Deepika Das: ಬಿಗ್​ ಬಾಸ್​ ಗೆದ್ದ 2ನೇ ಮಹಿಳೆ ಆಗಬೇಕು ಎಂಬ ದೀಪಿಕಾ ದಾಸ್​ ಕನಸು ಭಗ್ನ; ಫಿನಾಲೆಯಲ್ಲಿ ಔಟ್​

Bigg Boss Kannada Season 9 | BBK 9 Finale: ‘ಬಿಗ್​ ಬಾಸ್ ಕನ್ನಡ ಸೀಸನ್​ 9’ ಫಿನಾಲೆಯಲ್ಲಿ ದೀಪಿಕಾ ದಾಸ್​ ಔಟ್​ ಆಗಿದ್ದಾರೆ. 2ನೇ ರನ್ನರ್​ ಅಪ್​ ಸ್ಥಾನಕ್ಕೆ ಅವರು ತೃಪ್ತಿಪಟ್ಟುಕೊಂಡಿದ್ದಾರೆ.

Deepika Das: ಬಿಗ್​ ಬಾಸ್​ ಗೆದ್ದ 2ನೇ ಮಹಿಳೆ ಆಗಬೇಕು ಎಂಬ ದೀಪಿಕಾ ದಾಸ್​ ಕನಸು ಭಗ್ನ; ಫಿನಾಲೆಯಲ್ಲಿ ಔಟ್​
ದೀಪಿಕಾ ದಾಸ್
Follow us
TV9 Web
| Updated By: ಮದನ್​ ಕುಮಾರ್​

Updated on: Dec 31, 2022 | 10:43 PM

ನಟಿ ದೀಪಿಕಾ ದಾಸ್​ (Deepika Das) ಅವರು ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡು ಬಿಗ್​​ ಬಾಸ್​ ಕಾರ್ಯಕ್ರಮಕ್ಕೆ ಬಂದಿದ್ದರು. ಆದರೆ ಫಿನಾಲೆಯಲ್ಲಿ (BBK 9 Finale) ಅವರು ಮುಗ್ಗರಿಸಿದ್ದಾರೆ. ಹೌದು, ‘ಬಿಗ್​ ಬಾಸ್​ ಕನ್ನಡ ಸೀಸನ್ 9’ (Bigg Boss Kannada Season 9) ಶೋಗೆ ಶನಿವಾರ (ಡಿ.31) ಫಿನಾಲೆ ನಡೆದಿದೆ. ಕೊನೆತನಕ ಫೈಟ್​ ನೀಡಿದ್ದ ದೀಪಿಕಾ ದಾಸ್​ ಅವರು ಎಲಿಮಿನೇಟ್​ ಆಗಿದ್ದಾರೆ. ಟ್ರೋಫಿ ಪಡೆಯಬೇಕು ಎಂಬ ಅವರ ಆಸೆ ಈಡೇರಿಲ್ಲ. ಶುಕ್ರವಾರದ (ಡಿ.30) ಸಂಚಿಕೆಯಲ್ಲಿ ಅವರು ತಮ್ಮ ಕನಸಿನ ಬಗ್ಗೆ ಹೇಳಿಕೊಂಡಿದ್ದರು. ‘ಈವರೆಗೂ ಕನ್ನಡದಲ್ಲಿ ಮಹಿಳಾ ಸ್ಪರ್ಧಿ ಬಿಗ್​ ಬಾಸ್​ ಗೆದ್ದಿದ್ದು ಒಮ್ಮೆ ಮಾತ್ರ. ನಾನು ಎರಡನೆಯವಳು ನಾನಾಗಬೇಕು’ ಎಂದು ದೀಪಿಕಾ ದಾಸ್​ ಹೇಳಿದ್ದರು. ಆದರೆ ಅವರ ಈ ಕನಸು ಭಗ್ನ ಆಗಿದೆ.

ಈ ಬಾರಿ ಇಬ್ಬರು ಮಹಿಳಾ ಸ್ಪರ್ಧಿಗಳು (ದಿವ್ಯಾ ಉರುಡುಗ, ದೀಪಿಕಾ ದಾಸ್​) ಫಿನಾಲೆ ತನಕ ಬಂದರು. ಇಬ್ಬರಲ್ಲಿ ಒಬ್ಬರಾದರೂ ಟ್ರೋಫಿ ಗೆಲ್ಲಲಿ ಎಂದು ಅನೇಕ ಅಭಿಮಾನಿಗಳು ಬಯಸಿದ್ದುಂಟು. ಆದರೆ ಅದು ಸಾಧ್ಯವಾಗಲಿಲ್ಲ. ದೀಪಿಕಾ ದಾಸ್​ ಅವರು 2ನೇ ರನ್ನರ್​ ಅಪ್​ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಬಿಗ್​ ಬಾಸ್​ ಮನೆಯನ್ನು ತೊರೆದಿದ್ದಾರೆ.

ಇದನ್ನೂ ಓದಿ: Roopesh Shetty: ‘ಸಾನ್ಯಾ ಐಯ್ಯರ್ ಅಂದ್ರೆ ಯಾರು?’ ದೀಪಿಕಾ ದಾಸ್​​ಗೆ ಪ್ರಶ್ನೆ ಮಾಡಿದ ರೂಪೇಶ್ ಶೆಟ್ಟಿ

ಇದನ್ನೂ ಓದಿ
Image
Roopesh Shetty: ‘ಬಿಗ್​ ಬಾಸ್​ನಿಂದ ಹೊರಬಂದು ಸಾನ್ಯಾನ ತಬ್ಬಿಕೊಂಡು ಈ ವಿಚಾರ ಫಸ್ಟ್​ ಕೇಳ್ತೀನಿ’: ರೂಪೇಶ್​ ಶೆಟ್ಟಿ ಮನದ ಮಾತು
Image
Bigg Boss Finale: ಬಿಗ್​ ಬಾಸ್​ ಫಿನಾಲೆಗಾಗಿ ವಿಶೇಷ ಗೆಟಪ್​ನೊಂದಿಗೆ ಕ್ಯಾಮೆರಾ ಮುಂದೆ ಬಂದ ರಾಕೇಶ್​ ಅಡಿಗ
Image
BBK 9 Finale: ಬಿಗ್​ ಬಾಸ್​ ಫಿನಾಲೆ ನಡೆಸಿಕೊಡಲು ಝಗಮಗಿಸುವ ಡ್ರೆಸ್​ ಧರಿಸಿ ವೇದಿಕೆಗೆ ಬಂದ ಕಿಚ್ಚ ಸುದೀಪ್​
Image
BBK9: ಬಿಗ್​ ಬಾಸ್​ ಮನೆಯಲ್ಲಿ ಆರ್ಯವರ್ಧನ್​ ಗುರೂಜಿ ಡಬಲ್​ ಗೇಮ್​; ಸ್ಪರ್ಧಿಗಳ ನೇರ ಆರೋಪ

ದೀಪಿಕಾ ದಾಸ್​ ಅವರು ಕಿರುತೆರೆ ಧಾರಾವಾಹಿಗಳ ಜಗತ್ತಿನಲ್ಲಿ ಫೇಮಸ್​ ಆದವರು. ಹಾಗಾಗಿ ಅವರಿಗೆ ಫ್ಯಾನ್​ ಫಾಲೋಯಿಂಗ್​ ಜಾಸ್ತಿ ಇದೆ. ಬಿಗ್​ ಬಾಸ್​ನಲ್ಲಿ ಹೆಚ್ಚಿನ ವೋಟ್​ ಪಡೆಯಲು ಇದು ಸಾಧ್ಯವಾಯ್ತು. ಆದರೆ ಅವರು ಒಮ್ಮೆ ಎಲಿಮಿನೇಟ್​ ಆಗಿ, ನಂತರ ಮತ್ತೆ ವೈಲ್ಡ್​ ಕಾರ್ಡ್​ ಮೂಲಕ ರೀ-ಎಂಟ್ರಿ ಪಡೆದಿದ್ದು ಹಲವರಿಗೆ ಹಿಡಿಸಲಿಲ್ಲ. ಈಗಾಗಲೇ ಎಲಿಮಿನೇಟ್​ ಆದ ಸ್ಪರ್ಧಿಗಳು ಈ ವಿಚಾರವನ್ನು ಶನಿವಾರ ಫಿನಾಲೆಯ ವೇದಿಕೆಯಲ್ಲಿ ಹೇಳಿದ್ದರು.

ಇದನ್ನೂ ಓದಿ: ಬಿಗ್​ ಬಾಸ್​ ಫಿನಾಲೆಯಲ್ಲಿ ದೀಪಿಕಾ ದಾಸ್​

ಬಿಗ್​ ಬಾಸ್​ ಕನ್ನಡ ಸೀಸನ್​ 7ರಲ್ಲಿಯೂ ದೀಪಿಕಾ ದಾಸ್​ ಅವರು ಸ್ಪರ್ಧಿಸಿದ್ದರು. ಆಗಲೂ ಅವರಿಗೆ ಕಪ್​ ಗೆಲ್ಲಲು ಸಾಧ್ಯವಾಗಿರಲಿಲ್ಲ. ಎರಡನೇ ಅವಕಾಶ ಸೀಸನ್​ 9ರಲ್ಲಿ ಸಿಕ್ಕಿತು. ಈ ಬಾರಿ ಅವರು ಫಿನಾಲೆ ತನಕ ಬರಲು ಸಫಲರಾದರೂ ಕೂಡ ಕಪ್​ ಗೆಲ್ಲಲು ಸಾಧ್ಯವಾಗಲಿಲ್ಲ. ಮನರಂಜನೆ ನೀಡುವ ವಿಚಾರದಲ್ಲಿ ದೀಪಿಕಾ ದಾಸ್​ ಹಿಂದೆ ಬಿದ್ದರು. ಅದು ಕೂಡ ಅವರಿಗೆ ಕಡಿಮೆ ವೋಟ್​ ಸಿಗಲು ಕಾರಣ ಆಗಿರಬಹುದು.

ಬಿಗ್​ ಬಾಸ್​ನಲ್ಲಿ ಸ್ಪರ್ಧಿಸಿದ ಬಳಿಕ ದೀಪಿಕಾ ದಾಸ್​ ಅವರ ಜನಪ್ರಿಯತೆ ಹೆಚ್ಚಾಗಿದೆ. ಇದರಿಂದ ಅವರ ವೃತ್ತಿಜೀವನಕ್ಕೆ ಅನುಕೂಲ ಆಗಲಿದೆ. ಸೀರಿಯಲ್​ ಮತ್ತು ಸಿನಿಮಾಗಳಲ್ಲಿ ಅವರಿಗೆ ಇನ್ನಷ್ಟು ಅವಕಾಶಗಳು ಸಿಗಲಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್