Bigg Boss Winner Roopesh Shetty: ‘ನಾನು ಗೆದ್ದಿಲ್ಲ, ನೀವು ಗೆಲ್ಲಿಸಿದ್ದೀರಿ’: ಬಿಗ್​ ಬಾಸ್​ ವಿನ್ನರ್​ ರೂಪೇಶ್​ ಶೆಟ್ಟಿ ಮೊದಲ ರಿಯಾಕ್ಷನ್​

Roopesh Shetty | BBK 9 Winner: ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ರಲ್ಲಿ ರೂಪೇಶ್​ ಶೆಟ್ಟಿ ವಿನ್ನರ್​ ಆಗಿದ್ದಾರೆ. ಟ್ರೋಫಿ ಗೆದ್ದ ಬಳಿಕ ಅವರು ತಮ್ಮ ಮೊದಲ ಮಾತುಗಳನ್ನು ಹಂಚಿಕೊಂಡಿದ್ದಾರೆ.

Bigg Boss Winner Roopesh Shetty: ‘ನಾನು ಗೆದ್ದಿಲ್ಲ, ನೀವು ಗೆಲ್ಲಿಸಿದ್ದೀರಿ’: ಬಿಗ್​ ಬಾಸ್​ ವಿನ್ನರ್​ ರೂಪೇಶ್​ ಶೆಟ್ಟಿ ಮೊದಲ ರಿಯಾಕ್ಷನ್​
ಸಾನ್ಯಾ ಐಯ್ಯರ್​, ರೂಪೇಶ್​ ಶೆಟ್ಟಿ
Follow us
TV9 Web
| Updated By: ಮದನ್​ ಕುಮಾರ್​

Updated on:Jan 01, 2023 | 1:17 AM

ಕಲರ್ಸ್ ಕನ್ನಡ ವಾಹಿನಿಯಲ್ಲಿ 100 ದಿನಗಳ ಕಾಲ ಪ್ರಸಾರವಾದ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ (Bigg Boss Kannada Season 9) ಮುಕ್ತಾಯ ಆಗಿದೆ. ಕನ್ನಡ ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಎಂಬ ಖ್ಯಾತಿ ಈ ಕಾರ್ಯಕ್ರಮಕ್ಕೆ ಇದೆ. ಈ ಶೋನಲ್ಲಿ ಕರಾವಳಿ ಪ್ರತಿಭೆ ರೂಪೇಶ್​ ಶೆಟ್ಟಿ ಅವರು ವಿನ್ನರ್​ (Bigg Boss Kannada Winner) ಆಗಿದ್ದಾರೆ. ಶನಿವಾರ (ಡಿ.31) ಅದ್ದೂರಿಯಾಗಿ ನಡೆದ ಫಿನಾಲೆಯಲ್ಲಿ ಕಿಚ್ಚ ಸುದೀಪ್​ ಅವರು ವಿನ್ನರ್​ ಹೆಸರು ಘೋಷಿಸಿದರು. ರೂಪೇಶ್​ ಶೆಟ್ಟಿ ಅವರು ಟ್ರೋಫಿಗೆ ಮುತ್ತಿಟ್ಟರು. ಅವರಿಗೆ ಎಲ್ಲರಿಂದ ಅಭಿನಂದನೆ ಸಲ್ಲಿಸಲಾಗುತ್ತಿದೆ. ಸಾಕಷ್ಟು ಭರವಸೆ ಮೂಡಿಸಿದ್ದ ರಾಕೇಶ್​ ಅಡಿಗ ಅವರು ರನ್ನರ್​ ಅಪ್​ ಆಗಿದ್ದಾರೆ. ಬಿಗ್​ ಬಾಸ್​ ಗೆದ್ದ ಬಳಿಕ ರೂಪೇಶ್​ ಶೆಟ್ಟಿ(Roopesh Shetty) ಮೊದಲ ಮಾತುಗಳನ್ನು ಹಂಚಿಕೊಂಡಿದ್ದಾರೆ.

‘ನಾನು ಕೊನೆಗೂ ವಿನ್​ ಆಗಿದ್ದೇನೆ. ನಿಮ್ಮೆಲ್ಲರಿಗೂ ಹೇಗೆ ಧನ್ಯವಾದ ಹೇಳಬೇಕೋ ತಿಳಿಯುತ್ತಿಲ್ಲ. ಬಿಗ್​ ಬಾಸ್​ ಒಟಿಟಿ ಸೀಸನ್​ನಿಂದ ಇಲ್ಲಿಯ ತನಕ 140 ದಿನಗಳ ಜರ್ನಿ ಎಂದರೆ ಸುಲಭ ಅಲ್ಲ. ನನಗೆ ಸಪೋರ್ಟ್​ ಮಾಡಿದ ಪ್ರತಿಯೊಬ್ಬರಿಗೂ ಥ್ಯಾಂಕ್ಸ್​. ಈ ಪಯಣದಲ್ಲಿ ಏಳು-ಬೀಳುಗಳು ಇದ್ದವು. ಪ್ರತಿ ಕ್ಷಣದಲ್ಲೂ ನೀವೆಲ್ಲರೂ ನನ್ನ ಬೆಂಬಲಕ್ಕೆ ನಿಂತಿದ್ರಿ’ ಎಂದು ವೋಟ್​ ಮಾಡಿದ ಎಲ್ಲರಿಗೂ ರೂಪೇಶ್​ ಶೆಟ್ಟಿ ಧನ್ಯವಾದ ಅರ್ಪಿಸಿದ್ದಾರೆ.

‘ಜನರ ವೋಟ್​ನಿಂದ ನನಗೆ ಆತ್ಮವಿಶ್ವಾಸ ಸಿಕ್ತು. ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ನಿಮ್ಮೆಲ್ಲರಿಗೂ ಇನ್ನೂ ಹೆಮ್ಮೆ ಆಗುವಂತೆ ಮಾಡುತ್ತೇನೆ. ನಾನು ಗೆದ್ದಿರುವುದಲ್ಲ, ನೀವು ಗೆಲ್ಲಿಸಿರುವುದು. ಈ ಗೆಲುವು ನಿಮ್ಮಿಂದ. ನಿಮ್ಮ ಪ್ರೀತಿಗೆ ಬರೀ ಮಾತುಗಳಲ್ಲಿ ಥ್ಯಾಂಕ್ಸ್​ ಹೇಳಿದರೆ ಕಡಿಮೆ. ಹೃದಯದಲ್ಲಿ ನಿಮ್ಮ ಬಗ್ಗೆ ಪ್ರೀತಿ ಯಾವಾಗಲೂ ಇರುತ್ತದೆ’ ಎಂದಿದ್ದಾರೆ ರೂಪೇಶ್​ ಶೆಟ್ಟಿ.

ಇದನ್ನೂ ಓದಿ
Image
Rakesh Adiga: ‘ಬಿಗ್​ ಬಾಸ್​’ ರನ್ನರ್​ ಅಪ್​ ಆದ ರಾಕೇಶ್​ ಅಡಿಗ; ವಿನ್ನರ್​ ಪಟ್ಟ ಜಸ್ಟ್​ ಮಿಸ್​
Image
Deepika Das: ಬಿಗ್​ ಬಾಸ್​ ಗೆದ್ದ 2ನೇ ಮಹಿಳೆ ಆಗಬೇಕು ಎಂಬ ದೀಪಿಕಾ ದಾಸ್​ ಕನಸು ಭಗ್ನ; ಫಿನಾಲೆಯಲ್ಲಿ ಔಟ್​
Image
Roopesh Shetty: ‘ಬಿಗ್​ ಬಾಸ್​ನಿಂದ ಹೊರಬಂದು ಸಾನ್ಯಾನ ತಬ್ಬಿಕೊಂಡು ಈ ವಿಚಾರ ಫಸ್ಟ್​ ಕೇಳ್ತೀನಿ’: ರೂಪೇಶ್​ ಶೆಟ್ಟಿ ಮನದ ಮಾತು
Image
Bigg Boss Finale: ಬಿಗ್​ ಬಾಸ್​ ಫಿನಾಲೆಗಾಗಿ ವಿಶೇಷ ಗೆಟಪ್​ನೊಂದಿಗೆ ಕ್ಯಾಮೆರಾ ಮುಂದೆ ಬಂದ ರಾಕೇಶ್​ ಅಡಿಗ

ಇದನ್ನೂ ಓದಿ: Rakesh Adiga: ‘ಬಿಗ್​ ಬಾಸ್​’ ರನ್ನರ್​ ಅಪ್​ ಆದ ರಾಕೇಶ್​ ಅಡಿಗ; ವಿನ್ನರ್​ ಪಟ್ಟ ಜಸ್ಟ್​ ಮಿಸ್​

‘ಬಿಗ್​ ಬಾಸ್​ ವೇದಿಕೆಗೆ ಧನ್ಯವಾದಗಳು. ಸುದೀಪ್​ ಮತ್ತು ಪರಮೇಶ್ವರ್​ ಗುಂಡ್ಕಲ್​ ಅವರಿಗೆ ಥ್ಯಾಂಕ್ಸ್​’ ಎಂದು ರೂಪೇಶ್​ ಶೆಟ್ಟಿ ಹೇಳಿದ್ದಾರೆ. ಆಕರ್ಷಕ ಟ್ರೋಫಿ ಜೊತೆಗೆ 60 ಲಕ್ಷ ರೂಪಾಯಿ ನಗದು ಬಹುಮಾನ ಅವರ ಕೈ ಸೇರಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:13 am, Sun, 1 January 23

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್