ಕಿರುತೆರೆಯ ಅತ್ಯಂತ ಜನಪ್ರಿಯ ಮತ್ತು ಅಷ್ಟೇ ವಿವಾದಾತ್ಮಕ ರಿಯಾಲಿಟಿ ಶೋ ಎಂದರೆ ಅದು ‘ಬಿಗ್ ಬಾಸ್’. ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು ಮೊದಲಾದ ಭಾಷೆಗಳಲ್ಲೂ ಈ ಶೋ ಪ್ರಸಾರ ಕಾಣುತ್ತಿದೆ. ತೆಲುಗಿನಲ್ಲಿ ಈಗಾಗಲೇ ಬಿಗ್ ಬಾಸ್ ಪೂರ್ಣಗೊಂಡಿದೆ. ಬಿಗ್ ಬಾಸ್ ವಿನ್ನರ್ ಪಲ್ಲವಿ ಪ್ರಶಾಂತ್ (Pallavi Prashanth) ಅವರನ್ನು ಅರೆಸ್ಟ್ ಕೂಡ ಮಾಡಲಾಯಿತು. ಈಗ ಹಿಂದಿ ‘ಬಿಗ್ ಬಾಸ್’ನ 17ನೇ ಸೀಸನ್ ಫಿನಾಲೆ ಬಗ್ಗೆ ಚರ್ಚೆ ಶುರುವಾಗಿದೆ. ಅಂದುಕೊಂಡ ದಿನಾಂಕದಂದು ಈ ಶೋನ ಪೂರ್ಣಗೊಳಿಸಲು ವಾಹಿನಿಯವರು ನಿರ್ಧರಿಸಿದ್ದಾರೆ.
ಸ್ಪರ್ಧಿಗಳು ಹೇಗಿರುತ್ತಾರೆ, ಎಷ್ಟು ವಿವಾದ ಆಗುತ್ತದೆ, ವೀಕೆಂಡ್ ಎಪಿಸೋಡ್ ಹೇಗಿರುತ್ತದೆ ಎನ್ನುವುದರ ಮೇಲೆ ಬಿಗ್ ಬಾಸ್ ಟಿಆರ್‌ಪಿ ನಿರ್ಧಾರ ಆಗುತ್ತದೆ. ಈ ಬಾರಿ ಹಿಂದಿ ಬಿಗ್ ಬಾಸ್ನಲ್ಲಿ ಸಾಕಷ್ಟು ಮಸಾಲೆ ಅಂಶ ಇದೆ. ಆದಾಗ್ಯೂ ಟಿಆರ್‌ಪಿ ಪಟ್ಟಿಯಲ್ಲಿ ಹೆಚ್ಚು ಏರಿಕೆ ಕಂಡಿಲ್ಲ. ಕಳೆದ ಎರಡು ವಾರಗಳಲ್ಲಿ ‘ಬಿಗ್ ಬಾಸ್ ಹಿಂದಿ ಸೀಸನ್ 17’ರ ಟಿಆರ್‌ಪಿ ಹೆಚ್ಚಾಗಿದೆ. ಆದರೆ, ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ. ಹೀಗಾಗಿ, ಕಳೆದ ಐದು ವರ್ಷಗಳಲ್ಲಿ ಮೊದಲ ಬಾರಿಗೆ ಈ ಶೋನ 100 ದಿನಕ್ಕೆ ಪೂರ್ಣಗೊಳಿಸಲು ನಿರ್ಧರಿಸಾಗಿದೆ. ಅಂದುಕೊಂಡ ದಿನದಂದೇ ಫಿನಾಲೆ ನಡೆಯಲಿದೆ ಎನ್ನಲಾಗುತ್ತಿದೆ.
ಈ ಹಿಂದೆ, ‘ಬಿಗ್ ಬಾಸ್ 17’ರ ಗ್ರ್ಯಾಂಡ್ ಫಿನಾಲೆ 2024ರ ಜನವರಿ 28 ರಂದು ನಡೆಯಲಿದೆ ಎಂದು ವರದಿ ಆಗಿತ್ತು. ಅದೇ ದಿನ ಫಿನಾಲೆ ನಡೆಯೋದು ಖಚಿತ ಎನ್ನಲಾಗುತ್ತಿದೆ. ‘ಬಿಗ್ ಬಾಸ್ 17′ ಮುಗಿದ ನಂತರ ಕಲರ್ಸ್ ಟಿವಿಯಲ್ಲಿ ‘ಡ್ಯಾನ್ಸ್ ದೀವಾನೆ’ ಹೆಸರಿನ ಡ್ಯಾನ್ಸ್ ಶೋ ಆರಂಭವಾಗಲಿದೆ. ಕಾರ್ಯಕ್ರಮದ ಗ್ರ್ಯಾಂಡ್ ಪ್ರೀಮಿಯರ್ 2024ರ ಫೆಬ್ರವರಿ 3ರಂದು ನಡೆಯಲಿದೆ.
ಜನವರಿಯ ಎರಡನೇ ವಾರದಲ್ಲಿ ‘ವೀಕೆಂಡ್ ಕಾ ವಾರ್’ ಸಂಚಿಕೆಯಲ್ಲಿ ಸಲ್ಮಾನ್ ಖಾನ್ ಇರುವುದಿಲ್ಲ. ಬೇರೆ ಕೆಲಸಗಳಿಂದಾಗಿ ಸಲ್ಮಾನ್ ಶೂಟಿಂಗ್ನಲ್ಲಿ ಭಾಗಿ ಆಗಲು ಸಾಧ್ಯವಾಗುತ್ತಿಲ್ಲ. ಸಲ್ಮಾನ್ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿರುವ ದಿನಗಳಲ್ಲಿ ಕಲರ್ಸ್ ಟಿವಿ ಜೊತೆ ಸಲ್ಮಾನ್ ಅಂತಹ ಒಪ್ಪಂದವನ್ನು ಹೊಂದಿದ್ದಾರೆ. ಅವರಿಗೆ ಬಿಗ್ ಬಾಸ್ ಹೋಸ್ಟ್ ಮಾಡಲು ಸಾಧ್ಯವಾಗದ ದಿನ ಕರಣ್ ಜೋಹರ್ ಶೋ ನಡೆಸಿಕೊಡುತ್ತಾರೆ.
ಇದನ್ನೂ ಓದಿ: ಈ ಬಾರಿ 100 ದಿನಕ್ಕೆ ಮುಗಿಯಲ್ಲ ಬಿಗ್ ಬಾಸ್; ವೀಕ್ಷಕರಿಗೆ ಇದೆ ಸರ್ಪ್ರೈಸ್
‘ಬಿಗ್ ಬಾಸ್ ಹಿಂದಿ 17’ರ ಮನೆಯಲ್ಲಿ ಒಟ್ಟೂ 12 ಸದಸ್ಯರಿದ್ದಾರೆ. ಅಂಕಿತಾ ಲೋಖಂಡೆ, ವಿಕ್ಕಿ ಜೈನ್, ನೀಲ್ ಭಟ್, ಅರುಣ್ ಮಹಾಶೆಟ್ಟಿ, ಔರಾ, ಮುನಾವರ್ ಫಾರೂಕಿ, ಮನ್ನಾರಾ ಚೋಪ್ರಾ, ಅನುರಾಗ್ ದೋವಲ್, ರಿಂಕು ಧವನ್, ಇಶಾ ಮಾಳವೀಯ, ಅಭಿಷೇಕ್ ಕುಮಾರ್ ಮತ್ತು ಸಮರ್ಥ್ ಜುರೈಲ್ ಗಮನ ಸೆಳೆಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ