BBK Season 9 Winner: ರೂಪೇಶ್ ಶೆಟ್ಟಿ ಬಿಗ್ ಬಾಸ್ ವಿನ್ನರ್; ಕರಾವಳಿ ನಟನಿಗೆ ಗೆಲುವಿನ ಮಾಲೆ
BBK Season 9 Winner Roopesh Shetty: ರೂಪೇಶ್ ಶೆಟ್ಟಿ ಹಾಗೂ ರಾಕೇಶ್ ಅಡಿಗ ‘ಬಿಗ್ ಬಾಸ್ ಕನ್ನಡ ಒಟಿಟಿ’ ಮೂಲಕ ದೊಡ್ಮನೆ ಜರ್ನಿ ಆರಂಭಿಸಿದರು. ಅಲ್ಲಿ ರೂಪೇಶ್ ಶೆಟ್ಟಿ ಟಾಪ್ ಒನ್ ಆದರು. ನಂತರ ಇವರು ಟಿವಿ ಸೀಸನ್ಗೆ ಬಂದರು.
‘ಬಿಗ್ ಬಾಸ್ ಕನ್ನಡ ಸೀಸನ್ 9’ರ 100 ದಿನಗಳ ಪ್ರಯಾಣ ಪೂರ್ಣಗೊಂಡಿದೆ. ಫಿನಾಲೆಯಲ್ಲಿ ಯಾರು ವಿನ್ ಆಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಈಗ ಇದಕ್ಕೆ ಉತ್ತರ ಸಿಕ್ಕಿದೆ. ರೂಪೇಶ್ ಶೆಟ್ಟಿ ಅವರು ವಿನ್ನರ್ (Bigg Boss Winner) ಆದರೆ, ರಾಕೇಶ್ ಅಡಿಗ ರನ್ನರ್ ಅಪ್ ಆದರು. ಈ ಮೂಲಕ ಈ ಸೀಸನ್ ಜರ್ನಿ ಪೂರ್ಣಗೊಂಡಿದೆ. ರೂಪೇಶ್ ಶೆಟ್ಟಿ (Roopesh Shetty) ಅವರಿಗೆ ಎಲ್ಲ ಕಡೆಯಿಂದ ಶುಭಾಶಯ ಬರುತ್ತಿದೆ.
ಬಿಗ್ ಬಾಸ್ ಫಿನಾಲೆ ವೀಕ್ನಲ್ಲಿ ದಿವ್ಯಾ ಉರುಡುಗ, ರೂಪೇಶ್ ರಾಜಣ್ಣ, ದೀಪಿಕಾ ದಾಸ್, ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ ಇದ್ದರು. ಶನಿವಾರ (ಡಿಸೆಂಬರ್ 30) ದಿವ್ಯಾ ಎಲಿಮಿನೇಟ್ ಆದರು. ಭಾನುವಾರ (ಡಿಸೆಂಬರ್ 31) ರೂಪೇಶ್ ರಾಜಣ್ಣ ಮೊದಲು ಔಟ್ ಆದರೆ, ದೀಪಿಕಾ ದಾಸ್ ಬಳಿಕ ಹೊರಹೋದರು. ಸುದೀಪ್ ಅಕ್ಕಪಕ್ಕದಲ್ಲಿ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ ನಿಂತಿದ್ದರು. ಸುದೀಪ್ ಅವರು ರೂಪೇಶ್ ಶೆಟ್ಟಿ ಅವರ ಕೈ ಎತ್ತಿದರು. ಈ ಮೂಲಕ ರೂಪೇಶ್ ವಿನ್ನರ್ ಎಂದು ಘೋಷಿಸಿದರು.
ರೂಪೇಶ್ ಶೆಟ್ಟಿ ಹಾಗೂ ರಾಕೇಶ್ ಅಡಿಗ ‘ಬಿಗ್ ಬಾಸ್ ಕನ್ನಡ ಒಟಿಟಿ’ ಮೂಲಕ ದೊಡ್ಮನೆ ಜರ್ನಿ ಆರಂಭಿಸಿದರು. ಅಲ್ಲಿ ರೂಪೇಶ್ ಶೆಟ್ಟಿ ಟಾಪ್ ಒನ್ ಆದರು. ನಂತರ ಇವರು ಟಿವಿ ಸೀಸನ್ಗೆ ಬಂದರು. ಇಬ್ಬರ ಮಧ್ಯೆ ಟಫ್ ಕಾಂಪಿಟೇಷನ್ ಇತ್ತು. ಅಂತಿಮವಾಗಿ ರೂಪೇಶ್ ಶೆಟ್ಟಿ ಗೆದ್ದಿದ್ದಾರೆ. ರಾಕೇಶ್ ಅಡಿಗ ರನ್ನರ್ ಅಪ್ ಸ್ಥಾನಕ್ಕೆ ಖುಷಿಪಟ್ಟಿದ್ದಾರೆ. ರಾಕೇಶ್ ಗೆಲ್ಲಬೇಕು ಎಂಬುದು ಅನೇಕರ ಕೋರಿಕೆ ಆಗಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಒಂದು ವರ್ಗದ ಜನರು ಈ ಫಲಿತಾಂಶದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
View this post on Instagram
ಇದನ್ನೂ ಓದಿ: ‘ಕ್ಯಾರೆಕ್ಟರ್ ಹಾಳಾಗುತ್ತೆ ಅಂತ ಹೆದರಿಸಿದ್ರು’; ಎಚ್ಚರಿಕೆ ಬಗ್ಗೆ ಸುದೀಪ್ ಎದುರು ಹೇಳಿಕೊಂಡ ರೂಪೇಶ್ ಶೆಟ್ಟಿ
ರೂಪೇಶ್ ಶೆಟ್ಟಿಗೆ 60 ಲಕ್ಷ ರೂಪಾಯಿ ಸಿಕ್ಕಿದೆ. ಕಲರ್ಸ್ ಕನ್ನಡ ವಾಹಿನಿ ಕಡೆಯಿಂದ 50 ಲಕ್ಷ ರೂಪಾಯಿ ಹಾಗೂ ಸ್ಪಾನ್ಸರ್ ಕಡೆಯಿಂದ 10 ಲಕ್ಷ ರೂಪಾಯಿ ಸಿಕ್ಕಿದೆ. ಈ ಮೂಲಕ 60 ಲಕ್ಷ ರೂಪಾಯಿಯನ್ನು ಅವರು ತಮ್ಮದಾಗಿಸಿಕೊಂಡಿದ್ದಾರೆ. ಜತೆಗೆ ಒಂದು ಸುಂದರ ಟ್ರೋಫಿ ಕೂಡ ರೂಪೇಶ್ ಶೆಟ್ಟಿಗೆ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:29 am, Sun, 1 January 23