ಗಿಲ್ಲಿ ಕೈಗೊಂಬೆಯಾದ್ರಾ ರಕ್ಷಿತಾ ಶೆಟ್ಟಿ? ವೀಕೆಂಡ್​ನಲ್ಲಿ ಸುದೀಪ್ ಕ್ಲಾಸ್ ಫಿಕ್ಸ್?

ಬಿಗ್ ಬಾಸ್ ಕನ್ನಡ 12ರಲ್ಲಿ ರಕ್ಷಿತಾ ಶೆಟ್ಟಿ ನಾಮಿನೇಷನ್ ಪ್ರಕ್ರಿಯೆಯಲ್ಲಿ ಗಿಲ್ಲಿಯ ಸಲಹೆಗೆ ಮಣಿದರೇ ಎಂಬ ಪ್ರಶ್ನೆ ಮೂಡಿದೆ. ಟಾಸ್ಕ್ ಗೆದ್ದ ನಂತರ ರಕ್ಷಿತಾ, ಗಿಲ್ಲಿಯ ಸೂಚನೆಯಂತೆ ಸುಧಿಯನ್ನು ಸೇವ್ ಮಾಡಿ ರಘುವನ್ನು ನಾಮಿನೇಟ್ ಮಾಡಲು ಹಠ ಹಿಡಿದರು. ಇದರಿಂದ ರಕ್ಷಿತಾ ಗಿಲ್ಲಿಯ ಕೈಗೊಂಬೆ ಎಂಬ ಅನುಮಾನ ವೀಕ್ಷಕರಿಗಿದೆ.

ಗಿಲ್ಲಿ ಕೈಗೊಂಬೆಯಾದ್ರಾ ರಕ್ಷಿತಾ ಶೆಟ್ಟಿ? ವೀಕೆಂಡ್​ನಲ್ಲಿ ಸುದೀಪ್ ಕ್ಲಾಸ್ ಫಿಕ್ಸ್?
ಬಿಗ್ ಬಾಸ್

Updated on: Nov 13, 2025 | 7:33 AM

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (BBK 12) ರಕ್ಷಿತಾ ಶೆಟ್ಟಿ ಹಾಗೂ ಗಿಲ್ಲಿ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಗಿಲ್ಲಿಯನ್ನು ಕಂಡರೆ ರಕ್ಷಿತಾಗೆ ಒಳ್ಳೆಯ ಭಾವನೆ ಇದೆ. ಆದರೆ, ಈಗ ರಕ್ಷಿತಾ ಅವರು ಗಿಲ್ಲಿಯ ಕೈಗೊಂಬೇ ಆದರೇ ಎನ್ನುವ ಪ್ರಶ್ನೆ ಮೂಡಿದೆ. ಅವರು ಮಾಡಿದ ಹಠ ನೋಡಿದರೆ ವೀಕ್ಷಕರಿಗೆ ಹಾಗೊಂದು ಅನುಮಾನ ಬಂದೇ ಬರುತ್ತದೆ. ಈ ಬಗ್ಗೆ ವೀಕೆಂಡ್​ನಲ್ಲಿ ಸುದೀಪ್ ಪ್ರಶ್ನೆ ಮಾಡುವ ಸಾಧ್ಯತೆ ಇದೆ.

ಇತ್ತೀಚೆಗೆ ನಡೆದ ಟಾಸ್ಕ್​​ ಅಲ್ಲಿ ರಕ್ಷಿತಾ ಶೆಟ್ಟಿ ಅವರು ಒಂದು ಟೀಂ ಆದರೆ, ಗಿಲ್ಲಿ ಮತ್ತೊಂದು ತಂಡದಲ್ಲಿ ಇದ್ದರು. ರಕ್ಷಿತಾ ತಂಡ ಗೆದ್ದಿತು. ಈ ಕಾರಣಕ್ಕೆ ಅವರ ತಂಡದ ಒಬ್ಬರನ್ನು ನಾಮಿನೇಷನ್​ನಿಂದ ಬಚಾವ್ ಮಾಡಬೇಕಿತ್ತು. ಈ ನಿರ್ಧಾರ ಒಮ್ಮತದಿಂದ ಬರಬೇಕಿತ್ತು. ಈ ಬಗ್ಗೆ ಚರ್ಚೆ ಮಾಡಲು ಹೊರಡುವ ಮುನ್ನ ಗಿಲ್ಲಿ ಅವರು ರಕ್ಷಿತಾ ಶೆಟ್ಟಿ ಬಳಿ ಮಾತನಾಡಿದ್ದಾರೆ. ಏನೇ ಆದರೂ ನೀನು ನಿನ್ನ ನಿರ್ಧಾರ ಬಿಡಬಾರದು ಎಂದು ಗಿಲ್ಲಿ ರಕ್ಷಿತಾಗೆ ಕಿವಿಮಾತು ಹೇಳಿದ್ದರು.

ಅಲ್ಲಿ ಗಿಲ್ಲಿ ಹೇಳಿದಂತೆ ರಕ್ಷಿತಾ ನಡೆದುಕೊಂಡಿದ್ದಾರೆ. ಸುಧಿಯನ್ನು ಸೇವ್ ಮಾಡಬೇಕು, ರಘು ನಾಮಿನೇಟ್ ಆಗಬೇಕು ಎಂದು ರಕ್ಷಿತಾ ಹಠ ಹಿಡಿದಿದ್ದಾರೆ. ಸಿಕ್ಕ ಅವಕಾಶ ಕೈ ತಪ್ಪಬಹುದು ಎಂಬ ಕಾರಣಕ್ಕೆ ಅಶ್ವಿನಿ ಹಾಗೂ ಇತರರು ಭಯ ಬಿದ್ದು ರಕ್ಷಿತಾ ಮಾತಿಗೆ ಒಪ್ಪಿಗೆ ಸೂಚಿಸಿದ್ದಾರೆ. ರಕ್ಷಿತಾ ಅವರು ಆಗಾಗ ಎದುರಾಳಿ ತಂಡದ ಗಿಲ್ಲಿಯಿಂದ ಹಿಂಟ್ ತೆಗೆದುಕೊಂಡು ಹೋಗುತ್ತಿದ್ದುದು ಸ್ಪಷ್ಟವಾಗುತ್ತಿತ್ತು.

ಇದನ್ನೂ ಓದಿ: ಅಷ್ಟೆಲ್ಲ ಬೆಂಬಲ ನೀಡಿದ ರಘುವನ್ನೇ ನಾಮಿನೇಟ್ ಮಾಡಿದ ರಕ್ಷಿತಾ ಶೆಟ್ಟಿ

ಇತ್ತ ಗಿಲ್ಲಿ ಅವರು, ‘ರಕ್ಷಿತಾ ನಮ್ಮ ವಂಶದ ಕುಡಿ. ನನ್ನ ಹೆಸರನ್ನು ಉಳಿಸುತ್ತಾರೆ’ ಎಂದೆಲ್ಲ ಹೇಳಿದರು. ಇದನ್ನು ಕೇಳಿ ಧನುಷ್ ಅವರು, ‘ನೀನು ಇದೇ ರೀತಿ ಹೇಳ್ತಾ ಇದ್ದರೆ ನೀನು ಹೇಳಿಕೊಟ್ಟಿದ್ದರಿಂದಲೇ ಅವಳು ಆ ರೀತಿ ಆಡಿದಳು ಎಂದಾಗುತ್ತದೆ. ಆ ರೀತಿ ಹೇಳಬೇಡ’ ಎಂದರು. ಇದಕ್ಕೆ ಉತ್ತರಿಸಿದ ಗಿಲ್ಲಿ, ‘ನಾನು ಅವಳ ಬಳಿ ಜೋಕ್​ಗೆ ಆ ರೀತಿ ಹೇಳಿದ್ದು’ ಎಂದು ಸ್ಪಷ್ಟನೆ ಕೊಡುವ ಕೆಲಸ ಮಾಡಿದರು. ಈ ಬಗ್ಗೆ ವೀಕೆಂಡ್​ನಲ್ಲಿ ಚರ್ಚೆ ಆಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.