ಬಿಗ್ ಬಾಸ್ ಮನೆಯಲ್ಲಿಲ್ಲ ಸ್ವಚ್ಛತೆ; ಅಡುಗೆಗೆ ಸಂಬಂಧಿಸಿದ ಎಲ್ಲಾ ವಸ್ತುಗಳು ಮಾಯ

ಬಿಗ್ ಬಾಸ್ ಕಿಚನ್​ನಲ್ಲಿ ಎಲ್ಲೆಂದರಲ್ಲಿ ತಿನಿಸುಗಳನ್ನು ಹರಡಲಾಗಿದೆ. ಆಹಾರವನ್ನು ಎಲ್ಲೆಂದರಲ್ಲಿ ಬಿಸಾಡಲಾಗಿದೆ. ತರಕಾರಿ ಸಿಪ್ಪೆಗಳು ಮನೆಯ ತುಂಬೆಲ್ಲ ಹರಡಿದೆ. ಇದರಿಂದ ಬಿಗ್ ಬಾಸ್ ಕೋಪಗೊಂಡಿದ್ದಾರೆ. ಸ್ಪರ್ಧಿಗಳಿಂದ ಎಲ್ಲಾ ಆಹಾರ ಮತ್ತು ಪಾನೀಯಗಳನ್ನು ಬಿಗ್ ಬಾಸ್ ಹಿಂಪಡೆದಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿಲ್ಲ ಸ್ವಚ್ಛತೆ; ಅಡುಗೆಗೆ ಸಂಬಂಧಿಸಿದ ಎಲ್ಲಾ ವಸ್ತುಗಳು ಮಾಯ
ಬಿಗ್ ಬಾಸ್
Updated By: ರಾಜೇಶ್ ದುಗ್ಗುಮನೆ

Updated on: Nov 22, 2023 | 4:29 PM

‘ಬಿಗ್ ಬಾಸ್’ (Bigg Boss) ಮನೆಯಲ್ಲಿ ಸ್ಪರ್ಧಿಗಳು ತಪ್ಪು ಮಾಡಿದರೆ ಶಿಕ್ಷೆ ಯಾವ ಹಂತದಲ್ಲಿ ಬೇಕಿದ್ದರೂ ಇರಬಹುದು. ಕೆಲವೇ ಕೆಲವು ಸ್ಪರ್ಧಿಗಳು ತಪ್ಪು ಮಾಡಿದರೂ ಇಡೀ ಮನೆಗೆ ಶಿಕ್ಷೆ ನೀಡಲಾಗುತ್ತದೆ. ಇನ್ನೂ ಇಡೀ ಮನೆ ತಪ್ಪು ಮಾಡಿದರೆ ಕೇಳಬೇಕೆ? ಹೀಗಿರುವಾಗ ಕಠಿಣ ಶಿಕ್ಷೆ ಆಗೋದು ಗ್ಯಾರಂಟಿ. ‘ಹಿಂದಿ ಬಿಗ್ ಬಾಸ್ ಸೀಸನ್ 17’ರಲ್ಲಿ ಹೀಗೋಂದು ಘಟನೆ ನಡೆದಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ  ಬಿಗ್ ಬಾಸ್ ಮನೆ ಸಿದ್ಧಮಾಡಲಾಗಿತ್ತು. ಆದರೆ, ಸ್ಪರ್ಧಿಗಳು ಈ ಮನೆಯ ಅಂದವನ್ನೇ ಹಾಳು ಮಾಡಿದ್ದಾರೆ. ಬಿಗ್ ಬಾಸ್ ಮನೆಯನ್ನು ಕೊಳಕು ಮಾಡಿದ್ದಾರೆ ಸ್ಪರ್ಧಿಗಳು. ಇದಕ್ಕೆ ಬಿಗ್ ಬಾಸ್ ಕಠಿಣ ಶಿಕ್ಷೆ ನೀಡಿದ್ದಾರೆ.

ಈ ಬಾರಿ ಬಿಗ್ ಬಾಸ್​ ಮನೆಗೆ ಹಲವು ಸೆಲೆಬ್ರಿಟಿಗಳು ಬಂದಿದ್ದಾರೆ. ಯಾರೇ ಬಂದರೂ, ಅವರ ಹಿನ್ನೆಲೆ ಏನೇ ಇದ್ದರೂ ಬಿಗ್ ಬಾಸ್ ಮನೆಯ ನಿಯಮ ಪಾಲಿಸಲೇಬೇಕು. ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಅವರ ಕರ್ತವ್ಯ. ಆದರೆ, ಅವರು ಸ್ವಚ್ಛತೆಯ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಬಿಗ್ ಬಾಸ್ ಕಿಚನ್​ನಲ್ಲಿ ಎಲ್ಲೆಂದರಲ್ಲಿ ತಿನಿಸುಗಳನ್ನು ಹರಡಲಾಗಿದೆ. ಆಹಾರವನ್ನು ಎಲ್ಲೆಂದರಲ್ಲಿ ಬಿಸಾಡಲಾಗಿದೆ. ತರಕಾರಿ ಸಿಪ್ಪೆಗಳು ಮನೆಯ ತುಂಬೆಲ್ಲ ಹರಡಿದೆ. ಇದರಿಂದ ಬಿಗ್ ಬಾಸ್ ಕೋಪಗೊಂಡಿದ್ದಾರೆ. ಸ್ಪರ್ಧಿಗಳಿಂದ ಎಲ್ಲಾ ಆಹಾರ ಮತ್ತು ಪಾನೀಯಗಳನ್ನು ಬಿಗ್ ಬಾಸ್ ಹಿಂಪಡೆದಿದ್ದಾರೆ. ಸ್ಪರ್ಧಿಗಳು ಹಸಿವು ನೀಗಿಸಿಕೊಳ್ಳಲು ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಸಿದ್ಧಾರ್ಥ್ ಶುಕ್ಲಾ ಅವರ ಸೀಸನ್‌ನಲ್ಲಿ ಅಂದರೆ ‘ಬಿಗ್ ಬಾಸ್ ಸೀಸನ್ 13’ರಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಆ ಸೀಸನ್​ನಲ್ಲಿ ಸ್ಪರ್ಧಿಗಳು ಮನೆಯನ್ನು ತುಂಬಾನೇ ಗಲೀಜು ಮಾಡಿದ್ದರು. ಕಾರ್ಯಕ್ರಮದ ನಿರೂಪಕ ಸಲ್ಮಾನ್ ಖಾನ್ ಸ್ವತಃ ಬಿಗ್ ಬಾಸ್‌ಗೆ ಹೋಗಿ ಮನೆಯನ್ನು ಸ್ವಚ್ಛಗೊಳಿಸಿದ್ದರು. ಇದೇ ವೇಳೆ ಸಲ್ಮಾನ್ ಅಡುಗೆ ಮನೆಗೆ ತೆರಳಿ ಪಾತ್ರೆ ತೊಳೆದು, ಬಾತ್ ರೂಂ ಕೂಡ ಕ್ಲೀನ್ ಮಾಡಿದ್ದರು. ಇದನ್ನು ನೋಡಿ ಸ್ಪರ್ಧಿಗಳು ಹಾಗೂ ವೀಕ್ಷಕರು ಶಾಕ್ ಆಗಿದ್ದರು. ಆ ಬಳಿಕ ಸ್ಪರ್ಧಿಗಳಿಗೆ ಸಲ್ಲು ಛೀಮಾರಿ ಹಾಕಿದ್ದರು. ಇದೀಗ 17ನೇ ಸೀಸನ್​ನಲ್ಲಿ ಬಿಗ್ ಬಾಸ್ ಸಿಟ್ಟು ಮಾಡಿಕೊಂಡಿದ್ದಾರೆ. ಬಿಗ್ ಬಾಸ್​ನ ಈ ಸಿಟ್ಟಿಗೆ ಮನೆ ಮಂದಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿದೆ. ವೀಕೆಂಡ್​ನಲ್ಲಿ ಸಲ್ಮಾನ್ ಖಾನ್ ಕೂಡ ಕ್ಲಾಸ್ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಕಠಿಣ ಶಿಕ್ಷೆ

ಸದ್ಯ ಸ್ಪರ್ಧಿಗಳಿಗೆ ಕಠಿಣ ಶಿಕ್ಷೆಯಾಗಿದೆ. ಮನೆಯವರ ರೇಷನ್ ಹಾಗೂ ಸಾಮಾನುಗಳನ್ನು ಬಿಗ್ ಬಾಸ್ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಮಾಸ್ಕ್ ಧರಿಸಿ ಬಂದ ಬಿಗ್ ಬಾಸ್ ಸಿಬ್ಬಂದಿ ಎಲ್ಲಾ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಕೆಲವು ಸ್ಪರ್ಧಿಗಳು ವಸ್ತುಗಳನ್ನು ಮಲಗುವ ಕೋಣೆ ಬಳಿ ತೆಗೆದುಕೊಂಡು ಹೋಗಲು ಪ್ರಯತ್ನಿಸಿದರು. ಆದರೆ, ಅದಕ್ಕೂ ಅವರು ಜಗ್ಗಲಿಲ್ಲ. ಎಲ್ಲಾ ಸ್ಪರ್ಧಿಗಳು ಬಿಗ್ ಬಾಸ್ ಬಳಿ ಕ್ಷಮೆ ಕೇಳಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಊಟದ ವಿಚಾರಕ್ಕೆ ಜಗಳ; ಕಾರ್ತಿಕ್ ನಡೆದುಕೊಂಡಿದ್ದು ಸರೀನಾ?

ಹಿಂದಿ ಬಿಗ್ ಬಾಸ್ ಕಲರ್ಸ್ ಟಿವಿ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರ ಕಾಣುತ್ತಿದೆ. ಅಂಕಿತಾ ಲೋಕಂಡೆ ಹಾಗೂ ಅವರ ಪತಿ ವಿಕ್ಕಿ ಜೈನ್ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಇವರ ಮಧ್ಯೆ ಸಾಕಷ್ಟು ಜಗಳ ಏರ್ಪಡುತ್ತಿದೆ. ವಿಕ್ಕಿ ಜೈನ್​ಗೆ ಅಂಕಿತಾ ಚಪ್ಪಲಿ ಎಸೆದಿದ್ದಾರೆ. ಈ ವಿಡಿಯೋ ಕೂಡ ವೈರಲ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 4:29 pm, Wed, 22 November 23