ಕಾವ್ಯಾಗೋಸ್ಕರ ದೊಡ್ಡ ತ್ಯಾಗ ಮಾಡಿದ ಗಿಲ್ಲಿ; ಸಿಕ್ತು ಪ್ರೀತಿಯ ಅಪ್ಪುಗೆ

Gilli And Kavya: ಬಿಗ್ ಬಾಸ್ ಕನ್ನಡ 12ರಲ್ಲಿ ಕಾವ್ಯಾಗಾಗಿ ಗಿಲ್ಲಿ ತಮ್ಮ ಅಮೂಲ್ಯ ಪತ್ರ ತ್ಯಾಗ ಮಾಡಿದ್ದಾರೆ. ಈ ತ್ಯಾಗದಿಂದ ಕಾವ್ಯಾ ನಾಮಿನೇಷನ್‌ನಿಂದ ಬಚಾವ್ ಆದರು. ಗಿಲ್ಲಿಯ ಪ್ರೀತಿಯ ತ್ಯಾಗಕ್ಕೆ ಕಾವ್ಯಾ ಭಾವುಕವಾಗಿ ಅಪ್ಪುಗೆ ನೀಡಿ ಕೃತಜ್ಞತೆ ಸಲ್ಲಿಸಿದ್ದಾರೆ. ಈ ವಾರ ಕಾವ್ಯಾ ಕ್ಯಾಪ್ಟನ್ ಆಗುವ ಸಾಧ್ಯತೆಯಿದ್ದು, ಗಿಲ್ಲಿಯ ಈ ತ್ಯಾಗ ಅಭಿಮಾನಿಗಳಿಗೆ ಖುಷಿ ನೀಡಿದೆ.

ಕಾವ್ಯಾಗೋಸ್ಕರ ದೊಡ್ಡ ತ್ಯಾಗ ಮಾಡಿದ ಗಿಲ್ಲಿ; ಸಿಕ್ತು ಪ್ರೀತಿಯ ಅಪ್ಪುಗೆ
ಗಿಲ್ಲಿ-ಕಾವ್ಯಾ

Updated on: Nov 07, 2025 | 7:30 AM

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ (BBk 12) ಕಾವ್ಯಾಗೋಸ್ಕರ ದೊಡ್ಡ ತ್ಯಾಗ ಮಾಡಿದ್ದಾರೆ ಗಿಲ್ಲಿ. ಈ ತ್ಯಾಗ ಅದೆಷ್ಟು ದೊಡ್ಡದಾಗಿತ್ತು ಎಂದರೆ ಇದರಿಂದ ಅವರಿಗೆ ಮನೆಯಿಂದ ಬರುತ್ತಿದ್ದ ಪತ್ರವೇ ತಪ್ಪಿ ಹೋಯ್ತು. ಆದರೂ ಅವರ ಮೊಗದಲ್ಲಿ ಯಾವುದೇ ಬೇಸರ ಇರಲಿಲ್ಲ. ಆದರೆ, ಅವರು ಮಾಡಿದ ಈ ತ್ಯಾಗಕ್ಕೆ ಕಾವ್ಯಾ ಅವರಿಂದ ಪ್ರೀತಿಯ ಅಪ್ಪುಗೆ ಸಿಕ್ಕಿದೆ. ಇದರಿಂದ ಗಿಲ್ಲಿ ಖುಷಿ ಆದರು.

ಈ ವಾರ ಮನೆಯಿಂದ ಪತ್ರ ಬರುತ್ತಿದೆ. ಇದಕ್ಕೆ ವಿವಿಧ ಚಟುವಟಿಕೆ ನೀಡಲಾಗುತ್ತಿದೆ. ಕಾವ್ಯಾ ಹಾಗೂ ಗಿಲ್ಲಿಯನ್ನು ಪ್ರತ್ಯೇಕವಾಗಿ ಕರೆಯಲಾಯಿತು. ಈ ವೇಳೆ ಗಿಲ್ಲಿ ಎದುರು ಕಾವ್ಯಾ ಲೆಟರ್ ಹಾಗೂ ಕಾವ್ಯಾ ಎದುರು ಗಿಲ್ಲಿ ಲೆಟರ್ ಇಡಲಾಯಿತು. ಯಾರಾದರೂ ಒಬ್ಬರು ಮಾತ್ರ ಲೆಟರ್​ನ ಹೊರಗೆ ತರಬಹುದಿತ್ತು. ಒಂದೊಮ್ಮೆ ಅಪ್ಪಿ ತಪ್ಪಿ ಇಬ್ಬರೂ ಲೆಟರ್ ತಂದರೆ ಇಬ್ಬರೂ ಲೆಟರ್ ಕಳೆದುಕೊಂಡು ನಾಮಿನೇಷನ್​ನಲ್ಲಿ ಮುಂದುವರಿಯಬೇಕಿತ್ತು.

ಗಿಲ್ಲಿ ಲೆಟರ್ ತಂದೇ ತರುತ್ತಾನೆ ಎಂಬ ಭರವಸೆಯಲ್ಲಿ ಕಾವ್ಯಾ ಅವರು ಯಾವುದೇ ಲೆಟರ್ ತರಲು ಹೋಗಿಲ್ಲ. ನೋಡಿದರೆ ಅದು ನಿಜವೇ ಆಗಿದೆ. ಗಿಲ್ಲಿ ಕಾವ್ಯಾ ಲೆಟರ್ ತಂದಿದ್ದರು. ಈ ಕಾರಣಕ್ಕೆ ಗಿಲ್ಲಿ ನಾಮಿನೇಟ್ ಆದರೆ, ಕಾವ್ಯಾ ನಾಮಿನೇಷನ್​ನಿಂದ ಬಚಾವ್ ಆದರು. ಇಬ್ಬರ ಅಂಡರ್​ಸ್ಟ್ಯಾಂಡಿಂಗ್ ನೋಡಿ ಅನೇಕರಿಗೆ ಅಚ್ಚರಿ ಆಗಿದೆ.

ಇದನ್ನೂ ಓದಿ: ಕಣ್ಣೀರು ಸುರಿಸುತ್ತ ಬಿಗ್ ಬಾಸ್ ಮನೆಯಲ್ಲಿ ಮತ್ತೆ ಒಂದಾಗ ಅಶ್ವಿನಿ ಗೌಡ, ಜಾಹ್ನವಿ

ಗಿಲ್ಲಿ ಲೆಟರ್ ತಂದಿದ್ದಕ್ಕೆ ಕಾವ್ಯಾ ಅವರು ಸಂತೋಷಪಟ್ಟರು. ಕಾವ್ಯಾ ಕೂಡ ಗಿಲ್ಲಿ ತ್ಯಾಗವನ್ನು ಕೊಂಡಾಡಿದರು. ಅಲ್ಲದೆ, ಪ್ರೀತಿಯಿಂದ ಅಪ್ಪುಗೆ ಕೊಟ್ಟರು. ಆಯ್ಕೆ ಆದ ಆರು ಮಂದಿ ಪೈಕಿ ಒಬ್ಬರು ಕ್ಯಾಪ್ಟನ್ ಆಗಿ ಆಯ್ಕೆ ಆಗಬೇಕಿದೆ. ಈ ವಾರ ಒಂದಷ್ಟು ಪ್ರೇಕ್ಷಕರನ್ನು ಕರೆಸಿ ವೋಟಿಂಗ್ ಮಾಡಿಸಲಾಗಿದೆ. ಈ ವೇಳೆ ಕಾವ್ಯಾಗೆ ಹೆಚ್ಚು ಮತ ಬಿದ್ದರೆ ಅವರು ಈ ವಾರದ ಕ್ಯಾಪ್ಟನ್ ಕೂಡ ಆಗಲಿದ್ದಾರೆ. ಇದು ನಿಜವಾದ ಅವರ ಫ್ಯಾನ್ಸ್ ಕೂಡ ಖುಷಿಪಡಲಿದ್ದಾರೆ. ಇದರ ಜೊತೆಗೆ ಗಿಲ್ಲಿ ಅವರು ತಮ್ಮ ಆಟದ ಬಗ್ಗೆಯೂ ಹೆಚ್ಚು ಗಮನ ಹರಿಸಬೇಕಾದ ಅವಶ್ಯಕತೆ ಇದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 7:06 am, Fri, 7 November 25