AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rakesh Adiga: ‘ಬಿಗ್​ ಬಾಸ್​’ ರನ್ನರ್​ ಅಪ್​ ಆದ ರಾಕೇಶ್​ ಅಡಿಗ; ವಿನ್ನರ್​ ಪಟ್ಟ ಜಸ್ಟ್​ ಮಿಸ್​

Bigg Boss Kannada Season 9 | BBK 9 Runner Up: ಹಲವು ಕಾರಣಗಳಿಂದಾಗಿ ವೀಕ್ಷಕರಿಗೆ ರಾಕೇಶ್​ ಅಡಿಗ ಅವರು ಫೇವರಿಟ್​ ಆಗಿದ್ದರು. ಅವರೇ ವಿನ್ನರ್​ ಆಗುತ್ತಾರೆ ಎಂದು ಅನೇಕರು ನಿರೀಕ್ಷಿಸಿದ್ದರು. ಆದರೆ ಹಾಗಾಗಲಿಲ್ಲ.

Rakesh Adiga: ‘ಬಿಗ್​ ಬಾಸ್​’ ರನ್ನರ್​ ಅಪ್​ ಆದ ರಾಕೇಶ್​ ಅಡಿಗ; ವಿನ್ನರ್​ ಪಟ್ಟ ಜಸ್ಟ್​ ಮಿಸ್​
ರಾಕೇಶ್ ಅಡಿಗ
TV9 Web
| Edited By: |

Updated on: Jan 01, 2023 | 12:28 AM

Share

ಸಖತ್​ ಕಲರ್​ಫುಲ್​ ಆಗಿ ನಡೆದ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ ಶೋಗೆ ತೆರೆ ಬಿದ್ದಿದೆ. 100 ದಿನಗಳ ಏಳು-ಬೀಳಿನ ಪಯಣ ಮುಕ್ತಾಯ ಆಗಿದೆ. ಫಿನಾಲೆಯ ಅಂತಿಮ ಘಟ್ಟದಲ್ಲಿ ರಾಕೇಶ್​ ಅಡಿಗ (Rakesh Adiga) ಮತ್ತು ರೂಪೇಶ್​ ಶೆಟ್ಟಿ ನಡುವೆ ಹಣಾಹಣಿ ನಡೆಯಿತು. ಅಂತಿಮವಾಗಿ ರೂಪೇಶ್​ ಶೆಟ್ಟಿ ಅವರು ಬಿಗ್​ ಬಾಸ್​ ವಿನ್ನರ್​ (Bigg Boss Kannada Winner) ಆಗಿ ಹೊರಹೊಮ್ಮಿದರು. ರನ್ನರ್​ ಅಪ್​ ಸ್ಥಾನಕ್ಕೆ ರಾಕೇಶ್​ ಅಡಿಗ ತೃಪ್ತಿಪಟ್ಟುಕೊಂಡರು. ಕಿಚ್ಚ ಸುದೀಪ್​ ಅವರು ಸಖತ್​ ಎನರ್ಜಿಟಿಕ್​ ಆಗಿ ಫಿನಾಲೆ (Bigg Boss Finale) ಎಪಿಸೋಡ್​ ನಡೆಸಿಕೊಟ್ಟರು. ಪ್ರತಿ ಬಾರಿಯೂ ವಿನ್ನರ್​ ಆಯ್ಕೆಯ ವಿಚಾರದಲ್ಲಿ ಒಂದು ವರ್ಗದ ಪ್ರೇಕ್ಷಕರಿಗೆ ಬೇಸರ ಆಗುವುದು ಖಂಡಿತ. ಅದು ಈ ಬಾರಿ ಕೂಡ ಮುಂದುವರಿದಿದೆ. ರಾಕೇಶ್​ ಗೆಲ್ಲಬೇಕು ಎಂಬುದು ಅನೇಕರ ಬಯಕೆ ಆಗಿತ್ತು. ಅಂಥವರಿಗೆ ನಿರಾಸೆ ಆಗಿದೆ.

ರಾಕೇಶ್​ ಅಡಿಗ ಅವರು ಬಿಗ್​ ಬಾಸ್​ ಒಟಿಟಿ ಮೊದಲ ಸೀಸನ್​ನಲ್ಲಿ ಸ್ಪರ್ಧಿಸಿದರು. ಅಲ್ಲಿ ಉತ್ತಮ ಪರ್ಫಾರ್ಮೆನ್ಸ್​ ನೀಡಿ ಟಿವಿ ಸೀಸನ್​ಗೆ ಎಂಟ್ರಿ ಪಡೆದರು. ಎಲ್ಲರ ಜೊತೆಗೂ ಅವರು ಸ್ನೇಹ ಬೆಳೆಸಿದರು. ಯಾರೋ ಒಬ್ಬರ ಜೊತೆ ಮಾತ್ರ ಆಪ್ತವಾಗುವ ತಪ್ಪನ್ನು ಅವರು ಮಾಡಲಿಲ್ಲ. ಹಾಡುಗಳ ಮೂಲಕವೂ ಅವರು ಮನರಂಜನೆ ನೀಡಿದರು. ಎಲ್ಲ ಸಂದರ್ಭವನ್ನೂ ಕೂಲ್​ ಆಗಿ ನಿಭಾಯಿಸಿದರು. ಜಗಳಗಳು ನಡೆದರೂ ಕೂಡ ಅದನ್ನು ದ್ವೇಷದ ಹಂತಕ್ಕೆ ತೆಗೆದುಕೊಂಡು ಹೋಗಲಿಲ್ಲ.

ಇದನ್ನೂ ಓದಿ: Bigg Boss Finale: ಬಿಗ್​ ಬಾಸ್​ ಫಿನಾಲೆಗಾಗಿ ವಿಶೇಷ ಗೆಟಪ್​ನೊಂದಿಗೆ ಕ್ಯಾಮೆರಾ ಮುಂದೆ ಬಂದ ರಾಕೇಶ್​ ಅಡಿಗ

ಇದನ್ನೂ ಓದಿ
Image
Roopesh Shetty: ‘ಬಿಗ್​ ಬಾಸ್​ನಿಂದ ಹೊರಬಂದು ಸಾನ್ಯಾನ ತಬ್ಬಿಕೊಂಡು ಈ ವಿಚಾರ ಫಸ್ಟ್​ ಕೇಳ್ತೀನಿ’: ರೂಪೇಶ್​ ಶೆಟ್ಟಿ ಮನದ ಮಾತು
Image
Bigg Boss Finale: ಬಿಗ್​ ಬಾಸ್​ ಫಿನಾಲೆಗಾಗಿ ವಿಶೇಷ ಗೆಟಪ್​ನೊಂದಿಗೆ ಕ್ಯಾಮೆರಾ ಮುಂದೆ ಬಂದ ರಾಕೇಶ್​ ಅಡಿಗ
Image
BBK 9 Finale: ಬಿಗ್​ ಬಾಸ್​ ಫಿನಾಲೆ ನಡೆಸಿಕೊಡಲು ಝಗಮಗಿಸುವ ಡ್ರೆಸ್​ ಧರಿಸಿ ವೇದಿಕೆಗೆ ಬಂದ ಕಿಚ್ಚ ಸುದೀಪ್​
Image
BBK9: ಬಿಗ್​ ಬಾಸ್​ ಮನೆಯಲ್ಲಿ ಆರ್ಯವರ್ಧನ್​ ಗುರೂಜಿ ಡಬಲ್​ ಗೇಮ್​; ಸ್ಪರ್ಧಿಗಳ ನೇರ ಆರೋಪ

ಈ ಎಲ್ಲ ಕಾರಣಗಳಿಂದಾಗಿ ವೀಕ್ಷಕರಿಗೆ ರಾಕೇಶ್​ ಅಡಿಗ ಅವರು ಫೇವರಿಟ್​ ಆಗಿದ್ದರು. ಅವರೇ ವಿನ್ನರ್​ ಆಗುತ್ತಾರೆ ಎಂದು ಇತರೆ ಸ್ಪರ್ಧಿಗಳು ಕೂಡ ನಿರೀಕ್ಷಿಸಿದ್ದರು. ಆದರೆ ಅಂತಿಮವಾಗಿ ರೂಪೇಶ್​ ಶೆಟ್ಟಿಗೆ ವಿಜಯ ಲಕ್ಷ್ಮಿ ಒಲಿದಿದ್ದಾಳೆ. ಒಟ್ಟಿನಲ್ಲಿ ಇಬ್ಬರೂ ಕೂಡ ಜನಮನ ಗೆದ್ದಿದ್ದಾರೆ. ಇದು ಅವರಿಬ್ಬರ ಸಿನಿಮಾ ಜರ್ನಿಗೆ ಹೊಸ ಮೈಲೇಜ್​ ನೀಡಲಿದೆ. 2ನೇ ರನ್ನರ್​ ಅಪ್​ ಸ್ಥಾನಕ್ಕೆ ದೀಪಿಕಾ ದಾಸ್​ ಹಾಗೂ 3ನೇ ರನ್ನರ್​ ಅಪ್ ಸ್ಥಾನಕ್ಕೆ ರೂಪೇಶ್​ ರಾಜಣ್ಣ ಅವರು ಅವರು ತೃಪ್ತಿಪಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ರಾಕೇಶ್​ ಅಡಿಗ ಜತೆ ಇರೋದೇ ಸ್ಫೂರ್ತಿ ಗೌಡಗೆ ಮುಳುವಾಯ್ತಾ? ನಟಿಗೆ ಕಾಡುತ್ತಿದೆ ಭಯ

ಚಿತ್ರರಂಗದಲ್ಲಿ ರಾಕೇಶ್​ ಅಡಿಗ ಅವರು ಅನೇಕ ವರ್ಷಗಳಿಂದ ಇದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದಾರೆ. ಬಿಗ್​ ಬಾಸ್​ಗೆ ಕಾಲಿಟ್ಟ ಬಳಿಕ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಯಿತು. ರಾಕೇಶ್​ ಅಡಿಗ ಅವರ ನಿಜವಾದ ವ್ಯಕ್ತಿತ್ವ ಏನು ಎಂಬುದನ್ನು ತಿಳಿಯಲು ಈ ರಿಯಾಲಿಟಿ ಶೋ ಸಹಕಾರಿ ಆಯಿತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು
ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ
ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ
ಎಸ್​​. ಜಾನಕಿ ಅಂತಿಮ ದರ್ಶನದ ನೇರಪ್ರಸಾರ
ಎಸ್​​. ಜಾನಕಿ ಅಂತಿಮ ದರ್ಶನದ ನೇರಪ್ರಸಾರ