
ಬಿಗ್ ಬಾಸ್ (Bigg Boss) ಮನೆಯಲ್ಲಿ ಅಶ್ವಿನಿ ಗೌಡ ಅವರು ತಾವು ನಡೆದಿದ್ದೇ ಹಾದಿ ಎಂಬ ರೀತಿಯಲ್ಲಿ ಆಗಿತ್ತು. ಅವರು ಕಂಟೆಂಟ್ ಕ್ರಿಯೇಟ್ ಮಾಡಬೇಕು ಎಂದು ಏನೇನೋ ಮಾಡುತ್ತಿದ್ದರು. ಆದರೆ, ಇದು ಸರಿ ಅಲ್ಲ ಎಂದು ಸುದೀಪ್ ತಿದ್ದಿ ಹೇಳಿದ್ದಾರೆ. ಜೊತೆಗೆ ಶಿಕ್ಷೆ ಕೂಡ ನೀಡಿದ್ದಾರೆ. ಈ ಶಿಕ್ಷೆಯನ್ನು ಅಶ್ವಿನಿ ಗೌಡ ಅವರು ಚಾಚೂ ತಪ್ಪದೇ ಮಾಡಿದ್ದಾರೆ. ಮಾಡಿದ ತಪ್ಪಿಗೆ ಇದು ಪ್ರಾಯಶ್ಚಿತ ಎಂದು ಅನೇಕರು ಹೇಳಿದ್ದಾರೆ.
ಬಿಗ್ ಬಾಸ್ ಸಾಕಷ್ಟು ನಿಯಮಗಳನ್ನು ಮಾಡಿದ್ದಾರೆ. ಈ ನಿಯಮ ಚಾಚೂತಪ್ಪದೆ ಪಾಲನೆ ಆಗಬೇಕು. ಈ ನಿಯಮ ಪಾಲಿಸಿಲ್ಲ ಎಂದರೆ ಮೊದಲು ಎಚ್ಚರಿಕೆ ಬರುತ್ತದೆ. ಆ ಬಳಿಕ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅಶ್ವಿನಿ ಗೌಡ ಅವರು ಕಳಪೆ ಪಟ್ಟ ಪಡೆದಾಗ ಗೊತ್ತಿದ್ದೂ ಗೊತ್ತಿದ್ದೂ ತಪ್ಪು ಮಾಡಿದ್ದರು. ಈ ತಪ್ಪಿಗೆ ಸುದೀಪ್ ಶಿಕ್ಷೆ ನೀಡಿದ್ದಾರೆ.
ಬಿಗ್ ಬಾಸ್ ಕ್ಯಾಪ್ಟನ್ ಆದ ರಘು ಅವರಿಗೆ ಕಳೆದ ವಾರ ವಿಶೇಷ ಅಧಿಕಾರ ಒಂದನ್ನು ನೀಡಲಾಯಿತು. ಇದರ ಪ್ರಕಾರ ರಘು ಅವರು ಒಬ್ಬರನ್ನು ಕಳಪೆ ಸ್ಥಾನಕ್ಕೆ ಆಯ್ಕೆ ಮಾಡಬೇಕಿತ್ತು. ಈ ವೇಳೆ ಅಶ್ವಿನಿ ಗೌಡ ಹೆಸರನ್ನು ರಘು ಕಳಪೆ ಸ್ಥಾನಕ್ಕೆ ಸೂಚಿಸಿದರು. ಇದರಿಂದ ಅಶ್ವಿನಿ ಗೌಡ ಅವರಿಗೆ ಸಾಕಷ್ಟು ಕೋಪ ಹಾಗೂ ಸಿಟ್ಟು ಬಂತು. ಅವರು ರಘು ವಿರುದ್ಧ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದರು.
ಇದನ್ನೂ ಓದಿ: ಸಾಂಗ್ ಆಗಿ ಬದಲಾಯ್ತು ಗಿಲ್ಲಿ ಹೇಳಿದ್ದ ‘ದೊಡ್ಡವ್ವ ದೋಸೆ ಕೊಡು’ ಡೈಲಾಗ್; ನೀವು ಕೇಳಿ
ಈ ಕಾರಣದಿಂದಲೇ ಉದ್ದೇಶಪೂರ್ವಕವಾಗಿ ನಿಯಮಗಳನ್ನು ಮುರಿದರು. ಈ ವಿಚಾರದಲ್ಲಿ ಸುದೀಪ್ ಅವರಿಗೆ ಬೇಸರ ಆಗಿದೆ. ಈ ಕಾರಣದಿಂದಲೇ ‘ಅಶ್ವಿನಿ ಅವರೇ ನೀವು ಕ್ಯಾಪ್ಟನ್ಗೆ ಕೀಟಲೆ ಮಾಡಬೇಕು ಎಂದು ನಿರ್ಧರಿಸಿದಿರಿ ಓಕೆ. ಆದರೆ, ಬಿಗ್ ಬಾಸ್ ನಿಯಮಗಳನ್ನು ಮುರಿದಿದ್ದೀರಿ. ಹೀಗಾಗಿ, ಗಾರ್ಡನ್ ಏರಿಯಾದಲ್ಲಿರುವ ಎಲ್ಲಾ ಕ್ಯಾಮೆರಾಗಳಿಗೆ ನೀವು ಕ್ಷಮೆ ಕೇಳಲೇಬೇಕು’ ಎಂದು ಸುದೀಪ್ ಸೂಚಿಸಿದರು. ಅಂತೆಯೇ ಅಶ್ವಿನಿ ಗೌಡ ಅವರು ಹೋಗಿ ಎಲ್ಲಾ ಕ್ಯಾಮೆರಾಗಳ ಎದುರು ಕ್ಷಮೆ ಕೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:04 pm, Mon, 27 October 25