AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧ್ರುವಂತ್ ಆಟಕ್ಕೆ ಬ್ರೇಕ್ ಹಾಕಿದ ಸ್ಪಂದನಾ: ಬಿಗ್ ಬಾಸ್ ಮನೆಯಲ್ಲಿ ದ್ವೇಷದ ಕಿಚ್ಚು

ಮಿಡ್ ಸೀಸನ್ ಫಿನಾಲೆಯಲ್ಲಿ ಯಾರು ಔಟ್ ಆಗುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಧ್ರುವಂತ್ ಅವರು ಈ ವಾರ ಯಾವುದೇ ಟಾಸ್ಕ್ ಆಡುವಂತಿಲ್ಲ ಎಂದು ಸ್ಪಂದನಾ ಅವರು ಹೇಳಿದ್ದಾರೆ. ಇದಕ್ಕೆಲ್ಲ ಕಾರಣ ಆಗಿದ್ದು ಅವರಿಬ್ಬರ ನಡುವೆ ನಡೆದ ಜಗಳ. ಆ ಕುರಿತು ಇಲ್ಲಿದೆ ಪೂರ್ತಿ ಮಾಹಿತಿ..

ಧ್ರುವಂತ್ ಆಟಕ್ಕೆ ಬ್ರೇಕ್ ಹಾಕಿದ ಸ್ಪಂದನಾ: ಬಿಗ್ ಬಾಸ್ ಮನೆಯಲ್ಲಿ ದ್ವೇಷದ ಕಿಚ್ಚು
Spandana Somanna, Dhruvanth
ಮದನ್​ ಕುಮಾರ್​
|

Updated on: Oct 14, 2025 | 10:27 PM

Share

ಬಿಗ್ ಬಾಸ್ ಮನೆಯಲ್ಲಿ ಜಗಳಗಳು ಸಹಜ. ಸೋಲು, ಗೆಲುವಿನ ಮೇಲೆ ಜಗಳಗಳು ಪರಿಣಾಮ ಬೀರುತ್ತವೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ರಿಯಾಲಿಟಿ ಶೋನಲ್ಲೂ ಹಾಗೆಯೇ ಆಗುತ್ತಿದೆ. ಇತ್ತೀಚೆಗೆ ಸ್ಪಂದನಾ ಮತ್ತು ಧ್ರುವಂತ್ (Dhruvanth) ನಡುವೆ ಜಗಳ ನಡೆಯಿತು. ಯಾರು ಸಿಂಪಥಿ ಮೇಲೆ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದಾರೆ ಎಂಬ ವಿಚಾರದಲ್ಲಿ ಅವರಿಬ್ಬರು ಜಗಳ ಮಾಡಿಕೊಂಡಿದ್ದರು. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಅದು ದ್ವೇಷಕ್ಕೆ ತಿರುಗಿದೆ. ಧ್ರುವಂತ್ ಮತ್ತು ಸ್ಪಂದನಾ (Spandana Somanna) ಅವರು ಒಬ್ಬರನ್ನು ಕಂಡರೆ ಒಬ್ಬರು ಉರಿದು ಬೀಳುತ್ತಿದ್ದಾರೆ.

ಕಳೆದ ಸಂಚಿಕೆಯಲ್ಲಿ ಸ್ಪಂದನಾ ಮೇಲೆ ಧ್ರುವಂತ್ ರೇಗಾಡಿದ್ದರು. ಅದರಿಂದ ಕೋಪಗೊಂಡ ಸ್ಪಂದನಾ ಅವರು ಕೂಡ ಏರು ಧ್ವನಿಯಲ್ಲಿ ಜಗಳ ಮಾಡಿದ್ದರು. ಅನಿರೀಕ್ಷಿತವಾಗಿ ಸ್ಪಂದನಾ ಅವರು ಮಿಡ್ ಸೀಸನ್ ಫಿನಾಲೆಗೆ ಫೈನಲಿಸ್ಟ್ ಆಗಿದ್ದಾರೆ. ಅಕ್ಟೋಬರ್ 14ರ ಸಂಚಿಕೆಯಲ್ಲಿ ಸ್ಫಂದನಾಗೆ ಒಂದು ವಿಶೇಷ ಅಧಿಕಾರ ಸಿಕ್ಕಿತ್ತು. ಧ್ರುವಂತ್ ವಿರುದ್ಧವಾಗಿ ಸ್ಪಂದನಾ ಅವರು ತಮ್ಮ ಅಧಿಕಾರ ಚಲಾಯಿಸಿದರು.

ಫೈನಲಿಸ್ಟ್​ಗಳನ್ನು ಹೊರತುಪಡಿಸಿ ಇನ್ನುಳಿದವರು ಡೇಂಜರ್ ಝೋನ್​​ನಲ್ಲಿ ಇದ್ದಾರೆ. ಆದರೂ ಕೂಡ ಬಿಗ್ ಬಾಸ್ ಒಂದು ಅವಕಾಶ ನೀಡಿದರು. ಈ ವಾರ ಸರಣಿ ಟಾಸ್ಕ್ ನೀಡಲಾಗುತ್ತಿದೆ. ಆ ಟಾಸ್ಕ್​ ಗೆಲ್ಲುವವರಿಗೆ ನಾಮಿನೇಷನ್​ನಿಂದ ಪಾರಾಗುವ ಅವಕಾಶ ಸಿಗಲಿದೆ. ಆದರೆ ಇಬ್ಬರನ್ನು ಈ ಟಾಸ್ಕ್​​ಗಳಿಂದ ಹೊರಗೆ ಇಡುವ ಅಧಿಕಾರವನ್ನು ಮಾಳು ನಿಪನಾಳ ಮತ್ತು ಸ್ಪಂದನಾ ಅವರಿಗೆ ನೀಡಲಾಯಿತು.

ಮಾಳು ನಿಪನಾಳ ಅವರು ಡಾಗ್ ಸತೀಶ್ ಅವರನ್ನು ಹೊರಗಿಟ್ಟರು. ಸ್ಪಂದನಾ ಅವರು ಧ್ರುವಂತ್ ಅವರನ್ನು ಎಲ್ಲ ಟಾಸ್ಕ್​​ಗಳಿಂದ ಹೊರಗೆ ಇಟ್ಟರು. ಇದರಿಂದಾಗಿ ಸತೀಶ್ ಮತ್ತು ಧ್ರುವಂತ್ ಅವರು ವಾರ ಪೂರ್ತಿ ಯಾವುದೇ ಆಟದಲ್ಲಿ ಭಾಗವಹಿಸುವಂತಿಲ್ಲ. ಈ ನಿರ್ಧಾರದಿಂದ ಸತೀಶ್ ಅವರಿಗೆ ಖುಷಿ ಆಯಿತು. ಯಾಕೆಂದರೆ, ‘ಸೋಲುವುದಕ್ಕಿಂತ ಸುಮ್ಮನೆ ಇರುವುದು ಒಳ್ಳೆಯದು’ ಎಂದು ಅವರು ಹೇಳಿದರು.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಅಸಲಿ ಮುಖ ತೋರಿಸಿದ ಕಾವ್ಯ ಶೈವ: ಶಾಕ್ ಆದ ಅಶ್ವಿನಿ

​​ಈ ಮೊದಲು ಧ್ರುವಂತ್ ಅವರು ತಮ್ಮ ಅವಕಾಶಗಳನ್ನು ಬೇರೆಯವರಿಗೆ ಬಿಟ್ಟುಕೊಟ್ಟಿದ್ದರು. ಅದರಿಂದ ಅವರಿಗೆ ಹಿನ್ನಡೆ ಆಯಿತು. ಈ ಬಗ್ಗೆ ಸುದೀಪ್ ಕೂಡ ಧ್ರುವಂತ್ ಅವರಿಗೆ ಎಚ್ಚರಿಕೆ ನೀಡಿದ್ದರು. ಆ ಬಳಿಕ ಬಿಗ್ ಬಾಸ್ ಮನೆಯಲ್ಲಿ ಧ್ರುವಂತ್ ಆಟ ಚುರುಕಾಯಿತು. ಆದರೆ ಮಾತಿನ ಭರಾಟೆ ಜಾಸ್ತಿ ಆಯಿತು. ಸ್ಪಂದನಾ ಜೊತೆ ಜಗಳ ಮಾಡಿಕೊಂಡಿದ್ದೇ ಧ್ರುವಂತ್ ಅವರಿಗೆ ತೊಂದರೆ ಆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ