ಬಿಗ್ ಬಾಸ್ ಕನ್ನಡ ಸೀಸನ್ 1 To 11: ಗೆದ್ದ ಬೀಗಿದವರ ಹೆಸರು, ವಿವರ ಇಲ್ಲಿದೆ

ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಸಮೀಪಿಸಿದೆ. ಈ ಬಾರಿ ಯಾರು ಕಿರೀಟ ಮುಡಿಗೇರಿಸಿಕೊಳ್ಳುತ್ತಾರೆ ಎಂಬ ಕುತೂಹಲ ಮೂಡಿದೆ. ಗಿಲ್ಲಿ ನಟ, ಕಾವ್ಯಾ ಶೈವ ಸೇರಿದಂತೆ ಹಲವು ಸ್ಪರ್ಧಿಗಳು ಫಿನಾಲೆ ಓಟದಲ್ಲಿದ್ದಾರೆ. ಈ ಲೇಖನದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 1ರಿಂದ 11ರವರೆಗಿನ ಎಲ್ಲಾ ವಿಜೇತರು ಮತ್ತು ಅವರ ಪ್ರಯಾಣದ ಸಂಪೂರ್ಣ ವಿವರ ಇಲ್ಲಿದೆ.

ಬಿಗ್ ಬಾಸ್ ಕನ್ನಡ ಸೀಸನ್ 1 To 11: ಗೆದ್ದ ಬೀಗಿದವರ ಹೆಸರು, ವಿವರ ಇಲ್ಲಿದೆ
ಬಿಗ್ ಬಾಸ್
Edited By:

Updated on: Jan 17, 2026 | 6:36 AM

ನೋಡ ನೋಡುತ್ತಾ ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಬಂದೇ ಬಿಟ್ಟಿದೆ. ಈ ಬಾರಿ ಯಾರು ಬಿಗ್ ಬಾಸ್ ಗೆಲ್ಲುತ್ತಾರೆ ಎಂಬ ಕುತೂಹಲ ಮೂಡಿದೆ. ಗಿಲ್ಲಿ ನಟ, ಕಾವ್ಯಾ ಶೈವ, ಅಶ್ವಿನಿ ಗೌಡ, ರಕ್ಷಿತಾ, ರಘು, ಧನುಶ್ ಫಿನಾಲೆ ಓಟದಲ್ಲಿ ಇದ್ದಾರೆ. ಈಗ ಹಳೆಯ ಸೀಸನ್​​ಗಳ ವಿನ್ನರ್​​ಗಳ ಚರ್ಚೆ ನಡೆದಿದೆ. ಈ ಮೊದಲ ಸೀಸನ್​ಗಳಲ್ಲಿ ಯಾರೆಲ್ಲ ವಿನ್ ಆಗಿದ್ದರು ಎನ್ನುವುದರ ವಿವರ ಇಲ್ಲಿದೆ.

ಬಿಗ್ ಬಾಸ್ ಸೀಸನ್ 1: ಬಿಗ್ ಬಾಸ್ ಆರಂಭ ಆಗಿದ್ದು 2013ರಲ್ಲಿ. ಹಿಂದಿಯಲ್ಲಿ ಗಮನ ಸೆಳೆದ ಈ ಶೋನ ಕನ್ನಡಕ್ಕೂ ತರಲಾಯಿತು. ಈಟಿವಿಯಲ್ಲಿ ಮೊದಲ ಬಾರಿ ಶೋ ಪ್ರಸಾರ ಕಂಡಿತು. ಮೊದಲ ಸೀಸನ್ 98 ದಿನಗಳ ಕಾಲ ನಡೆಯಿತು. ಸುದೀಪ್ ಇದರ ಹೋಸ್ಟ್ ಆದರು. ವಿಜಯ್ ರಾಘವೇಂದ್ರ ಮೊದಲ ವಿನ್ನರ್.

ಬಿಗ್ ಬಾಸ್ ಸೀಸನ್ 2: 2014ರ ಜೂನ್ 29ರಿಂದ ಅಕ್ಟೋಬರ್ 5ರವರೆಗೆ ‘ಬಿಗ್ ಬಾಸ್ ಸೀಸನ್ 2’ ನಡೆಸಲಾಯಿತು. ಅಕುಲ್ ಬಾಲಾಜಿ ವಿನ್ನರ್ ಆದರೆ, ಸೃಜನ್ ಲೋಕೆಶ್ ರನ್ನರ್ ಅಪ್​. ಏಷ್ಯಾನೆಟ್ ಸುವರ್ಣದಲ್ಲಿ ಈ ಶೋ ಪ್ರಸಾರ ಆಗಿತ್ತು.

ಬಿಗ್ ಬಾಸ್ ಸೀಸನ್ 3: ‘ಬಿಗ್ ಬಾಸ್ 3’ 2015ರಲ್ಲಿ ನಡೆಯಿತು. 98 ದಿನ ಶೋ ಪ್ರಸಾರ ಕಂಡಿತ್ತು. ಚಂದನ್ ಕುಮಾರ್ ರನ್ನರ್​ ಅಪ್ ಹಾಗೂ ಶ್ರುತಿ ಶೋನ ವಿನ್ನರ್.

ಬಿಗ್ ಬಾಸ್ ಸೀಸನ್ 4: ‘ಬಿಗ್ ಬಾಸ್ 4’ರಲ್ಲಿ ಪ್ರಥಮ್ ಅವರು ವಿನ್ನರ್ ಹಾಗೂ ಕಿರಿಕ್ ಕೀರ್ತಿ ರನ್ನರ್ ಅಪ್ ಆದರು. ಮೊದಲ ಬಾರಿಗೆ ಶೋ 100 ದಿನಗಳನ್ನು ದಾಟಿತ್ತು. ಆ ಸೀಸನ್​ನಲ್ಲಿ ಎರಡು ವಾರ ಹೆಚ್ಚುವರಿಯಾಗಿ ನಡೆಸಲಾಯಿತು. 112 ದಿನಗಳ ಕಾಲ ಶೋ ನಡೆದಿತ್ತು.

ಬಿಗ್ ಬಾಸ್ ಸೀಸನ್ 5: ಚಂದನ್ ಶೆಟ್ಟಿ ಅವರು ಐದನೇ ಸೀಸನ್ ವಿನ್ ಆದರು. ದಿವಾಕರ್ ರನ್ನರ್ ಅಪ್ ಆದರು 20 ಜನ ಇದ್ದ ಸ್ಪರ್ಧೆ 105 ದಿನಗಳ ಕಾಲ ನಡೆಯಿತು.

ಬಿಗ್ ಬಾಸ್ ಸೀಸನ್ 6: ಶಶಿಕುಮಾರ್ ಅವರು ಆರನೇ ಸೀಸನ್ ವಿನ್ ಆದರು. ಕಲರ್ಸ್ ಸೂಪರ್​ನಲ್ಲಿ ಶೋ ಪ್ರಸಾರ ಕಂಡಿತು. ನವೀನ್ ಸಜ್ಜು ರನ್ನರ್ ಅಪ್ ಆದರು.

ಬಿಗ್ ಬಾಸ್ ಸೀಸನ್ 7: ಶೈನ್ ಶೆಟ್ಟಿ ಸೀಸನ್ 7ರ ವಿನ್ನರ್ ಹಾಗೂ ಕುರಿ ಪ್ರತಾಪ್ ರನ್ನರ್ ಅಪ್ ಆದರು. ಇದು ಬಿಗ್ ಬಾಸ್ ಇತಿಹಾಸದಲ್ಲೇ ಅತ್ಯುತ್ತಮ ಸೀಸನ್ ಎನಿಸಿಕೊಂಡಿದೆ.

ಬಿಗ್ ಬಾಸ್ ಸೀಸನ್ 8: ಮಂಜು ಪಾವಗಡ ಶೋನ ವಿನ್ನರ್ ಆದರೆ, ಅರವಿಂದ್ ಕೆಪಿ ರನ್ನರ್​ ಅಪ್ . 120 ದಿನಗಳ ಕಾಲ ಶೋನ ನಡೆಯಿತು. ಕೊವಿಡ್ ಎರಡನೆ ಅಲೆ ಕಾರಣದಿಂದ ಶೋನ ಅರ್ಧಕ್ಕೆ ನಿಲ್ಲಿಸಿ ಮತ್ತೆ ನಡೆಸಲಾಗಿತ್ತು. ಬಿಗ್ ಬಾಸ್ ಇತಿಹಾಸದಲ್ಲಿ ಹೀಗಾಗಿದ್ದು ಇದೇ ಮೊದಲು.

ಬಿಗ್ ಬಾಸ್ ಸೀಸನ್ 9: ಈ ಸೀಸನ್​​ನಲ್ಲಿ ಹಳೆಯ ಸ್ಪರ್ಧಿಗಳು ಬಂದಿದ್ದರು. ಒಟಿಟಿ ಬಳಿಕ ಟಿವಿ ಶೋ ಆರಂಭಿಸಲಾಯಿತು. ರೂಪೇಶ್ ಶೆಟ್ಟಿ ವಿನ್ನರ್ ಆದರೆ, ರಾಕೇಶ್ ಅಡಿಗ ರನ್ನರ್ ಅಪ್ ಆದರು.

ಬಿಗ್ ಬಾಸ್ ಸೀಸನ್ 10: ಈ ಸೀಸನ್​ ಅಲ್ಲಿ ಕಾರ್ತಿಕ್ ಮಹೇಶ್ ಅವರು ವಿನ್ನರ್ ಹಾಗೂ ಡ್ರೋನ್ ಪ್ರತಾಪ್ ರನ್ನರ್ ಅಪ್ ಆದರು.

ಇದನ್ನೂ ಓದಿ: ಬಿಗ್ ಬಾಸ್​​ನ ಗಿಲ್ಲಿನೇ ಗೆಲ್ಲೋದು; ಟೇಬಲ್ ತಟ್ಟಿ ಭವಿಷ್ಯ ನುಡಿದ ಶಿವಣ್ಣ

ಬಿಗ್ ಬಾಸ್ ಸೀಸನ್ 11: ಹನುಮಂತ ಅವರು ಕಳೆದ ಸೀಸನ್ ವಿನ್ನರ್ ಆದರೆ, ತ್ರಿವಿಕ್ರಮ್ ರನ್ನರ್ ಅಪ್ ಆಗಿದ್ದಾರೆ.

ಬಿಗ್ ಬಾಸ್ ಸೀಸನ್ 12: ಈ ಬಾರಿ ಒಟ್ಟು 112 ದಿನ ಬಿಗ್ ಬಾಸ್ ನಡೆಯುತ್ತಿದೆ. ಜನವರಿ 18ರಂದು ವಿನ್ನರ್ ಘೋಷಣೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 6:30 am, Sat, 17 January 26