ಗಿಲ್ಲಿ ಬಳಿ ಇದೆ ದುಬಾರಿ ಕಾರು; ಧ್ರುವಂತ್ ಆರೋಪ ಒಪ್ಪಿಕೊಂಡ ನಟ
ಬಿಗ್ ಬಾಸ್ ಕನ್ನಡ 12ರಲ್ಲಿ ಗಿಲ್ಲಿ ನಟ ಬನಿಯನ್ ಧರಿಸಿ ಓಡಾಡುತ್ತಿರುವ ಬಗ್ಗೆ ವಿವಾದ ಎದ್ದಿದೆ. ಧ್ರುವಂತ್ ಇವರನ್ನು ಬಡವನೆಂದು ನಟಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗಿಲ್ಲಿ, ತಮ್ಮ ಬಳಿ ಎಂಜಿ ಹೆಕ್ಟರ್ ಕಾರು ಇರುವುದನ್ನು ಒಪ್ಪಿಕೊಂಡರು, ಆದರೆ ಅದು ಸೆಕೆಂಡ್ ಹ್ಯಾಂಡ್ ಎಂದರು. ಕುರಿ ಫಾರ್ಮ್ ಮಾಡುವ ಯೋಜನೆ ಬಗ್ಗೆಯೂ ವಿವರಿಸಿದರು.

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (BBK 12) ಗಿಲ್ಲಿ ನಟ ಅವರು ಸದಾ ಬನಿಯನ್ ಹಾಕಿಕೊಂಡು ಸುತ್ತಾಡುತ್ತಿದ್ದಾರೆ. ಈ ಕಾರಣಕ್ಕೆ ಇವರನ್ನು ಮನೆಯ ಕೆಲವರು ಸಾಕಷ್ಟು ಟೀಕೆ ಮಾಡಿದ್ದಾರೆ. ಈ ವಿಚಾರವಾಗಿ ಗಿಲ್ಲಿ ನಟ ಅವರು ಸ್ಪಷ್ಟನೆ ನೀಡಿದ್ದಾರೆ. ಈ ವೇಳೆ ತಮ್ಮ ಬಳಿ ಇರುವ ಕಾರಿನ ಬಗ್ಗೆ ಮಾಹಿತಿ ನೀಡಿದ್ದಾರೆ. ಗಿಲ್ಲಿ ನಟ ಅವರು ಧ್ರುವಂತ್ನ ಕಾಲೆಳೆದಿದ್ದಾರೆ.
ಬಿಗ್ ಬಾಸ್ನಲ್ಲಿ ಗಿಲ್ಲಿ ಬಡವ ಎಂದು ತೋರಿಸಿಕೊಳ್ಳುತ್ತಿದ್ದಾರೆ ಎಂಬುದು ಧ್ರುವಂತ್ ಆರೋಪ. ‘ನಾನು ಬೇರೆಯವರನ್ನು ಟೀಕೆ ಮಾಡಿ ಫೂಟೆಜ್ ತೆಗೆದುಕೊಳ್ಳುತ್ತಿಲ್ಲ. ಗಿಲ್ಲಿ ಬಡವನಂತೆ ತೋರಿಸಿಕೊಳ್ಳುತ್ತಿದ್ದಾನೆ. ಬನಿಯನ್ ಹಾಕಿ ಓಡಾಡುತ್ತಿದ್ದಾನೆ. ಚಂದ್ರಣ್ಣನಿಂದ ನನಗೆ ಒಂದು ವಿಚಾರ ಗೊತ್ತಾಗಿದೆ. ಗಿಲ್ಲಿ ನಟನ ಬಳಿ ಇರೋದು ಎಂಜಿ ಹೆಕ್ಟರ್ ಕಾರು. 100 ಕುರಿ ಕೂಡ ಇದೆ. ಆಗ ಗಿಲ್ಲಿ ನಟನ ರಿಯಲ್ ಫೇಸ್ ಗೊತ್ತಾಯ್ತು’ ಎಂದರು ಧ್ರುವಂತ್.
ಇದಕ್ಕೆ ಉತ್ತರಿಸಿದ ಗಿಲ್ಲಿ ನಟ, ‘ನಾನು ಬಡವ ಎಂದು ನಿನಗೆ ಯಾವಾಗದರೂ ಹೇಳಿದ್ದೀನಾ? ಬಡವ ಮಾತ್ರ ಬನಿಯನ್ ಹಾಕಿಕೊಳ್ತಾನಾ? ಎಂಜಿ ಹೆಕ್ಟರ್ ಇರೋದು ಹೌದು. ಅದು ಸೆಕೆಂಡ್ ಹ್ಯಾಂಡ್ ತೆಗೆದುಕೊಂಡಿದ್ದು. 100 ಕುರಿ ತಂದು ಫಾರ್ಮ್ ಮಾಡಬೇಕು ಎಂದುಕೊಂಡಿದ್ದು ಹೌದು. ಆದರೆ, ಇನ್ನೂ ಕುರಿ ತಂದಿಲ್ಲ’ ಎಂದಿದ್ದಾರೆ ಗಿಲ್ಲಿ ನಟ.
View this post on Instagram
ಇನ್ನು, ಧ್ರುವಂತ್ ಜೊತೆ ಯಾರೆಲ್ಲಾ ಸೇರ್ತಾರೋ ಅವರು ದೊಡ್ಮನೆಯಿಂದ ಹೋಗ್ತಾರೆ ಎಂದು ಗಿಲ್ಲಿ ಆರೋಪಿಸಿದ್ದಾರೆ. ‘ಮಲ್ಲಮ್ಮ ಜೊತೆ ಸೇರಿ ಅವರು ಹೋಗಬೇಕು ಎಂದು ಇಷ್ಟಪಟ್ಟಿರಿ ಹೋದರು. ಆ ಬಳಿಕ ಚಂದ್ರಪ್ರಭನ ಇಷ್ಟಪಟ್ಟಿರಿ ಅವರೂ ಹೋದರು. ಮುಂದಿನ ವಾರ ಯಾರು ಹೋಗ್ತಾರೆ ನೋಡಬೇಕಿದೆ’ ಎಂದು ಗಿಲ್ಲಿ ಹೇಳಿದರು.
ಇದನ್ನೂ ಓದಿ: ಈ ವಾರವೂ ಅಶ್ವಿನಿಗೆ ಕಿಚ್ಚನ ಕ್ಲಾಸ್? ಜಾನ್ವಿ ಜೊತೆ ಸೇರಿ ಮಾಡಿದ್ದ ಸಂಚು ಬಯಲು
ಗಿಲ್ಲಿ ಅವರು ಹೇಳಿದಂತೆ ನಡೆದಿರೋದು ಹೌದು. ಧ್ರುವಂತ್ ಅವರು ಮಲ್ಲಮ್ಮ, ಮಲ್ಲಮ್ಮ ಎಂದು ಸಾಕಷ್ಟು ಸುತ್ತಾಡುತ್ತಿದ್ದರು. ಅವರು ಎಲಿಮಿನೇಟ್ ಆದ ಬಳಿಕ ಚಂದ್ರಪ್ರಭ ಜೊತೆ ಅವರಿಗೆ ಗೆಳೆತನ ಬೆಳೆದಿತ್ತು. ಅವರು ಕಳೆದ ವಾರ ಹೋದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




