ಹಿಂದಿ ಬಿಗ್ ಬಾಸ್ 15ಕ್ಕೆ ಇಂದು (ಅಕ್ಟೋಬರ್ 3) ಚಾಲನೆ ನೀಡಲಾಗಿದೆ. ಬಿಗ್ ಬಾಸ್ ಒಟಿಟಿ ಪೂರ್ಣಗೊಳ್ಳುತ್ತಿದ್ದಂತೆ ಈ ಶೋ ಆರಂಭವಾಗಿದ್ದು ವೀಕ್ಷಕರಿಗೆ ಖುಷಿ ನೀಡಿದೆ. ಬಿಗ್ ಬಾಸ್ ಮನೆ ಒಳಗೆ ಪ್ರವೇಶ ಪಡೆಯುವ ಸ್ಪರ್ಧಿಗಳು ಯಾರು ಎನ್ನುವ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಸಾಕಷ್ಟು ಸೆಲೆಬ್ರಿಟಿಗಳು ಬಿಗ್ ಬಾಸ್ ಮನೆ ಒಳಗೆ ಎಂಟ್ರಿ ಪಡೆದಿದ್ದಾರೆ.
ಈ ಬಾರಿಯ ‘ಬಿಗ್ ಬಾಸ್ 15’ ಕಾಡಿನ ಥೀಮ್ನೊಂದಿಗೆ ಮೂಡಿ ಬರುತ್ತಿದೆ. ಈ ಕಾರಣಕ್ಕೆ ಬಿಗ್ ಬಾಸ್ ಮನೆಯನ್ನು ಕಾಡಿನ ರೀತಿಯಲ್ಲೇ ಸಿದ್ಧಮಾಡಲಾಗಿದೆ. ಇಡೀ ಮನೆಗೆ ವಿಶೇಷ ಲುಕ್ ನೀಡಲಾಗಿದೆ. ಇದು ವೀಕ್ಷಕರಿಗೆ ಸಾಕಷ್ಟು ಖುಷಿ ನೀಡಿದೆ. ಬಿಗ್ ಬಾಸ್ ಒಟಿಟಿ ಕೇವಲ ವೂಟ್ನಲ್ಲಿ ಮಾತ್ರ ಪ್ರಸಾರವಾಗುತ್ತಿತ್ತು. ಆದರೆ, ‘ಬಿಗ್ ಬಾಸ್ 15’ ಟಿವಿಯಲ್ಲಿ ಪ್ರಸಾರವಾಗಲಿದೆ. ಕಲರ್ಸ್ ಟಿವಿಯಲ್ಲಿ ರಾತ್ರಿ 9:30ಕ್ಕೆ ಈ ರಿಯಾಲಿಟಿ ಶೋ ಪ್ರಸಾರವಾಗಲಿದೆ. ವೀಕೆಂಡ್ನಲ್ಲಿ ನಿರೂಪಣೆಗೆ ಸಲ್ಮಾನ್ ಖಾನ್ ಆಗಮಿಸಲಿದ್ದಾರೆ.
ಮೊದಲ ದಿನ ಈ ಶೋಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ಸಲ್ಮಾನ್ ಖಾನ್ ಈ ಶೋ ನಡೆಸಿಕೊಟ್ಟಿದ್ದಾರೆ. ಬಾಲಿವುಡ್ನ ಖ್ಯಾತ ನಟ ರಣವೀರ್ ಸಿಂಗ್, ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ವಿಶೇಷ ಅತಿಥಿಯಾಗಿ ಆಗಮಿಸಿದ್ದಾರೆ. ನಟಿ ಮೌನಿ ರಾಯ್ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ. 100 ದಿನಕ್ಕೂ ಅಧಿಕ ದಿನಗಳ ಕಾಲ ಈ ಶೋ ವೀಕ್ಷಕರನ್ನು ರಂಜಿಸಲಿದೆ. ಸಾಮಾನ್ಯವಾಗಿ ಹಿಂದಿ ಬಿಗ್ ಬಾಸ್ಅನ್ನು ಅಕ್ಟೋಬರ್ ತಿಂಗಳಲ್ಲೇ ಆರಂಭಿಸಲಾಗುತ್ತದೆ. ಈ ಬಾರಿಯೂ ಅದೇ ಸಂಪ್ರದಾಯ ಮುಂದುವರಿದಿದೆ.
Premiere night mein aaya bahut maaza, par aaj aane wala hai ussey bhi zyaada mazaa. Kya aap Sunday special episode ke liye ready hain?
Dekhiye #BiggBoss15, tonight at 9:30 only on #Colors.
Catch it before TV on @vootselect #BB15. @BeingSalmanKhan @justvoot pic.twitter.com/bhKgIxDyCE— ColorsTV (@ColorsTV) October 3, 2021
ಈ ಬಾರಿ ವಿಧಿ ಪಾಂಡ್ಯಾ, ವಿಶಾಲ್ ಕೋಟಿಯಾನ್, ಕರಣ್ ಕುಂದ್ರಾ, ತೇಜಸ್ವಿ ಪ್ರಕಾಶ್, ಸಿಂಬಾ ನಾಗ್ಪಾಲ್, ಮೀಶಾ ಅಯ್ಯರ್, ಐಶಾನ್ ಸೆಹಗಾಲ್, ದೋನಲ್ ಬಿಶ್ಟ್, ಸಾಹಿಲ್ ಶ್ರಾಫ್, ಆಕಾಶಾ ಸಿಂಗ್, ಉಮರ್ ರಿಯಾಜ್, ಅಫ್ಸಾನಾ ಖಾನ್ ಮತ್ತು ಜಯ್ ಭಾನುಶಾಲಿ ಬಿಗ್ ಬಾಸ್ ಮನೆ ಸೇರಿದ್ದಾರೆ.
ಇದನ್ನೂ ಓದಿ:Bigg Boss 15: ಕಾಡಿನಲ್ಲಿ ನಡೆಯಲಿದೆ ಬಿಗ್ ಬಾಸ್; ಮನೆ ನೋಡಿ ಹೌಹಾರಿದ ವೀಕ್ಷಕರು
ಏರ್ಪೋರ್ಟ್ನಲ್ಲಿ ಸಲ್ಮಾನ್ ಖಾನ್ ಅವರನ್ನು ತಡೆದಿದ್ದ ಸಿಐಎಸ್ಎಫ್ ಅಧಿಕಾರಿಗೆ ಈಗ ಸಂಕಷ್ಟ; ಕಾರಣ ಏನು?