AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ ಬಗ್ಗೆ ಭಯವಿಲ್ಲ ಎಂದಿದ್ದ ಹೀರೋ ಈಗ ಹೆಜ್ಜೆ ಹಿಂದಿಟ್ಟಿದ್ದೇಕೆ?

Toxic movie release: ಯಶ್ ನಟನೆಯ ‘ಟಾಕ್ಸಿಕ್’ ಮತ್ತು ರಣ್ವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗುತ್ತಿವೆ. ಅದೇ ದಿನ ತಮ್ಮ ಸಿನಿಮಾ ‘ಡಕೈತ್’ ಅನ್ನು ಬಿಡುಗಡೆ ಮಾಡುವುದಾಗಿ ನಟ ಅಡವಿ ಶೇಷ್ ಹೇಳಿದ್ದರು. ಆದರೆ ಇದೀಗ ಅವರು ಹೆಜ್ಜೆ ಹಿಂದಿಟ್ಟಿದ್ದಾರೆ. ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಿಕೊಂಡಿದ್ದಾರೆ.

‘ಟಾಕ್ಸಿಕ್’ ಬಗ್ಗೆ ಭಯವಿಲ್ಲ ಎಂದಿದ್ದ ಹೀರೋ ಈಗ ಹೆಜ್ಜೆ ಹಿಂದಿಟ್ಟಿದ್ದೇಕೆ?
Toxic Movie
ಮಂಜುನಾಥ ಸಿ.
|

Updated on:Feb 04, 2026 | 5:52 PM

Share

ಮಾರ್ಚ್ ತಿಂಗಳಲ್ಲಿ ಕೆಲವು ಬಲು ದೊಡ್ಡ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಅದರಲ್ಲೂ ಯಶ್ ನಟನೆಯ ‘ಟಾಕ್ಸಿಕ್’ (Toxic) ಮತ್ತು ರಣ್ವೀರ್ ಸಿಂಗ್ ನಟನೆಯ ‘ಧುರಂಧರ್ 2’ ಎರಡೂ ಮಾರ್ಚ್ 19ರಂದು ಒಂದೇ ದಿನ ಬಿಡುಗಡೆ ಆಗಲಿದ್ದು ಬೇರೆ ಸಿನಿಮಾಗಳೆಲ್ಲ ದೊಡ್ಡ ಸಿನಿಮಾಗಳಿಗೆ ದಾರಿ ಮಾಡಿ ಕೊಡುತ್ತಿವೆ. ಆದರೆ ಅದೇ ದಿನ ಅಂದರೆ ಮಾರ್ಚ್ 19ರಂದೇ ತೆಲುಗಿನ ನಟ ಅಡವಿ ಶೇಷ್ ನಟನೆಯ ‘ಡಕಾಯಿತ್’ ಸಿನಿಮಾ ಬಿಡುಗಡೆಗೆ ಅಣಿಯಾಗಿತ್ತು. ಆದರೆ ಇದೀಗ ಸಿನಿಮಾದ ಬಿಡುಗಡೆಯನ್ನು ಅಚಾನಕ್ಕಾಗಿ ಮುಂದೂಡಲಾಗಿದೆ.

ಮಾರ್ಚ್ 19ರಂದು ಸಿನಿಮಾ ಬಿಡುಗಡೆ ಘೋಷಿಸಿದಾಗ ನಾಯಕ ಅಡವಿ ಶೇಷ್ ಅವರನ್ನು ಅವರ ನಿರ್ಣಯದ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ‘ಟಾಕ್ಸಿಕ್’ ಅಂಥಹಾ ದೊಡ್ಡ ಸಿನಿಮಾ ಬಿಡುಗಡೆ ಆಗುವ ದಿನದಂದೇ ಏಕೆ ನೀವು ಬಿಡುಗಡೆ ಮಾಡುತ್ತಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಅಡವಿ ಶೇಷ್, ‘ನಮಗೆ ‘ಟಾಕ್ಸಿಕ್’ ಬಗ್ಗೆ ಭಯ ಇಲ್ಲ. ನಾನು ಅಂಡರ್​ಡಾಗ್ ಆಗಿಯೇ ಗೆದ್ದುಕೊಂಡು ಬಂದವನು. ಜನರಿಗೆ ಸರ್ಪ್ರೈಸ್ ನೀಡುತ್ತಲೇ ಬಂದಿದ್ದೇನೆ. ಅಲ್ಲದೆ, 2018ರ ನೆನಪು ನನಗೆ ಚೆನ್ನಾಗಿ ಇದೆ, ‘ಕೆಜಿಎಫ್ ಚಾಪ್ಟರ್ 1’ ಸಿನಿಮಾ ಶಾರುಖ್ ಖಾನ್ ನಟನೆಯ ‘ಜೀರೊ’ ಸಿನಿಮಾದ ಎದುರು ಬಿಡುಗಡೆ ಆಗಿತ್ತು, ಸಿನಿಮಾ ವ್ಯಾಕರಣವನ್ನೇ ಬದಲಾಯಿಸಿತು’ ಎಂದಿದ್ದಾರೆ. ಆ ಮೂಲಕ ತಾವು ‘ಟಾಕ್ಸಿಕ್’ ಎದುರು ಬಿಡುಗಡೆ ಮಾಡಿ ಸಿನಿಮಾ ಗೆಲ್ಲಿಸುತ್ತೇವೆ ಎಂದಿದ್ದರು.

ಇದನ್ನೂ ಓದಿ:‘ಧುರಂಧರ್ 2’ ಚಿತ್ರವನ್ನು‘ಟಾಕ್ಸಿಕ್’ ಕಬಳಿಸಿಯಾಗಿದೆ; ಹಿಂದಿ ಮಂದಿಯ ಅಭಿಪ್ರಾಯ

ಆದರೆ ಈಗ ನಿಜ ಪರಿಸ್ಥಿತಿಯ ಅರಿವಾದಂತಿದ್ದು, ಸಿನಿಮಾದ ಬಿಡುಗಡೆಯನ್ನು ಮುಂದೂಡಿದ್ದಾರೆ. ಅಡವಿ ಶೇಷ್, ಮೃಣಾಲ್ ಠಾಕೂರ್, ಅನುರಾಗ್ ಕಶ್ಯಪ್, ಪ್ರಕಾಶ್ ರೈ ನಟಿಸಿರುವ ‘ಡಕೈತ್’ ಸಿನಿಮಾ ಏಪ್ರಿಲ್ 10ಕ್ಕೆ ಬಿಡುಗಡೆ ಆಗಲಿದೆ. ಮಾರ್ಚ್ 19ಕ್ಕೆ ‘ಟಾಕ್ಸಿಕ್’ ಮತ್ತು ‘ಧುರಂಧರ್ 2’ ಸಿನಿಮಾ ಬಿಡುಗಡೆ ಆಗುತ್ತಿವೆ. ಅದರ ಐದು ದಿನಗಳ ಬಳಿಕ ಅಂದರೆ ಮಾರ್ಚ್ 26 ರಂದು ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಬಿಡುಗಡೆ ಆಗಲಿದೆ.

‘ಡಕೈತ್’ ಸಿನಿಮಾ ಭಿನ್ನ ಪ್ರೇಮಕತೆಯುಳ್ಳ ಆಕ್ಷನ್ ಸಿನಿಮಾ ಆಗಿದ್ದು, ಈಗಾಗಲೇ ಬಿಡುಗಡೆ ಆಗಿರುವ ಸಿನಿಮಾದ ಟೀಸರ್ ಸಖತ್ ಗಮನ ಸೆಳೆದಿದೆ. ಸಿನಿಮಾವನ್ನು ಶನೀಲ್ ದಿಯೊ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಬಗ್ಗೆ ನಟ ಅಡವಿ ಶೇಷ್ ಭಾರಿ ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ. ‘ಟಾಕ್ಸಿಕ್’ ಮತ್ತು ‘ಧುರಂಧರ್ 2’ ಸಿನಿಮಾದ ವಿರುದ್ಧ ಹೋಗದಂತೆ ಅಭಿಮಾನಿಗಳು ಎಚ್ಚರಿಕೆ ನೀಡಿದ್ದರು. ಕೊನೆಗೂ ಈಗ ಅಡವಿ ಶೇಷ್ ಸೂಕ್ತ ನಿರ್ಣಯವನ್ನೇ ತೆಗೆದುಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:52 pm, Wed, 4 February 26

ತಮ್ಮ‌ ರಕ್ಷಣೆಗೆ ಬೋಟ್ ಆಂಬ್ಯುಲೆನ್ಸ್ ನಿರ್ಮಾಣ, ಮೀನುಗಾರರ ಮಾದರಿ ಹೆಜ್ಜೆ
ತಮ್ಮ‌ ರಕ್ಷಣೆಗೆ ಬೋಟ್ ಆಂಬ್ಯುಲೆನ್ಸ್ ನಿರ್ಮಾಣ, ಮೀನುಗಾರರ ಮಾದರಿ ಹೆಜ್ಜೆ
ಸಿಖ್ಖರನ್ನು ಕೊಂದ ಕುಟುಂಬದ ಕುಡಿಯೊಂದಿಗೆ ಕೈಕುಲುಕುವುದಿಲ್ಲ;ರವನೀತ್ ಬಿಟ್ಟು
ಸಿಖ್ಖರನ್ನು ಕೊಂದ ಕುಟುಂಬದ ಕುಡಿಯೊಂದಿಗೆ ಕೈಕುಲುಕುವುದಿಲ್ಲ;ರವನೀತ್ ಬಿಟ್ಟು
ಮನಸೋ ಇಚ್ಛೆ ಲೈಸೆನ್ಸ್: ಅಬಕಾರಿ ಇಲಾಖೆಯ ಮತ್ತಷ್ಟು ಕಳ್ಳಾಟ ಬಯಲು
ಮನಸೋ ಇಚ್ಛೆ ಲೈಸೆನ್ಸ್: ಅಬಕಾರಿ ಇಲಾಖೆಯ ಮತ್ತಷ್ಟು ಕಳ್ಳಾಟ ಬಯಲು
ಬೆಳಗಾವಿ: ಸಿಗರೇಟ್ ಹಣ ಕೇಳಿದ್ದಕ್ಕೆ ಬಿತ್ತು ಪಾನ್ ಶಾಪ್ ಮಾಲೀಕನ ಹೆಣ
ಬೆಳಗಾವಿ: ಸಿಗರೇಟ್ ಹಣ ಕೇಳಿದ್ದಕ್ಕೆ ಬಿತ್ತು ಪಾನ್ ಶಾಪ್ ಮಾಲೀಕನ ಹೆಣ
ಲವ್​​ ಹೆಸರಲ್ಲಿ ಮೋಸ ಮಾಡಿದವನ ಕಾಮುಕತೆ ಬಿಚ್ಚಿಟ್ಟ ಸಂತ್ರಸ್ತೆ
ಲವ್​​ ಹೆಸರಲ್ಲಿ ಮೋಸ ಮಾಡಿದವನ ಕಾಮುಕತೆ ಬಿಚ್ಚಿಟ್ಟ ಸಂತ್ರಸ್ತೆ
ಬಿಎಂಟಿಸಿ ಬಸ್ ಬಳಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲೂ UPI ಸ್ಕ್ಯಾನರ್ ಸ್ಕ್ಯಾಮ್
ಬಿಎಂಟಿಸಿ ಬಸ್ ಬಳಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲೂ UPI ಸ್ಕ್ಯಾನರ್ ಸ್ಕ್ಯಾಮ್
ಲಕ್ಕುಂಡಿಯ ಜೈನ ಬಸದಿಗಳಲ್ಲೂ ನಿಧಿ ಇದ್ಯಾ? ಸರ್ಪಗಳು ಕಾವಲು ಕಾಯ್ತಿದ್ಯಾ?
ಲಕ್ಕುಂಡಿಯ ಜೈನ ಬಸದಿಗಳಲ್ಲೂ ನಿಧಿ ಇದ್ಯಾ? ಸರ್ಪಗಳು ಕಾವಲು ಕಾಯ್ತಿದ್ಯಾ?
ಸದನದಲ್ಲಿ ವೈಯಕ್ತಿಕವಾಗಿ ಬೈದಾಡಿಕೊಂಡ ಶಾಸಕ ಶರಣು ಸಲಗಾರ್- ಶಿವಲಿಂಗೇಗೌಡ
ಸದನದಲ್ಲಿ ವೈಯಕ್ತಿಕವಾಗಿ ಬೈದಾಡಿಕೊಂಡ ಶಾಸಕ ಶರಣು ಸಲಗಾರ್- ಶಿವಲಿಂಗೇಗೌಡ
Video: ಬಾಲಕಿಯನ್ನು ಗೂಳಿಯ ದಾಳಿಯಿಂದ ಕಾಪಾಡಿದ ಜನ
Video: ಬಾಲಕಿಯನ್ನು ಗೂಳಿಯ ದಾಳಿಯಿಂದ ಕಾಪಾಡಿದ ಜನ
ಅಮೆರಿಕದ ವ್ಯಾಪಾರ ಒಪ್ಪಂದವು ಕೃಷಿ ವಲಯವನ್ನು ರಕ್ಷಿಸುತ್ತೆ: ಪಿಯೂಷ್ ಗೋಯಲ್
ಅಮೆರಿಕದ ವ್ಯಾಪಾರ ಒಪ್ಪಂದವು ಕೃಷಿ ವಲಯವನ್ನು ರಕ್ಷಿಸುತ್ತೆ: ಪಿಯೂಷ್ ಗೋಯಲ್