‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಮೊದಲ ಫಿನಾಲೆಯಲ್ಲಿ ಹೊರ ಹೋಗೋದು ಎಷ್ಟು ಜನ?

ಬಿಗ್ ಬಾಸ್ ಕನ್ನಡ ಸೀಸನ್ 12 ಇತಿಹಾಸದಲ್ಲೇ ಮೊದಲ ಬಾರಿಗೆ 3ನೇ ವಾರದಲ್ಲಿ 'ಫಿನಾಲೆ' ನಡೆಯಲಿದೆ. ಈ ಅಚ್ಚರಿಯ ಟ್ವಿಸ್ಟ್‌ನಲ್ಲಿ ಬರೋಬ್ಬರಿ 7 ಸ್ಪರ್ಧಿಗಳು ಹೊರಹೋಗುವ ಸಾಧ್ಯತೆ ಇದೆ. ಇದರ ಬೆನ್ನಲ್ಲೇ 6 ಹೊಸ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಪ್ರವೇಶಿಸಲಿದ್ದಾರೆ. ಈ ದಿಢೀರ್ ಬದಲಾವಣೆ ಬಿಗ್ ಬಾಸ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಮೊದಲ ಫಿನಾಲೆಯಲ್ಲಿ ಹೊರ ಹೋಗೋದು ಎಷ್ಟು ಜನ?
Bigg Boss Sudeep
Updated By: ರಾಜೇಶ್ ದುಗ್ಗುಮನೆ

Updated on: Oct 15, 2025 | 8:06 AM

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (BBK 12) ಈವಾರವೇ ಒಂದು ಫಿನಾಲೆ ನಡೆಯಲಿದೆ. ಈ ಬಗ್ಗೆ ವಾಹಿನಿ ಕಡೆಯಿಂದ ಈ ಮೊದಲೇ ಅಧಿಕೃತ ಘೋಷಣೆ ಆಗಿತ್ತು. ಸಾಕಷ್ಟು ಟ್ವಿಸ್ಟ್ ಇಡಬೇಕು ಎನ್ನುವ ಕಾರಣಕ್ಕೆ ಈ ರೀತಿ ಮಾಡಲಾಗಿದೆ. ಹೀಗಿರುವಾಗಲೇ ಫಿನಾಲೆಯಲ್ಲಿ ಎಷ್ಟು ಮಂದಿ ಹೊರಕ್ಕೆ ಹೋಗುತ್ತಾರೆ ಎನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡಿದೆ. ಒಂದು ದೊಡ್ಡ ಟ್ವಿಸ್ಟ್ ಜೊತೆ ಫಿನಾಲೆ ನಡೆಯಲಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ದೊಡ್ಡ ಟ್ವಿಸ್ಟ್ ಎದುರಾಗುತ್ತಾ ಇದೆ. ಅಕ್ಟೋಬರ್ 18 ಮತ್ತು 19  ರಂದು ಕಲರ್ಸ್ ಕನ್ನಡದಲ್ಲಿ ರಾತ್ರಿ 8 ರಿಂದ 11 ಗಂಟೆಗಳವರೆಗೆ ಪ್ರಸಾರ ಕಾಣಲಿದೆ. ಈ ಸಂದರ್ಭದಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 7 ಮಂದಿ ಎಲಿಮಿನೇಟ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಾ ಇದೆ. ಇದು ಅನೇಕರಿಗೆ ಶಾಕಿಂಗ್ ಎನಿಸಿದೆ.

ಸದ್ಯ ಬಿಗ್ ಬಾಸ್ ಮನೆಯಲ್ಲಿ 17 ಮಂದಿ ಇದ್ದಾರೆ. ಅದರಲ್ಲಿ ಏಳು ಮಂದಿ ಎಲಿಮಿನೇಟ್ ಆದರೆ ಸ್ಪರ್ಧಿಗಳ ಸಂಖ್ಯೆ 10 ಮಂದಿಗೆ ಇಳಿಕೆ ಆಗಲಿದೆ. ಆ ಬಳಿಕ ಅಂದರೆ ಮುಂದಿನ ವಾರ ಆರು ಮಂದಿ ದೊಡ್ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಡಲಿದ್ದಾರಂತೆ. ಈ ವಿಚಾರ ಕೇಳಿ ಫ್ಯಾನ್ಸ್ ಕೂಡ ಖುಷಿ ಪಟ್ಟಿದ್ದಾರೆ. ಕೆಲವರಿಗೆ ಇದು ಬೇಸರ ಮೂಡಿಸಿದೆ.

ಇದನ್ನೂ ಓದಿ
ಗಿಲ್ಲಿ ಜೊತೆಗಿನ ಗೆಳೆತನಕ್ಕಾಗಿ ಫಿನಾಲೆ ಚಾನ್ಸ್ ತ್ಯಾಗ ಮಾಡಿದ ಚಂದ್ರಪ್ರಭ?
ಮಂಗಳವಾರವೂ ‘ಕಾಂತಾರ: ಚಾಪ್ಟರ್ 1’ ಅಧಿಕ ಕಲೆಕ್ಷನ್; 500 ಕೋಟಿ ಇನ್ನೂ ಸನಿಹ
ಸ್ಪರ್ಧಿಗಳಿಗೆ ಕೊನೆಯ ಅವಕಾಶ ಕೊಟ್ಟ ‘ಬಿಗ್ ಬಾಸ್​’; ಮಾಡು ಇಲ್ಲವೇ ಮಡಿ
‘ಕಾಂತಾರ: ಚಾಪ್ಟರ್ 2’ ಯಾವಾಗ? ಕೊನೆಗೂ ಉತ್ತರಿಸಿದ ರಿಷಬ್ ಶೆಟ್ಟಿ

ಇದನ್ನೂ ಓದಿ: ಧ್ರುವಂತ್ ಆಟಕ್ಕೆ ಬ್ರೇಕ್ ಹಾಕಿದ ಸ್ಪಂದನಾ: ಬಿಗ್ ಬಾಸ್ ಮನೆಯಲ್ಲಿ ದ್ವೇಷದ ಕಿಚ್ಚು

ಇದೇ ಮೊದಲು

‘ಬಿಗ್ ಬಾಸ್ ಕನ್ನಡ’ ಇತಿಹಾಸದಲ್ಲಿ ಈ ರೀತಿ ಫಿನಾಲೆ ನಡೆಸುತ್ತಿರುವುದು ಇದೇ ಮೊದಲು ಎಂದರೂ ತಪ್ಪಾಗಲಿಕ್ಕಿಲ್ಲ. ಈ ಮೊದಲು 99 ದಿನಗಳ ಬಳಿಕವೇ ಫಿನಾಲೆ ನಡೆದಿತ್ತು. ಆದರೆ, ಇದೇ ಮೊದಲ ಬಾರಿಗೆ ಮೂರನೇ ವಾರಕ್ಕೆ ಫಿನಾಲೆ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ಮಿಶ್ರ ಪ್ರತಿಕ್ರಿಯೆ ಇದೆ. ಈ ವೇಳೆಯೂ ಓರ್ವ ವಿಜೇತನ ಘೋಷಿಸೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಾ ಇದೆ. ಈ ಮೊದಲು ಹಿಂದಿಯಲ್ಲೂ ಈ ರೀತಿಯ ಪ್ರಯೋಗಗಳು ನಡೆದ ಉದಾಹರಣೆ ಇಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.