ರೇಜಿಗೆ ಹುಟ್ಟಿಸಿದ ಅಶ್ವಿನಿ ಗೌಡ-ಜಾನ್ವಿ; ಅಸಮಾಧಾನ ಹೊರಹಾಕಿದ ಬಿಗ್ ಬಾಸ್

ಬಿಗ್ ಬಾಸ್ ಕನ್ನಡ ಮನೆಯಲ್ಲಿ ಅಶ್ವಿನಿ ಗೌಡ ಮತ್ತು ಜಾನ್ವಿ ಪದೇ ಪದೇ ನಿಯಮ ಉಲ್ಲಂಘಿಸಿದ್ದಾರೆ. ಪಿಸುದನಿಯಲ್ಲಿ ಮಾತನಾಡಿ ಬಿಗ್ ಬಾಸ್ ಅಸಮಾಧಾನಕ್ಕೆ ಕಾರಣರಾಗಿದ್ದಾರೆ. ಸುದೀಪ್ ಎಚ್ಚರಿಕೆ ಮತ್ತು ನೇರ ನಾಮಿನೇಷನ್ ನಂತರವೂ ಬುದ್ಧಿ ಕಲಿಯದೆ ಮತ್ತೆ ನಿಯಮ ಮುರಿದಿದ್ದಾರೆ. ಇವರ ನಿರಂತರ ತಪ್ಪು ವರ್ತನೆಗೆ ಬಿಗ್ ಬಾಸ್ ಸಿಟ್ಟಾಗಿದ್ದು, ಮುಂದೇನು ಎಂಬ ಕುತೂಹಲ ಮೂಡಿಸಿದೆ.

ರೇಜಿಗೆ ಹುಟ್ಟಿಸಿದ ಅಶ್ವಿನಿ ಗೌಡ-ಜಾನ್ವಿ; ಅಸಮಾಧಾನ ಹೊರಹಾಕಿದ ಬಿಗ್ ಬಾಸ್
ಬಿಗ್ ಬಾಸ್

Updated on: Nov 20, 2025 | 6:59 AM

ಬಿಗ್ ಬಾಸ್ (Bigg Boss ) ಮನೆಯಲ್ಲಿ ಪದೇ ಪದೇ ನಿಯಮ ಮುರಿಯುವ ಸಾಹಸಕ್ಕೆ ಯಾರೂ ಹೋಗುವುದಿಲ್ಲ. ಒಮ್ಮೆ ನಿಯಮ ಮುರಿದ ಬಳಿಕ ಬಿಗ್ ಬಾಸ್​ನಿಂದ ಎಚ್ಚರಿಕೆ ಬಂದರೆ ಎಚ್ಚೆತ್ತುಕೊಳ್ಳುತ್ತಾರೆ. ಆದರೆ, ಅಶ್ವಿನಿ ಗೌಡ ಜಾನ್ವಿ ಆ ರೀತಿ ಅಲ್ಲ. ಅವರು ಪದೇ ಪದೇ ನಿಯಮ ಉಲ್ಲಂಘನೆ ಮಾಡಿದ್ದಾರೆ. ಅವರು ನಡೆದುಕೊಂಡ ರೀತಿಗೆ ಬಿಗ್ ಬಾಸ್ ಅಸಮಾಧಾನ ಹೊರಹಾಕಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಅಶ್ವಿನಿ ಗೌಡ ಹಾಗೂ ಜಾನ್ವಿ ಅವರು ಬಿಗ್ ಬಾಸ್​ನಲ್ಲಿ ಈ ವಾರ ನೇರವಾಗಿ ನಾಮಿನೇಟ್ ಆಗಿದ್ದಾರೆ. ಇದಕ್ಕೆ ಕಾರಣ ಅವರು ಮಾಡಿದ ತಪ್ಪು. ಈ ಮೊದಲು ಚೇಂಜಿಂಗ್ ರೂಂನಲ್ಲಿ ಪಿಸುದನಿಯಲ್ಲಿ ಇವರು ಮಾತನಾಡಿದ್ದರು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈ ಬಗ್ಗೆ ಸುದೀಪ್ ಅವರು ಕ್ಲಾಸ್ ಕೂಡ ತೆಗೆದುಕೊಂಡಿದ್ದರು. ಆದರೂ ಇವರು ಬದಲಾಗಲಿಲ್ಲ.

ಆ ವಾರದ ಎಪಿಸೋಡ್​ ಮುಗಿಯುತ್ತಿದ್ದಂತೆ ಮತ್ತೆ ಡ್ರೆಸ್ಸಿಂಗ್ ರೂಂಗೆ ಹೋಗಿ ಇದೇ ತಪ್ಪನ್ನು ಮಾಡಿದ್ದರು. ಮತ್ತೆ ಪಿಸುದನಲ್ಲಿಯಲ್ಲಿ ಮಾತನಾಡಿದ್ದರು. ಇದರಿಂದ ಅಸಮಾಧಾನಗೊಂಡ ಬಿಗ್ ಬಾಸ್ ಇವರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು. ಆದರೂ ಇವರು ಬುದ್ಧಿ ಕಲಿತಂತೆ ಇಲ್ಲ. ನವೆಂಬರ್ 19ರ ಎಪಿಸೋಡ್​ನಲ್ಲಿ ಇವರು ಪಿಸುಧ್ವನಿಯಲ್ಲಿ ಮಾತನಾಡಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಬಿಟ್ಟು ತೆರಳುವ ನಿರ್ಧಾರ ಮಾಡಿದ ಅಶ್ವಿನಿ ಗೌಡ

ಎಲ್ಲರೂ ಸೋಫಾ ಮೇಲೆ ಕುಳಿತಿದ್ದರು. ಈ ವೇಳೆ ಅಶ್ವಿನಿ ಹಾಗೂ ಜಾನ್ವಿ ಪಿಸುಧ್ವನಿಯಲ್ಲಿ ಮಾತನಾಡಿದರು. ಇದರಿಂದ ಬಿಗ್ ಬಾಸ್ ಸಿಟ್ಟಾದರು. ‘ಅಶ್ವಿನಿ, ಜಾನ್ವಿ ನೇರವಾಗಿ ನಾಮಿನೇಟ್ ಆಗಲು ಕಾರಣ ಗೊತ್ತಿದೆ ಅಲ್ಲವೇ? ಗೊತ್ತಿದ್ದೂ ಪದೇ ಪದೇ ಪಿಸುಧ್ವನಿಯಲ್ಲಿ ಮಾತನಾಡೋದು ಎಷ್ಟು ಸರಿ’ ಎಂದು ಬಿಗ್ ಬಾಸ್ ಕೇಳಿದರು. ಈ ವೇಳೆ ಇಬ್ಬರೂ ಕ್ಷಮೆ ಕೇಳಿದರು. ಈ ವೇಳೆ ಬಿಗ್ ಬಾಸ್ ‘ಇರಲಿ’ ಎಂದು ಬೇರೆಯದೇ ಟೋನ್​ನಲ್ಲಿ ಹೇಳಿದರು. ಅವರ ಧ್ವನಿಯಲ್ಲಿ ಅಸಮಧಾನ ಸ್ಪಷ್ಟವಾಗಿ ಕಾಣುತ್ತಿತ್ತು. ನೇರ ನಾಮಿನೇಷನ್ ಅಂತಹ ದೊಡ್ಡ ಶಿಕ್ಷೆ ಕೊಟ್ಟರೂ ಅವರು ಬದಲಾಗಿಲ್ಲ ಎಂದರೆ ಇನ್ನೇನು ಮಾಡಲು ಸಾಧ್ಯ ಎಂದು ಬಿಗ್ ಬಾಸ್​ಗೆ ಬಹುಶಃ ಅನಿಸಿರಬೇಕು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.