AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Winner: ‘ರಾಕೇಶ್​ ಅಡಿಗ ವಿನ್​ ಆಗ್ಬೇಕಿತ್ತು’: ಈ ಬಾರಿಯೂ ಪ್ರೇಕ್ಷಕರಿಂದ ಅಸಮಾಧಾನ

Roopesh Shetty | Rakesh Adiga: ಪ್ರತಿ ಬಾರಿ ಬಿಗ್​ ಬಾಸ್​ ವಿನ್ನರ್​ ಹೆಸರು ಘೋಷಣೆ ಆದಾಗಲೂ ಈ ರೀತಿಯ ಅಭಿಪ್ರಾಯ ವ್ಯಕ್ತವಾಗುತ್ತದೆ. ಅದು ಈ ಬಾರಿಯೂ ಮುಂದುವರಿದಿದೆ.

Bigg Boss Winner: ‘ರಾಕೇಶ್​ ಅಡಿಗ ವಿನ್​ ಆಗ್ಬೇಕಿತ್ತು’: ಈ ಬಾರಿಯೂ ಪ್ರೇಕ್ಷಕರಿಂದ ಅಸಮಾಧಾನ
ರೂಪೇಶ್ ಶೆಟ್ಟಿ, ಕಿಚ್ಚ ಸುದೀಪ್, ರಾಕೇಶ್ ಅಡಿಗ
TV9 Web
| Edited By: |

Updated on: Jan 01, 2023 | 10:30 AM

Share

ಜನಪ್ರಿಯ ರಿಯಾಲಿಟಿ ಶೋ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ ಮುಕ್ತಾಯ ಆಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ 100 ದಿನಗಳ ಕಾಲ ಪ್ರಸಾರವಾದ ಈ ಶೋನ ಫಿನಾಲೆ ಕಾರ್ಯಕ್ರಮ ಡಿ.31ರ ರಾತ್ರಿ ಪ್ರಸಾರವಾಯಿತು. ನಟ ರೂಪೇಶ್​ ಶೆಟ್ಟಿ (Roopesh Shetty) ಅವರಿಗೆ ವಿಜಯಲಕ್ಷ್ಮಿ ಒಲಿದಿದ್ದಾಳೆ. ಬಿಗ್​ ಬಾಸ್​ 9ನೇ ಸೀಸನ್​ನ ವಿನ್ನರ್​ (Bigg Boss Kannada Winner) ಆಗಿ ಅವರು ಹೊರಹೊಮ್ಮಿದ್ದಾರೆ. ಒಟ್ಟು 60 ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಒಂದು ಆಕರ್ಷಕ ಟ್ರೋಫಿ ಅವರ ಕೈ ಸೇರಿದೆ. ನಟ ರಾಕೇಶ್​ ಅಡಿಗ (Rakesh Adiga) ರನ್ನರ್​ ಅಪ್​ ಆಗಿದ್ದಾರೆ. ಒಂದು ವರ್ಗದ ಪ್ರೇಕ್ಷಕರಿಗೆ ಇದು ಬೇಸರ ಮೂಡಿಸಿದೆ. ‘ರಾಕೇಶ್​ ಅಡಿಗ ಅವರೇ ಬಿಗ್​ ಬಾಸ್​ ವಿನ್ನರ್​ ಆಗಬೇಕಿತ್ತು’ ಎಂದು ಹಲವರು ಕಮೆಂಟ್​ ಮಾಡುತ್ತಿದ್ದಾರೆ.

ಪ್ರತಿ ಬಾರಿ ಬಿಗ್​ ಬಾಸ್​ ವಿನ್ನರ್​ ಹೆಸರು ಘೋಷಣೆ ಆದಾಗಲೂ ಈ ರೀತಿಯ ಅಭಿಪ್ರಾಯ ವ್ಯಕ್ತವಾಗುತ್ತದೆ. ಟ್ರೋಫಿ ಗೆಲ್ಲಲು ನಿಜವಾಗಿ ಅರ್ಹವಾದ ವ್ಯಕ್ತಿಯು ರನ್ನರ್​ ಅಪ್​ ಆಗುತ್ತಾರೆ ಎಂಬುದು ಕೆಲವರು ವಾದ. ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ರ ಫಿನಾಲೆ ಮುಗಿಯುತ್ತಿದ್ದಂತೆಯೇ ಈ ಚರ್ಚೆ ಶುರುವಾಗಿದೆ. ರೂಪೇಶ್​ ಶೆಟ್ಟಿ ವಿನ್ನರ್​ ಎಂದು ಕಿಚ್ಚ ಸುದೀಪ್​ ಘೋಷಿಸಿದರು. ಆದರೆ ರಾಕೇಶ್​ ಅಡಿಗ ವಿನ್​ ಆಗಬೇಕಿತ್ತು ಎಂಬ ಅಭಿಪ್ರಾಯ ಹಲವರಿಂದ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ
Image
Deepika Das: ದೀಪಿಕಾ ದಾಸ್​ ಬಿಗ್​ ಬಾಸ್​ ಫಿನಾಲೆಗೆ ಬಂದರೂ ಸಿಗಲಿಲ್ಲ ಟ್ರೋಫಿ; ಎಡವಿದ್ದು ಎಲ್ಲಿ?
Image
Bigg Boss Winner Roopesh Shetty: ‘ನಾನು ಗೆದ್ದಿಲ್ಲ, ನೀವು ಗೆಲ್ಲಿಸಿದ್ದೀರಿ’: ಬಿಗ್​ ಬಾಸ್​ ವಿನ್ನರ್​ ರೂಪೇಶ್​ ಶೆಟ್ಟಿ ಮೊದಲ ರಿಯಾಕ್ಷನ್​
Image
Rakesh Adiga: ‘ಬಿಗ್​ ಬಾಸ್​’ ರನ್ನರ್​ ಅಪ್​ ಆದ ರಾಕೇಶ್​ ಅಡಿಗ; ವಿನ್ನರ್​ ಪಟ್ಟ ಜಸ್ಟ್​ ಮಿಸ್​
Image
Deepika Das: ಬಿಗ್​ ಬಾಸ್​ ಗೆದ್ದ 2ನೇ ಮಹಿಳೆ ಆಗಬೇಕು ಎಂಬ ದೀಪಿಕಾ ದಾಸ್​ ಕನಸು ಭಗ್ನ; ಫಿನಾಲೆಯಲ್ಲಿ ಔಟ್​

ಇದನ್ನೂ ಓದಿ: Rakesh Adiga: ‘ಬಿಗ್​ ಬಾಸ್​’ ರನ್ನರ್​ ಅಪ್​ ಆದ ರಾಕೇಶ್​ ಅಡಿಗ; ವಿನ್ನರ್​ ಪಟ್ಟ ಜಸ್ಟ್​ ಮಿಸ್​

ರಾಕೇಶ್​ ಅಡಿಗ ಮತ್ತು ರೂಪೇಶ್​ ಶೆಟ್ಟಿ ಅವರು ಸಮನಾಗಿ ಫೈಟ್​ ನೀಡುತ್ತಾ ಬಂದಿದ್ದರು. ಇಬ್ಬರೂ ಕೂಡ ಬಿಗ್​ ಬಾಸ್​ ಒಟಿಟಿ ಮೊದಲ ಸೀಸನ್​ನಿಂದ ಟಿವಿ ಸೀಸನ್​ ತನಕ ಸಾಗಿ ಬಂದರು. ಒಟಿಟಿ ಮತ್ತು ಟಿವಿ ಸೀಸನ್​ ಸೇರಿದಂತೆ 140 ದಿನಗಳ ಜರ್ನಿಯನ್ನು ಪೂರೈಸಿದ್ದಾರೆ. ಗೆದ್ದಿರುವ ರೂಪೇಶ್​ ಶೆಟ್ಟಿಗೆ ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಅವರ ಸಿನಿಮಾ ಜರ್ನಿಗೆ ಶುಭವಾಗಲಿ ಎಂದು ಹಾರೈಸಲಾಗುತ್ತಿದೆ.

ಇದನ್ನೂ ಓದಿ: Bigg Boss Winner Roopesh Shetty: ‘ನಾನು ಗೆದ್ದಿಲ್ಲ, ನೀವು ಗೆಲ್ಲಿಸಿದ್ದೀರಿ’: ಬಿಗ್​ ಬಾಸ್​ ವಿನ್ನರ್​ ರೂಪೇಶ್​ ಶೆಟ್ಟಿ ಮೊದಲ ರಿಯಾಕ್ಷನ್​

ಚಿತ್ರರಂಗದಲ್ಲಿ ರಾಕೇಶ್​ ಅಡಿಗ ಅವರು ಅನೇಕ ವರ್ಷಗಳಿಂದ ಇದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದಾರೆ. ಬಿಗ್​ ಬಾಸ್​ಗೆ ಕಾಲಿಟ್ಟ ಬಳಿಕ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಯಿತು. ರಾಕೇಶ್​ ಅಡಿಗ ಅವರ ನಿಜವಾದ ವ್ಯಕ್ತಿತ್ವ ಏನು ಎಂಬುದನ್ನು ತಿಳಿಯಲು ಈ ರಿಯಾಲಿಟಿ ಶೋ ಸಹಕಾರಿ ಆಯಿತು. ಅದೇ ರೀತಿ ರೂಪೇಶ್​ ಶೆಟ್ಟಿ ಅವರಿಗೂ ಈ ಕಾರ್ಯಕ್ರಮದಿಂದ ಸಖತ್​ ಜನಪ್ರಿಯತೆ ಸಿಕ್ಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Web contact
Web contact

TV9 Kannada

Read More
ಕಿತ್ತೂರು ರಾಣಿ ಚೆನ್ನಮ್ಮ ಕುರಿತು ಕನ್ನಡದಲ್ಲಿ ಬರುತ್ತಿದೆ ಎಐ ಸಿನಿಮಾ
ಕಿತ್ತೂರು ರಾಣಿ ಚೆನ್ನಮ್ಮ ಕುರಿತು ಕನ್ನಡದಲ್ಲಿ ಬರುತ್ತಿದೆ ಎಐ ಸಿನಿಮಾ
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದರಾಮಯ್ಯ ನಿರ್ಧಾರ
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದರಾಮಯ್ಯ ನಿರ್ಧಾರ
ಇನ್ನೇನು ಟೇಕಾಫ್ ಆಗಬೇಕೆನ್ನುವಷ್ಟರಲ್ಲಿ ಇಂಡಿಗೋ ವಿಮಾನದಲ್ಲಿ ಹೊಗೆ
ಇನ್ನೇನು ಟೇಕಾಫ್ ಆಗಬೇಕೆನ್ನುವಷ್ಟರಲ್ಲಿ ಇಂಡಿಗೋ ವಿಮಾನದಲ್ಲಿ ಹೊಗೆ
ರಸ್ತೆಯಲ್ಲಿ ಸಿಕ್ಕ ಅನಾಥ ಭಿಕ್ಷುಕನ ಹೇರ್​​ಕಟ್ ಮಾಡಿ ಆರೈಕೆ ಮಾಡಿದ ನಟ
ರಸ್ತೆಯಲ್ಲಿ ಸಿಕ್ಕ ಅನಾಥ ಭಿಕ್ಷುಕನ ಹೇರ್​​ಕಟ್ ಮಾಡಿ ಆರೈಕೆ ಮಾಡಿದ ನಟ
ನಾಯಕತ್ವ ಬದಲಾವಣೆ: ಸಭೆಯ ರಹಸ್ಯ ಬಿಚ್ಚಿಟ್ಟ ಕೆ.ಸಿ. ವೇಣುಗೋಪಾಲ್
ನಾಯಕತ್ವ ಬದಲಾವಣೆ: ಸಭೆಯ ರಹಸ್ಯ ಬಿಚ್ಚಿಟ್ಟ ಕೆ.ಸಿ. ವೇಣುಗೋಪಾಲ್
ಹಾಸನ ಸೈಟ್ ವಿವಾದ: ಬೆಂಗಳೂರಲ್ಲಿ ಡಿಜಿಪಿ ಭೇಟಿಯಾದ ಯಶ್ ತಾಯಿ ಪುಷ್ಪಾ
ಹಾಸನ ಸೈಟ್ ವಿವಾದ: ಬೆಂಗಳೂರಲ್ಲಿ ಡಿಜಿಪಿ ಭೇಟಿಯಾದ ಯಶ್ ತಾಯಿ ಪುಷ್ಪಾ
ಪುನೀತ್ ಅಂಗಾಂಗ ದಾನ: ಸಂಬಂಧಿಕರ ನೋವಿನ ಮಾತು
ಪುನೀತ್ ಅಂಗಾಂಗ ದಾನ: ಸಂಬಂಧಿಕರ ನೋವಿನ ಮಾತು
ಮೇಕೆದಾಟು ಯೋಜನೆಗೆ ಕ್ಯಾತೆ: ಪ್ರಧಾನಿಗೆ ಪತ್ರ ಬರೆದ ತಮಿಳುನಾಡು ಸಿಎಂ ವಿಜಯ್
ಮೇಕೆದಾಟು ಯೋಜನೆಗೆ ಕ್ಯಾತೆ: ಪ್ರಧಾನಿಗೆ ಪತ್ರ ಬರೆದ ತಮಿಳುನಾಡು ಸಿಎಂ ವಿಜಯ್
ರಾಜ್ಯಸಭೆ ಆಫರ್​​ ಬಂದರೆ ಸಿದ್ದರಾಮಯ್ಯ ನಿಲುವೇನು? ಇಲ್ಲಿದೆ ಮಾಹಿತಿ
ರಾಜ್ಯಸಭೆ ಆಫರ್​​ ಬಂದರೆ ಸಿದ್ದರಾಮಯ್ಯ ನಿಲುವೇನು? ಇಲ್ಲಿದೆ ಮಾಹಿತಿ
ಚಾಮುಂಡಿ ಬೆಟ್ಟಕ್ಕೆ ರಣ್ವೀರ್ ಸಿಂಗ್: ಪೂಜಾರಿ ಹೇಳಿದ್ದು ಹೀಗೆ?
ಚಾಮುಂಡಿ ಬೆಟ್ಟಕ್ಕೆ ರಣ್ವೀರ್ ಸಿಂಗ್: ಪೂಜಾರಿ ಹೇಳಿದ್ದು ಹೀಗೆ?