
ಬಿಗ್ಬಾಸ್ ಮನೆಗೆ ಬಗೆ ಬಗೆಯ ವ್ಯಕ್ತಿತ್ವವುಳ್ಳ, ಹಿನ್ನೆಲೆಯುಳ್ಳ ಸ್ಪರ್ಧಿಗಳು ಬಂದಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಸಹ ಕೆಲ ಧಾರಾವಾಹಿ ನಟರು, ಕಾಮಿಡಿ ಶೋ ಸ್ಪರ್ಧಿಗಳು ಬಂದಿದ್ದಾರೆ. ಕಳೆದ ಬಾರಿ ‘ಗೀತಾ’ ಧಾರಾವಾಹಿಯ ನಾಯಕಿ ಬಿಗ್ಬಾಸ್ ಮನೆಗೆ ಬಂದಿದ್ದರು, ಈ ಬಾರಿ ‘ಗೀತಾ’ ಧಾರಾವಾಹಿಯ ನಾಯಕ ಧನುಶ್ ಅವರು ಈ ಬಾರಿ ಬಿಗ್ಬಾಸ್ಗೆ ಎಂಟ್ರಿ ಕೊಟ್ಟಿದ್ದಾರೆ. ಅಪ್ಪ-ಅಮ್ಮ, ಪತ್ನಿ, ಗೆಳೆಯರನ್ನು ಬಿಟ್ಟು ಬಿಗ್ಬಾಸ್ ಮನೆಗೆ ಬಂದಿದ್ದಾರೆ.
ಇಷ್ಟು ವರ್ಷ ‘ಗೀತಾ’ ಧಾರಾವಾಹಿಯ ವಿಜಿ ಆಗಿ ಜನರಿಗೆ ಪರಿಚಯ ಆಗಿರುವ, ಸಾಕಷ್ಟು ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ. ಆದರೆ ಅವರು ಧನುಶ್ ಆಗಿ ಕರ್ನಾಟಕದ ಜನರಿಂದ ಆಶೀರ್ವಾದ ಪಡೆಯಬೇಕು ಎಂಬ ಕಾರಣಕ್ಕೆ ಇದೀಗ ಅವರು ಬಿಗ್ಬಾಸ್ ಮನೆಗೆ ಬರುತ್ತಿದ್ದಾರಂತೆ. ನಟನಾಗಿ ಪ್ರೂವ್ ಮಾಡಿಕೊಂಡಿದ್ದೇನೆ, ಆದರೆ ಧನುಶ್ ಆಗಿಯೂ ಜನರಿಂದ ಆಶೀರ್ವಾದ ಪಡೆಯಬೇಕು ಎಂದುಕೊಂಡು ಈಗ ಬಿಗ್ಬಾಸ್ ಮನೆಗೆ ಬಂದಿದ್ದೇನೆ ಎಂದಿದ್ದಾರೆ ಧನುಶ್.
ಧನುಶ್ ಅವರು ತುಂಬು ಕುಟುಂಬದಲ್ಲಿ ಬದುಕುತ್ತಿರುವ ವ್ಯಕ್ತಿ. ಅಪ್ಪನೊಂದಿಗೆ ಹಾಗೂ ಅಮ್ಮನೊಂದಿಗೆ ಧನುಶ್ ಅವರಿಗೆ ಆತ್ಮೀಯತೆ ಇದೆಯಂತೆ. ‘ನಾನು ಅಮ್ಮನ ಮಗ’ ಎನ್ನುವ ಧನುಶ್, ಅಮ್ಮನ ಮಾತನ್ನು ಎಂದಿಗೂ ಮೀರುವುದಿಲ್ಲವಂತೆ. ಅಮ್ಮನೊಂದಿಗೆ ಬಹಳ ಆತ್ಮೀಯತೆ ಧನುಶ್ ಅವರಿಗೆ ಇದೆ.
ಇದನ್ನೂ ಓದಿ:ಬಿಗ್ಬಾಸ್ ಕನ್ನಡ ಸೀಸನ್ 12: ಈ ಬಾರಿಯ ಮನೆ ಹೀಗಿದೆ ನೋಡಿ
ಧನುಶ್ ಅವರು ಮದುವೆಯಾಗಿ ಒಂದೂವರೆ ವರ್ಷಗಳಾಗಿವೆಯಷ್ಟೆ. ಆಷಾಡಮಾಸದಲ್ಲಿ ಬಿಟ್ಟರೆ ಗಂಡನನ್ನು ಬಿಟ್ಟು ಇದ್ದಿದ್ದೇ ಇಲ್ಲವಂತೆ. ಆದರೆ ಈಗ ಮೊದಲ ಬಾರಿಗೆ ಇಷ್ಟು ದಿನಗಳ ಕಾಲ ಪತಿಯನ್ನು ಬಿಟ್ಟು ಇರಲಿದ್ದಾರೆ. ಧನುಶ್ ಸಹ ಪತ್ನಿಯನ್ನು ಬಹಳ ಪ್ರೀತಿಸುತ್ತಾರಂತೆ. ಆಕೆ ಶಾಂತವಾಗಿದ್ದು, ನನ್ನನ್ನು ಶಾಂತವಾಗಿಟ್ಟಿರುತ್ತಾಳೆ, ಅವಳು ಖುಷಿಯಾಗಿದ್ದು, ನನ್ನನ್ನು ಖುಷಿಯಾಗಿ ಇರಿಸಿದ್ದಾಳೆ ಎಂದಿದ್ದಾರೆ ಧನುಶ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:13 pm, Sun, 28 September 25