
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಕಾವ್ಯಾ (Kavya) ಹಾಗೂ ಗಿಲ್ಲಿ ಗೆಳೆತನದ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಇಬ್ಬರ ಮಧ್ಯೆ ಆಗಾಗ ಕಿರಿಕ್ಗಳು ಆಗುತ್ತಲೇ ಇರುತ್ತವೆ. ನಂತರ ಇವರು ಮತ್ತೆ ಒಂದಾಗುತ್ತಾರೆ. ಇದು ಸಾಕಷ್ಟು ಬಾರಿ ರಿಪೀಟ್ ಆಗಿದೆ. ಈಗ ಕಾವ್ಯಾ ಅವರು ನಡೆದುಕೊಂಡ ರೀತಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಗಿಲ್ಲಿ ಅಭಿಮಾನಿಗಳಿಗೆ ಈ ನಡೆ ಸಾಕಷ್ಟು ಬೇಸರ ಮೂಡಿಸಿದೆ. ಅಷ್ಟಕ್ಕೂ ಅಲ್ಲಿ ನಡೆದಿದ್ದು ಏನು? ಆ ಬಗ್ಗೆ ಇಲ್ಲಿದೆ ವಿವರ.
ಬಿಗ್ ಬಾಸ್ ಚಟುವಟಿಕೆ ಒಂದನ್ನು ಆಯೋಜನೆ ಮಾಡಿದ್ದರು. ಇದರ ಅನುಸಾರ ಮನೆಯ ಪ್ರತಿ ಸ್ಪರ್ಧಿ ಮತ್ತೋರ್ವ ಸ್ಪರ್ಧಿಯನ್ನು ಕರೆದು ಅವರಿಂದ ತಮಗೆ ಆದ ನೋವನ್ನು ಹೇಳಬೇಕು. ಅವರು ಯಾವಾಗ ಸಿಟ್ಟಲ್ಲಿ ಮಾತನಾಡಿದ್ದು ಎಂಬುದನ್ನು ಹೇಳಿ, ಚಾಕೋಲೇಟ್ ನೀಡಿ ಸಿಹಿಯಾಗಿ ಮಾತನಾಡುವಂತೆ ಕೋರಬೇಕು. ಈ ವೇಳೆ ಗಿಲ್ಲಿ ಅವರು ಕಾವ್ಯಾ ಬಗ್ಗೆ ಹೇಳಿದರು.
ಕಾವ್ಯಾ ಅವರಿಂದ ಆದ ಒಂದು ಬೇಸರದ ಘಟನೆಯನ್ನು ನೆನಪಿಸಿಕೊಂಡರು ಗಿಲ್ಲಿ. ಆ ಸಂದರ್ಭದಲ್ಲಿ ಕಾವ್ಯಾ ಸಿಹಿಯಾಗಿ ಮಾತನಾಡಬಹುದಿತ್ತು ಎಂದು ಅಭಿಪ್ರಾಯಪಟ್ಟರು. ಇದನ್ನು ಕಾವ್ಯಾ ಕೇಳಿಸಿಕೊಂಡರು. ಹೋಗುವಾಗ ಶೇಕ್ ಹ್ಯಾಂಡ್ ಮಾಡಲು ಗಿಲ್ಲಿ ಮುಂದಾದರು. ಆದರೆ, ಇದಕ್ಕೆ ಕಾವ್ಯಾ ಒಪ್ಪಲೇ ಇಲ್ಲ. ಅವರು ಕೈ ಕುಲುಕದೇ ನೇರವಾಗಿ ಅಲ್ಲಿಂದ ಕೆಳಗಿಳಿದು ಬಂದರು. ಈ ವಿಡಿಯೋ ಚರ್ಚೆಗೆ ಕಾರಣ ಆಗಿದೆ. ‘ಗಿಲ್ಲಿ ಗೆಳೆತನವನ್ನು ಕಡೆಗಣಿಸಬೇಡಿ. ಮುಂದೊಂದು ದಿನ ಅವರ ಕಾಲ್ಶೀಟ್ ಪಡೆಯಲು ಸಾಲಲ್ಲಿ ನಿಲ್ಲಬೇಕಾಗುತ್ತದೆ’ ಎಂದೆಲ್ಲ ಫ್ಯಾನ್ಸ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ‘ನಿನಗೆ ಮಾನ-ಮಾರ್ಯಾದೆ ಏನೂ ಇಲ್ಲ’; ಗಿಲ್ಲಿಗೆ ಗಂಭೀರವಾಗಿಯೇ ಹೇಳಿದ ಕಾವ್ಯಾ
ಇನ್ನೊಂದು ತಿಂಗಳಲ್ಲಿ ‘ಬಿಗ್ ಬಾಸ್’ ಫಿನಾಲೆ ನಡೆಯಲಿದೆ. ಈ ಬಾರಿ ಶೋನ ಗೆಲ್ಲೋದು ಯಾರು ಎನ್ನುವ ಪ್ರಶ್ನೆ ಮೂಡಿದೆ. ಈಗಾಗಲೇ 13 ಮಂದಿ ಮನೆಯಲ್ಲಿ ಇದ್ದಾರೆ. ಈ ವಾರ ಯಾವುದೇ ಎಲಿಮಿನೇಷನ್ ಇಲ್ಲ. ಹೀಗಾಗಿ, ರಜತ್ ಹಾಗೂ ಚೈತ್ರಾ ಅವರು ಬಿಗ್ ಬಾಸ್ ಮನೆಯಿಂದ ಹೊರಕ್ಕೆ ಬರುತ್ತಾರೆ ಎಂದು ಹೇಳಲಾಗುತ್ತಾ ಇದೆ. ಡಿಸೆಂಬರ್ 21ರ ಎಪಿಸೋಡ್ನಲ್ಲಿ ಈ ಬಗ್ಗೆ ಗೊತ್ತಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:13 pm, Sat, 20 December 25