ಕಷ್ಟಪಟ್ಟಿದ್ದೆಲ್ಲ ನೀರಲ್ಲಿ ಹೋಮ; ತಪ್ಪು ಮಾಡಿದ್ದು ಸ್ಪರ್ಧಿಗಳಾ ಅಥವಾ ಬಿಗ್ ಬಾಸ್?

|

Updated on: Jan 16, 2025 | 11:09 PM

ಮಿಡ್ ವೀಕ್ ಎಲಿಮಿನೇಷನ್​ ರದ್ದು ಮಾಡಲು ಬಿಗ್ ಬಾಸ್ ನೀಡಿದ ಕಾರಣ ಸರಿಯೇ? ಸ್ಪರ್ಧಿಗಳೇ ಇದಕ್ಕೆಲ್ಲ ಹೊಣೆಯೇ? ಇಂಥ ಪ್ರಶ್ನೆಗಳು ಈಗ ವೀಕ್ಷಕರ ಮನದಲ್ಲಿ ಮೂಡಿವೆ. ವಾರಪೂರ್ತಿ ಕಷ್ಟಪಟ್ಟು ಟಾಸ್ಕ್ ಆಡಿದ್ದು ಲೆಕ್ಕಕ್ಕೆ ಇಲ್ಲದಂತಾಗಿದೆ. ನಾಮಿನೇಷನ್ ಪ್ರಕ್ರಿಯೆಯನ್ನು ಹೊಸದಾಗಿ ಮಾಡಿಸುವ ಮೂಲಕ ಅದೇ ಜಗಳಗಳು ರಿಪೀಟ್ ಆಗುವಂತೆ ಮಾಡಲಾಗಿದೆ.

ಕಷ್ಟಪಟ್ಟಿದ್ದೆಲ್ಲ ನೀರಲ್ಲಿ ಹೋಮ; ತಪ್ಪು ಮಾಡಿದ್ದು ಸ್ಪರ್ಧಿಗಳಾ ಅಥವಾ ಬಿಗ್ ಬಾಸ್?
Manju, Dhanraj, Rajat
Follow us on

ಈ ವಾರದ ಬಿಗ್ ಬಾಸ್ ಆಟ ಪೂರ್ತಿ ಉಲ್ಟಾಪಲ್ಟ ಆಗಿದೆ. ಮಿಡ್ ವೀಕ್ ಎಲಿಮಿನೇಷನ್​ ನಡೆಯುತ್ತದೆ ಎಂದು ವೀಕ್ಷಕರು ನಿರೀಕ್ಷಿಸಿದ್ದರು. ಆದರೆ ಕೊನೇ ಹಂತದಲ್ಲಿ ನಡು ವಾರದ ಎಲಿಮಿನೇಷನ್ ರದ್ದಾಗಿದೆ. ಅದಕ್ಕೂ ಮುನ್ನ ಎಲ್ಲ ಸ್ಪರ್ಧಿಗಳು ಕಷ್ಟಪಟ್ಟು ಟಾಸ್ಕ್ ಆಡಿದ್ದರು. ಒಂದೊಂದು ಟಾಸ್ಕ್ ಕೂಡ ತುಂಬ ಕಷ್ಟಕರವಾಗಿತ್ತು. ಆದರೂ ಸಹ ಗುದ್ದಾಡಿಕೊಂಡು ಆಟ ಆಡಿದ್ದರು. ಆದರೆ ಟಾಸ್ಕ್ ವೇಳೆ ನಡೆದ ಒಂದೇ ಒಂದು ತಪ್ಪಿನಿಂದಾಗಿ ಎಲ್ಲರ ಶ್ರಮ ವ್ಯರ್ಥ ಆಗಿದೆ. ಹೊಸದಾಗಿ ನಾಮಿನೇಷನ್ ಪ್ರಕ್ರಿಯೆ ಶುರು ಮಾಡಲಾಗಿದೆ. ಈ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ.

ಮಿಡ್ ಮೀಕ್ ಎಲಿಮಿನೇಷನ್​ನಿಂದ ಪಾರಾಗಲು ಸ್ಪರ್ಧಿಗಳಿಗೆ ಕೆಲವು ಟಾಸ್ಕ್ ನೀಡಲಾಗಿತ್ತು. ಹಲವು ಹಂತಗಳಲ್ಲಿ ಟಾಸ್ಕ್ ನಡೆಯಿತು. ಪ್ರತಿ ಹಂತದಲ್ಲಿ ಗೆದ್ದಾಗಲೂ ಅಂಕಗಳು ಸೇರ್ಪಡೆ ಆಗುತ್ತಿದ್ದವು. ಅಂತಿಮವಾಗಿ ಹೆಚ್ಚು ಅಂಕಗಳನ್ನು ಪಡೆದಿದ್ದ ಧನರಾಜ್ ಅವರು ನಡುವಾರದ ಎಲಿಮಿನೇಷನ್​ನಿಂದ ಬಚಾವ್ ಆಗಿದ್ದರು. ಆದರೆ ಇನ್ನೇನು ಎಲಿಮಿನೇಷನ್ ನಡೆಯಬೇಕು ಎನ್ನುವಾಗ ಟ್ವಿಸ್ಟ್ ನೀಡಲಾಯಿತು.

ಧನರಾಜ್ ಅವರು ಟಾಸ್ಕ್ ವೇಳೆ ತಪ್ಪು ಮಾಡಿದ್ದನ್ನೇ ನೆಪವಾಗಿ ಇಟ್ಟುಕೊಂಡು ಅವರ ಇಮ್ಯುನಿಟಿ ಹಿಂಪಡೆಯಲಾಯಿತು. ಒಂದು ವೇಳೆ ಧನರಾಜ್ ಮಾಡಿದ್ದು ತಪ್ಪು ಎಂಬುದಾದರೆ ಟಾಸ್ಕ್ ನಡೆದಾಗಲೇ ಅದನ್ನು ತಿದ್ದಿ ಹೇಳಬೇಕಿತ್ತು. ಅದನ್ನು ಬಿಟ್ಟು ಎಲ್ಲ ಮುಗಿದ ಬಳಿಕ ಕ್ಯಾತೆ ತೆಗೆದಿದ್ದು ಕೆಲವರಿಗೆ ಸರಿ ಎನಿಸಿಲ್ಲ. ಧನರಾಜ್ ಅವರು ಗ್ರೇ ಏರಿಯಾ ಬಳಕೆ ಮಾಡಿಕೊಂಡಿದ್ದಾರೆಯೇ ಹೊರತು ಮೋಸ ಮಾಡಿಲ್ಲ ಎಂಬ ಅಭಿಪ್ರಾಯ ಕೂಡ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಮಿಡ್ ವೀಕ್ ಎಲಿಮಿನೇಷನ್ ರದ್ದು ಮಾಡಿದ ಬಿಗ್ ಬಾಸ್; ಆದರೂ ತಪ್ಪಿಲ್ಲ ಆಪತ್ತು

ಹೊಸದಾಗಿ ನಾಮಿನೇಷನ್ ಪ್ರಕ್ರಿಯೆ ನಡೆದಾಗ ಎಲ್ಲ ಸ್ಪರ್ಧಿಗಳು ಮತ್ತದೇ ಹಳೇ ಕಾರಣಗಳನ್ನು ನೀಡಿದ್ದಾರೆ. ಪುನಃ ಅದೇ ಜಗಳಗಳೇ ರಿಪೀಟ್ ಆಗಿವೆ. ಇದರಿಂದ ವೀಕ್ಷಕರಿಗೆ ಏನೂ ಹೊಸದಾಗಿ ಸಿಕ್ಕಿಲ್ಲ. ಉಗ್ರಂ ಮಂಜು ವಿರುದ್ಧ ರಜತ್ ಕೂಗಾಡಿದ್ದಾರೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಜೊತೆಗೆ ತ್ರಿವಿಕ್ರಮ್ ಕೂಡ ಜಗಳಕ್ಕೆ ಇಳಿದಿದ್ದಾರೆ. ಶೀಘ್ರದಲ್ಲೇ ಇಬ್ಬರ ಎಲಿಮಿನೇಷನ್ ಆಗಲಿದೆ. ಫಿನಾಲೆ ವಾರಕ್ಕಾಗಿ ವೀಕ್ಷಕರು ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.