ್​ ಮನೆಯನ್ನು ಕಾಡಿನ ರೀತಿಯಲ್ಲೇ ಸಿದ್ಧಮಾಡಲಾಗಿದೆ. ಇಡೀ ಮನೆಗೆ ವಿಶೇಷ ಲುಕ್​ ನೀಡಲಾಗಿದೆ. ಇದು ವೀಕ್ಷಕರಿಗೆ ಸಾಕಷ್ಟು ಖುಷಿ ನೀಡಿದೆ. ಬಿಗ್​ ಬಾಸ್​ ಮನೆ ಬದಲಾದರೂ ಮನೆಗೆ ತೆರಳುವವರ ಮನಸ್ಥಿತಿ ಬದಲಾಗಿಲ್ಲ. ಮನೆಗೆ ತೆರಳಿದ ನಂತರ ಅವರು ಹೊಡೆದುಕೊಂಡಿದ್ದಾರೆ.

ಬಿಗ್​ ಬಾಸ್ ಮನೆಯಲ್ಲಿ ನಡೆದ ಫೈಟ್​ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಎಲ್ಲರೂ ಮುಖಮೂತಿ ನೋಡದೇ ಹೊಡೆದುಕೊಂಡಿದ್ದಾರೆ. ಹೆಣ್ಣು ಮಕ್ಕಳಿಗೂ ಹೊಡೆತಗಳು ಬಿದ್ದಿವೆ. ಇದನ್ನು ನೋಡಿ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಇದು ಅತಿಯಾಯಿತು ಎಂದು ಹೇಳಿಕೊಂಡಿದ್ದಾರೆ. ಸದ್ಯ ವಿಡಿಯೋ ವೈರಲ್​ ಆಗಿದೆ.

ಅಕ್ಟೋಬರ್​ 3ರಂದು ಬಿಗ್​ ಬಾಸ್​ ಪ್ರಾರಂಭವಾಗಿತ್ತು. ಮೊದಲ ದಿನವೇ ಈ ರಿಯಾಲಿಟಿ ಶೋಗೆ ಅದ್ದೂರಿ ಸ್ವಾಗತ ಸಿಕ್ಕಿತ್ತು. ಸಲ್ಮಾನ್​ ಖಾನ್​ ಶೋ ನಡೆಸಿಕೊಟ್ಟಿದ್ದರು. ಬಾಲಿವುಡ್​​ನ ಖ್ಯಾತ ನಟ ರಣವೀರ್​ ಸಿಂಗ್ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ನಟಿ ಮೌನಿ ರಾಯ್​ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದರು. ವಿಧಿ ಪಾಂಡ್ಯಾ, ವಿಶಾಲ್​ ಕೋಟಿಯಾನ್​, ಶಮಿತಾ ಶೆಟ್ಟಿ, ಕರಣ್​ ಕುಂದ್ರಾ, ತೇಜಸ್ವಿ ಪ್ರಕಾಶ್​, ಸಿಂಬಾ ನಾಗ್​ಪಾಲ್​, ಮೀಶಾ ಅಯ್ಯರ್​, ಐಶಾನ್​ ಸೆಹಗಾಲ್​, ದೋನಲ್​ ಬಿಶ್ಟ್​​, ಸಾಹಿಲ್​ ಶ್ರಾಫ್​, ಆಕಾಶಾ ಸಿಂಗ್​, ಉಮರ್ ರಿಯಾಜ್ ಮೊದಲಾದವರು ಬಿಗ್​ ಬಾಸ್ ಮನೆಯಲ್ಲಿದ್ದಾರೆ.

ಇದನ್ನೂ ಓದಿ: ನನಗೆ ಸುಕೃತಾ ಜತೆ ಮದುವೆ ಫಿಕ್ಸ್​ ಆಗಿದೆ ಎಂದ ಬಿಗ್​ ಬಾಸ್​ ಶೈನ್ ಶೆಟ್ಟಿ

ಬಿಗ್​ ಬಾಸ್​​​ನಲ್ಲಿ ರಾಜ್​ ಕುಂದ್ರಾ ಬಗ್ಗೆ ಜೋಕ್​ ಮಾಡಿದ ಸಲ್ಮಾನ್​; ಮುಜುಗರಕ್ಕೊಳಗಾದ ಶಮಿತಾ ಶೆಟ್ಟಿ

Follow us on

Related Stories

Most Read Stories

Click on your DTH Provider to Add TV9 Kannada