ನಟನೆಗೆ ಬರುವ ಮೊದಲು ವಿಜಯ್ ಸೇತುಪತಿ ಏನು ಮಾಡುತ್ತಿದ್ದರು?

ವಿಜಯ್ ಸೇತುಪತಿ ಅವರ ಜನ್ಮದಿನದಂದು, ಅವರ ಸರಳ ಜೀವನ ಮತ್ತು ಸಿನಿಮಾ ರಂಗದಲ್ಲಿನ ಅದ್ಭುತ ಪ್ರಗತಿಯ ಬಗ್ಗೆ ತಿಳಿದುಕೊಳ್ಳೋಣ. ಸಿನಿಮಾ ರಂಗಕ್ಕೂ ಬರುವ ಮೊದಲು ಅವರು ಸಾಧಾರಣ ಜೀವನ ನಡೆಸುತ್ತಿದ್ದರು. ತಮ್ಮ ಕನಸನ್ನು ಈಡೇರಿಸಿಕೊಂಡು ಯಶಸ್ವಿ ನಟರಾದರು. ತಮ್ಮ ಕಷ್ಟದ ಜೀವನದ ನೆನಪುಗಳನ್ನು ಹಂಚಿಕೊಂಡ ಅವರು, ಇಂದಿಗೂ ಸರಳ ಜೀವನ ನಡೆಸುತ್ತಿದ್ದಾರೆ ಎಂಬುದು ವಿಶೇಷ.

ನಟನೆಗೆ ಬರುವ ಮೊದಲು ವಿಜಯ್ ಸೇತುಪತಿ ಏನು ಮಾಡುತ್ತಿದ್ದರು?
ವಿಜಯ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Jan 16, 2025 | 9:02 AM

ತಮಿಳು ನಟ ವಿಜಯ್ ಸೇತುಪತಿ ಅವರಿಗೆ ಇಂದು (ಜನವರಿ 16) ಜನ್ಮದಿನ. ಲುಕ್ ಮುಖ್ಯವಲ್ಲ, ನಟನೆ ಮಾತ್ರ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ ಎಂಬುದನ್ನು ಸಾಬೀತು ಮಾಡಿದವರು ಅವರು. ತಮ್ಮಿಷ್ಟದ ಆಹಾರ ಸೇವನೆ ಮಾಡುತ್ತಾ ಅವರು ಹಾಯಾಗಿದ್ದಾರೆ. ಸಿನಿಮಾ ರಂಗಕ್ಕೆ ಬರುವುದಕ್ಕೂ ಮೊದಲು ವಿಜಯ್ ಕಷ್ಟದ ಜೀವನ ನಡೆಸಿದ್ದರು. ಈಗ ಅವರಿಗೆ ಯಶಸ್ಸು ಸಿಕ್ಕ ಬಳಿಕವೂ ಸಿಂಪಲ್ ಜೀವನ ನಡೆಸುತ್ತಾ ಇದ್ದಾರೆ.

ವಿಜಯ್ ಸೇತುಪತಿ ಅವರು ದುಬೈನಲ್ಲಿ ಅಕೌಂಟಂಟ್ ಆಗಿದ್ದರು. ನಂತರ ಥಿಯೇಟರ್ ಕಂಪನಿ ಒಂದಕ್ಕೆ ಅಕೌಂಟಂಟ್ ಆಗಿ ಸೇರಿಕೊಂಡರು. ‘ಅಕೌಂಟಂಟ್ ಆಗಿ ಕೆಲಸ ಮಾಡುವುದರಿಂದ ನಾನು ಪ್ರತಿದಿನ ನಟರನ್ನು ನೋಡಬಹುದು, ಅವರೊಂದಿಗೆ ಇರಬಹುದು, ಅವರೊಂದಿಗೆ ಮಾತನಾಡಬಹುದು ಮತ್ತು ನಟನೆಯ ಕಲೆಯನ್ನು ಅರ್ಥಮಾಡಿಕೊಳ್ಳಬಹುದು ಎಂದು ನಾನು ಭಾವಿಸಿದೆ. ಪ್ರತಿ ಕ್ಷಣ, ಊಟದ ಸಮಯವೂ ನನಗೆ ಕಲಿಕೆಯ ಅನುಭವವಾಗಿತ್ತು. ನಟರ ಸುತ್ತಲೂ ಇರುವುದು ನಿರಂತರ ತರಗತಿಗೆ ಹಾಜರಾದಂತೆ’ ಎಂದಿದ್ದರು ಸೇತುಪತಿ.

ಜೂನಿಯರ್ ಆರ್ಟಿಸ್ಟ್‌ನಿಂದ ಹೀರೋ ತಮ್ಮ ಪ್ರಯಾಣವನ್ನು ಅವರು ನೆನಪಿಸಿಕೊಂಡಿದ್ದರು. ಅವರು ಒಮ್ಮೆ ಹಣಕ್ಕಾಗಿ ಹೆಚ್ಚು ಹೊತ್ತು ಕೆಲಸ ಮಾಡಿದ ಜಾಗದಲ್ಲೇ ತಮ್ಮ ಮೊದಲ ಚಿತ್ರದ ದೃಶ್ಯವನ್ನು ಶೂಟ್ ಮಾಡಿದ್ದರಂತೆ. ‘ಇದೊಂದು ವೃತ್ತ. ಆದರೆ, ಈ ವೃತ್ತ ಈ ರೀತಿ ಪೂರ್ಣಗೊಳ್ಳುತ್ತದೆ ಎಂದುಕೊಂಡಿರಲಿಲ್ಲ. ಈ ರೀತಿಯ ಅನೇಕ ವೃತ್ತಗಳಿವೆ’ ಎಂದಿದ್ದಾರೆ ಅವರು.

2013ರಲ್ಲಿ ಬಂದ ‘ಪಿಜ್ಜಾ’ ಸಿನಿಮಾ ಮೂಲಕ ಹಿರೋ ಆದರು ವಿಜಯ್ ಸೇತುಪತಿ. ಈ ಚಿತ್ರವನ್ನು ಕಾರ್ತಿಕ್ ಸುಬ್ಬರಾಜು ನಿರ್ದೇಶನ ಮಾಡಿದ್ದರು. ಈ ಸಿನಿಮಾ ಅಂದಿನ ಕಾಲಕ್ಕೆ ದೊಡ್ಡ ಮಟ್ಟದ ಹಿಟ್ ಆಯಿತು.

‘ನಾನು ಸಿನಿಮಾ ಶೂಟ್ ಮಾಡಲು ಹೋದಾಗ ಏನಾದರೂ ವಿಶೇಷ ದೃಶ್ಯ ಇದ್ದರೆ, ಆಸಕ್ತಿಕರ ದೃಶ್ಯ ಇದ್ದರೆ ಅದನ್ನು ಮಕ್ಕಳ ಜೊತೆ ಹಂಚಿಕೊಳ್ಳುತ್ತೇನೆ’ ಎಂದಿದ್ದಾರೆ. ನಾನು ತಂದೆಯಾಗಿ ಈ ವಿಚಾರವನ್ನು ಪ್ರೆಸೆಂಟ್ ಮಾಡುವುದಿಲ್ಲ, ನಾನು ಕೂಡ ಮಗು ಆಗುತ್ತೇನೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಚೀನಾದಲ್ಲೂ ‘ಮಹಾರಾಜ’ ಸಿನಿಮಾಗೆ ಜನರು ಫಿದಾ; ವಿಜಯ್ ಸೇತುಪತಿ ಚಿತ್ರಕ್ಕೆ ಭಾರಿ ಕಲೆಕ್ಷನ್​

ವಿಜಯ್ ಸೇತುಪತಿ ಅವರ ಆಸ್ತಿ 140 ಕೋಟಿ ರೂಪಾಯಿ ಎನ್ನಲಾಗಿದೆ. ಅವರ ಬಳಿ ಐಷಾರಾಮಿ ಕಾರುಗಳು ಇವೆ. ಇವುಗಳನ್ನು ಅವರು ಕೇವಲ ಓಡಾಟಕ್ಕೆ ಮಾತ್ರ ಬಳಕೆ ಮಾಡುತ್ತಾರೆ. ಅವರು ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್​ನಲ್ಲೂ ಅವರು ಹೆಸರು ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:02 am, Thu, 16 January 25

ಐಶ್ವರ್ಯ ವೃದ್ಧಿಯಲ್ಲಿ ಉಪ್ಪಿಗಿದೆ ಬಹಳ ಮಹತ್ವ! ಏನದು? ಇಲ್ಲಿದೆ ನೋಡಿ
ಐಶ್ವರ್ಯ ವೃದ್ಧಿಯಲ್ಲಿ ಉಪ್ಪಿಗಿದೆ ಬಹಳ ಮಹತ್ವ! ಏನದು? ಇಲ್ಲಿದೆ ನೋಡಿ
ದಿನ ಭವಿಷ್ಯ: ಜನವರಿ 16ರಂದು ಹೇಗಿದೆ ದ್ವಾದಶ ರಾಶಿಗಳ ಫಲಾಫಲ? ಇಲ್ಲಿದೆ ನೋಡಿ
ದಿನ ಭವಿಷ್ಯ: ಜನವರಿ 16ರಂದು ಹೇಗಿದೆ ದ್ವಾದಶ ರಾಶಿಗಳ ಫಲಾಫಲ? ಇಲ್ಲಿದೆ ನೋಡಿ
ಬೈಕ್​ನ್ನ 60 ಮೀಟರ್ ಎಳೆದೊಯ್ದ ಕಾರು: ಎದೆ ಝಲ್​ ಎನಿಸುವ ವಿಡಿಯೋ
ಬೈಕ್​ನ್ನ 60 ಮೀಟರ್ ಎಳೆದೊಯ್ದ ಕಾರು: ಎದೆ ಝಲ್​ ಎನಿಸುವ ವಿಡಿಯೋ
ಕೊಪ್ಪಳ ಗವಿಸಿದ್ದೇಶ್ವರನ ರಥ ಎಳೆದು ಪುನೀತರಾದ ಭಕ್ತ ಸಾಗರ: ವಿಡಿಯೋ ನೋಡಿ
ಕೊಪ್ಪಳ ಗವಿಸಿದ್ದೇಶ್ವರನ ರಥ ಎಳೆದು ಪುನೀತರಾದ ಭಕ್ತ ಸಾಗರ: ವಿಡಿಯೋ ನೋಡಿ
ತಂದೆಯ ರೀತಿ ಆಶೀರ್ವಾದ ಮಾಡಿದ್ದರು: ಸರಿಗಮ ವಿಜಿ ನಿಧನಕ್ಕೆ ತರುಣ್ ಸಂತಾಪ
ತಂದೆಯ ರೀತಿ ಆಶೀರ್ವಾದ ಮಾಡಿದ್ದರು: ಸರಿಗಮ ವಿಜಿ ನಿಧನಕ್ಕೆ ತರುಣ್ ಸಂತಾಪ
ಬಹಳ ಎಚ್ಚರವಹಿಸಬೇಕೆಂದು ಹೇಳುತ್ತಾರೆ ಪ್ರಯಾಗ್​ರಾಜ್​ಗೆ ಬಂದಿರುವ ಕನ್ನಡಿಗ
ಬಹಳ ಎಚ್ಚರವಹಿಸಬೇಕೆಂದು ಹೇಳುತ್ತಾರೆ ಪ್ರಯಾಗ್​ರಾಜ್​ಗೆ ಬಂದಿರುವ ಕನ್ನಡಿಗ
ಕೊಪ್ಪಳ ಗವಿಮಠದ ಅಜ್ಜನ ಜಾತ್ರೆಗೆ ಹರಿದು ಬಂದ ಜನ ಸಾಗರದ ವಿಡಿಯೋ ನೋಡಿ
ಕೊಪ್ಪಳ ಗವಿಮಠದ ಅಜ್ಜನ ಜಾತ್ರೆಗೆ ಹರಿದು ಬಂದ ಜನ ಸಾಗರದ ವಿಡಿಯೋ ನೋಡಿ
ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡಿದ್ದಾರೆ: ಬಿವೈವಿ
ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡಿದ್ದಾರೆ: ಬಿವೈವಿ
ಮೂಕ ಪ್ರಾಣಿಯ ಕೆಚ್ಚಲು ಕೊಯ್ಯುವುದು ತಾಯಿಗೆ ದ್ರೋಗ ಬಗೆದಂತೆ: ತನ್ವೀರ್ ಸೇಟ
ಮೂಕ ಪ್ರಾಣಿಯ ಕೆಚ್ಚಲು ಕೊಯ್ಯುವುದು ತಾಯಿಗೆ ದ್ರೋಗ ಬಗೆದಂತೆ: ತನ್ವೀರ್ ಸೇಟ
ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ
ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ