Updated on: Jan 01, 2023 | 7:30 AM
ನಟಿ ದೀಪಿಕಾ ದಾಸ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 9’ ಶೋನಲ್ಲಿ ಫಿನಾಲೆವರೆಗೂ ಬಂದು ಭರವಸೆ ಮೂಡಿಸಿದ್ದರು. ಆದರೆ ಟ್ರೋಫಿ ಗೆಲ್ಲಲು ಅವರಿಗೆ ಸಾಧ್ಯವಾಗಲಿಲ್ಲ. ಇದು ಅವರ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದೆ.
ಕಿರುತೆರೆಯ ಧಾರಾವಾಹಿ ಕ್ಷೇತ್ರದಲ್ಲಿ ದೀಪಿಕಾ ದಾಸ್ ಅವರಿಗೆ ಸಾಕಷ್ಟು ಜನಪ್ರಿಯತೆ ಇದೆ. ಹಾಗಾಗಿ ಅವರಿಗೆ ಪ್ರೇಕ್ಷಕರಿಂದ ಭರಪೂರ ವೋಟ್ ಸಿಕ್ಕಿತು. ಆದರೆ ಕೊನೇ ಹಂತದಲ್ಲಿ ನಿರೀಕ್ಷಿತ ಮಟ್ಟದ ಫೈಟ್ ನೀಡಲು ದೀಪಿಕಾ ದಾಸ್ಗೆ ಸಾಧ್ಯವಾಗಲಿಲ್ಲ.
ಬಿಗ್ ಬಾಸ್ನಲ್ಲಿ ದೀಪಿಕಾ ದಾಸ್ ಅವರು ಒಮ್ಮೆ ಎಲಿಮಿನೇಟ್ ಆಗಿದ್ದರು. ಆದರೆ ವೈಲ್ಡ್ ಕಾರ್ಡ್ ಮೂಲಕ ಮತ್ತೆ ಎಂಟ್ರಿ ನೀಡಿದರು. ಅದು ಕೆಲವು ವೀಕ್ಷಕರಿಗೆ ಸರಿ ಎನಿಸಲಿಲ್ಲ. ಆಗ ಅವರಿಗೆ ವೋಟ್ ಕಡಿಮೆ ಆಗಿರುವ ಸಾಧ್ಯತೆ ಇದೆ.
ಈ ಹಿಂದೆ 7ನೇ ಸೀಸನ್ನಲ್ಲೂ ದೀಪಿಕಾ ದಾಸ್ ಅವರು ಬಿಗ್ ಬಾಸ್ಗೆ ಬಂದಿದ್ದರು. ಆ ಅನುಭವವನ್ನು ಇಟ್ಟುಕೊಂಡು ಸೀಸನ್ 9ರಲ್ಲಿ ಇನ್ನಷ್ಟು ಚೆನ್ನಾಗಿ ಆಡುವ ಸಾಧ್ಯತೆ ಇತ್ತು. ಆದರೆ ದೀಪಿಕಾ ಅವರು ವೈಲ್ಡ್ ಕಾರ್ಡ್ ಎಂಟ್ರಿ ಬಳಿಕ ನಿರೀಕ್ಷಿತ ಮಟ್ಟದಲ್ಲಿ ಪರ್ಫಾರ್ಮೆನ್ಸ್ ನೀಡಲಿಲ್ಲ.
ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ ನಂತರ ದೀಪಿಕಾ ದಾಸ್ ಅವರ ಖ್ಯಾತಿ ಹೆಚ್ಚಾಗಿದೆ. ಇದರಿಂದ ಅವರ ಸಿನಿಮಾ ಮತ್ತು ಸೀರಿಯಲ್ ಜರ್ನಿಗೆ ಹೆಚ್ಚಿನ ಮೈಲೇಜ್ ಸಿಕ್ಕಂತೆ ಆಗಿದೆ. ಮುಂಬರುವ ಪ್ರಾಜೆಕ್ಟ್ಗಳಲ್ಲಿ ಯಶಸ್ಸು ಸಿಗಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.