Sanya Iyer: ‘ನಾನು ಮದ್ಯಪಾನ ಮಾಡಿರಲಿಲ್ಲ’: ಕಂಬಳ ಗಲಾಟೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಸಾನ್ಯಾ ಐಯ್ಯರ್​ ಸ್ಪಷ್ಟನೆ

|

Updated on: Jan 31, 2023 | 6:30 PM

Sanya Iyer | Kambala Controversy: ಕಂಬಳಕ್ಕೆ ಬರುವಾಗ ಸಾನ್ಯಾ ಐಯ್ಯರ್​ ಅವರು ತಮ್ಮ ಸ್ನೇಹಿತರ ಜೊತೆ ಸೇರಿ ಮದ್ಯಪಾನ ಮಾಡಿದ್ದರು ಎಂಬ ಆರೋಪ ಎದುರಾಗಿದೆ. ಆ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ.

Sanya Iyer: ‘ನಾನು ಮದ್ಯಪಾನ ಮಾಡಿರಲಿಲ್ಲ’: ಕಂಬಳ ಗಲಾಟೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಸಾನ್ಯಾ ಐಯ್ಯರ್​ ಸ್ಪಷ್ಟನೆ
ಸಾನ್ಯಾ ಐಯ್ಯರ್
Follow us on

ಕಿರುತೆರೆ ನಟಿ ಸಾನ್ಯಾ ಐಯ್ಯರ್​ ಅವರು ವಿವಾದದಲ್ಲಿ ಸಿಲುಕಿದ್ದಾರೆ. ಇತ್ತೀಚೆಗೆ ಕಂಬಳ (Kambala) ವೀಕ್ಷಿಸಲು ಅವರು ತೆರಳಿದ್ದಾಗ ಯುವಕನೊಬ್ಬನ ಜೊತೆ ಜಗಳ ಆಗಿದೆ. ಆ ಗಲಾಟೆ ಕುರಿತು ಹಲವಾರು ಸುದ್ದಿಗಳು ಹಬ್ಬಿವೆ. ಅವುಗಳ ಕುರಿತು ಸ್ಪಷ್ಟನೆ ನೀಡಲು ಸಾನ್ಯಾ ಐಯ್ಯರ್​ ಅವರು ಇಂದು (ಜ.31) ತುರ್ತು ಸುದ್ದಿಗೋಷ್ಠಿ ಕರೆದಿದ್ದಾರೆ. ಈ ವೇಳೆ ಅವರು ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ‘ನಾವು ಕಂಬಳ ನೋಡಲು ಪುತ್ತೂರಿಗೆ ಹೋಗಿದ್ವಿ. ನನ್ನನ್ನು ಅತಿಥಿಯಾಗಿ ಕರೆದಿದ್ದರು. ಆ ಸಾಂಸ್ಕೃತಿಕ ಕ್ರೀಡೆಯನ್ನು ಸರಿಯಾಗಿ ನೋಡಲು ಸಾಧ್ಯವಾಗಿರಲಿಲ್ಲ. ಮತ್ತೆ ಸ್ನೇಹಿತೆಯರ ಜೊತೆ ಕಂಬಳ ನೋಡಲು ಬಂದೆ. ಆಗ ನಶೆಯಲ್ಲಿ ಇದ್ದ ಓರ್ವ ಯುವಕ ಕಿರುಕುಳ ನೀಡಲು ಪ್ರಯತ್ನಿಸಿದ. ಆಗ ನಾವು ಜೋರಾಗಿ ಕಿರುಚಿಕೊಂಡೆವು’ ಎಂದು ಸಾನ್ಯಾ ಅಯ್ಯರ್​ (Sanya Iyer) ಹೇಳಿದ್ದಾರೆ.

‘ಆ ಹುಡುಗ ಯಾರು? ಅವರ ಹೆಸರು ಏನು ಎಂಬುದು ಕೂಡ ನಮಗೆ ತಿಳಿದಿಲ್ಲ. ಬಂದು ಮೈಮೇಲೆ ಬಿದ್ದ. ನಾವು ಕಿರುಚಿದ್ದಕ್ಕೆ ಜನರು ಸೇರಿದರು. ಆಗ ಅವನು ಎಸ್ಕೇಪ್​ ಆದ. ನಮ್ಮ ಕೈಗೆ ಸಿಗಲಿಲ್ಲ. ನಾವು ಬರುತ್ತೇವೆ ಎಂಬುದನ್ನು ಮುಖ್ಯ ಆಯೋಜಕರಿಗೆ ನಾವು ತಿಳಿಸಿರಲಿಲ್ಲ. ಒಂದು ವೇಳೆ ತಿಳಿಸಿದ್ದರೆ ಅವರು ಸರಿಯಾಗಿ ಕರೆದುಕೊಂಡು ಹೋಗುತ್ತಿದ್ದರು. ಈ ಘಟನೆ ಆದ ಬಳಿಕ ಅವರಿಗೆ ವಿಷಯ ತಿಳಿಯಿತು. ಆಮೇಲೆ ಅವರು ಬಂದು ನಮ್ಮನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿ ವೇದಿಕೆ ಮೇಲೆ ಕೂರಿಸಿದರು’ ಎಂದು ಸಾನ್ಯಾ ಐಯ್ಯರ್​ ಹೇಳಿದ್ದಾರೆ.

ಇದನ್ನೂ ಓದಿ: Sanya Iyer ‘ಹೆಣ್ಮಕ್ಳ ಮುಟ್ಟಿದ್ರೆ ಸರಿ ಇರಲ್ಲ’; ಕಪಾಳ ಮೋಕ್ಷದ ಬಳಿಕ ಸಾನ್ಯಾ ಐಯ್ಯರ್ ತರಾಟೆ

ಇದನ್ನೂ ಓದಿ
Rakesh Adiga: ‘ಬಿಗ್​ ಬಾಸ್​’ ವಿನ್​ ಆಗದಿದ್ರೂ 12 ಲಕ್ಷ ರೂಪಾಯಿಗೂ ಅಧಿಕ ನಗದು ಬಹುಮಾನ ಪಡೆದ ರಾಕೇಶ್​ ಅಡಿಗ
Deepika Das: ದೀಪಿಕಾ ದಾಸ್​ ಬಿಗ್​ ಬಾಸ್​ ಫಿನಾಲೆಗೆ ಬಂದರೂ ಸಿಗಲಿಲ್ಲ ಟ್ರೋಫಿ; ಎಡವಿದ್ದು ಎಲ್ಲಿ?
Bigg Boss Winner Roopesh Shetty: ‘ನಾನು ಗೆದ್ದಿಲ್ಲ, ನೀವು ಗೆಲ್ಲಿಸಿದ್ದೀರಿ’: ಬಿಗ್​ ಬಾಸ್​ ವಿನ್ನರ್​ ರೂಪೇಶ್​ ಶೆಟ್ಟಿ ಮೊದಲ ರಿಯಾಕ್ಷನ್​
Rakesh Adiga: ‘ಬಿಗ್​ ಬಾಸ್​’ ರನ್ನರ್​ ಅಪ್​ ಆದ ರಾಕೇಶ್​ ಅಡಿಗ; ವಿನ್ನರ್​ ಪಟ್ಟ ಜಸ್ಟ್​ ಮಿಸ್​

ಕಂಬಳಕ್ಕೆ ಬರುವಾಗ ಸಾನ್ಯಾ ಐಯ್ಯರ್​ ಅವರು ತಮ್ಮ ಸ್ನೇಹಿತರ ಜೊತೆ ಸೇರಿ ಮದ್ಯಪಾನ ಮಾಡಿದ್ದರು ಎಂಬ ಆರೋಪ ಎದುರಾಗಿದೆ. ಆ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. ‘ಖಂಡಿತವಾಗಿಯೂ ನಾನು ಮದ್ಯಪಾನ ಮಾಡಿಲ್ಲ. ಬಾಂಬೆಯಲ್ಲಿ ನನ್ನ ಶೂಟಿಂಗ್​ ಇದೆ. ಅದಕ್ಕಾಗಿ ನಾನು ಜೀರೋ ಶುಗರ್​ ಡಯೆಟ್​ ಮಾಡುತ್ತಿದ್ದೇನೆ. ಅಂಥದ್ದರಲ್ಲಿ ಮದ್ಯಪಾನ ಹೇಗೆ ಮಾಡಲಿ? ನಾನು ರುದ್ರಾಕ್ಷಿ ಧರಿಸಿದ್ದೇನೆ. ಹಾಗಾಗಿ ಮದ್ಯಪಾನ, ಧೂಮಪಾನ ಮಾಡಲ್ಲ. ನಾವು ಹೋಗಿದ್ದು ಪವಿತ್ರವಾದ ಸ್ಥಳಕ್ಕೆ. ಅಲ್ಲಿ ದೇವಸ್ಥಾನಗಳು ಇವೆ. ಅಲ್ಲಿ ಎಂಜಾಯ್​ ಮಾಡೋಕೆ ನಾವು ಹೋಗಿರಲಿಲ್ಲ’ ಎಂದು ಸಾನ್ಯಾ ಐಯ್ಯರ್​ ಹೇಳಿದ್ದಾರೆ.

ಕಿರುತೆರೆಯ ಧಾರಾವಾಹಿಗಳ ಮೂಲಕ ಸಾನ್ಯಾ ಐಯ್ಯರ್​ ಅವರು ಮನೆಮಾತಾಗಿದ್ದಾರೆ. ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಮೊದಲ ಸೀಸನ್​ ಹಾಗೂ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ರಲ್ಲಿ ಸ್ಪರ್ಧಿಸಿದ ಬಳಿಕ ಅವರ ಜನಪ್ರಿಯತೆ ಹೆಚ್ಚಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:30 pm, Tue, 31 January 23