ನಂಬಿಸಿ ಕತ್ತು ಕೊಯ್ಯಬೇಕು, ಬೆನ್ನಿಗೆ ಚೂರಿ ಹಾಕ್ಬೇಕು: ಗಗನ್ ಸಂಚು

ಬಿಗ್​​ಬಾಸ್ ಕನ್ನಡ ಸೀಸನ್ 13ರಲ್ಲಿ ಸೀಸನ್​​ನಲ್ಲಿ ಕೆಲವರಂತೂ ಗೆಳೆತನವನ್ನು ಗೇಮ್​​ಗೆ ಬಳಸಿಕೊಂಡು ಆಡುತ್ತಿದ್ದಾರೆ. ಈ ವಾರ ಕೆಲವು ಒಳ್ಳೆಯ ಟಾಸ್ಕ್​​ಗಳನ್ನು ಆಡಿಸಲಾಯ್ತು. ಅದರಲ್ಲೂ ನಂಬಿಕೆ, ದ್ರೋಹ, ಚಾಣಾಕ್ಷತನಗಳು ಬಳಸಿ ಆಡಬೇಕಾದ ಟಾಸ್ಕುಗಳು ಇವಾಗಿದ್ದವು. ಶುಕ್ರವಾರ ಪ್ರಸಾರವಾದ ಎಪಿಸೋಡಿನಲ್ಲಿ ಗಾನವಿ ತನ್ನ ಆಪ್ತರು ಎನಿಸಿಕೊಂಡವರಿಗೆ ಸರಿಯಾಗಿ ಕೈ ಕೊಟ್ಟರು.

ನಂಬಿಸಿ ಕತ್ತು ಕೊಯ್ಯಬೇಕು, ಬೆನ್ನಿಗೆ ಚೂರಿ ಹಾಕ್ಬೇಕು: ಗಗನ್ ಸಂಚು
Bigg Boss Gagan

Updated on: Nov 26, 2026 | 11:31 PM

ಮುಖ್ಯಾಂಶಗಳು

  • ಬಿಗ್​​ಬಾಸ್ ಕನ್ನಡ ಸೀಸನ್ 13
  • ಗಾನವಿಗೆ ಬುದ್ಧಿಕಲಿಸಲು ಮುಂದಾದ ಗಗನ್
  • ಗಗನ್ ಹೆಣೆದಿದ್ದಾರೆ ಮಾಸ್ಟರ್ ಪ್ಲ್ಯಾನ್

ಬಿಗ್​​ಬಾಸ್ ಮನೆಯಲ್ಲಿ ಗೆಳೆತನ, ಆತ್ಮೀಯತೆ ಎಂಬುದೆಲ್ಲ ಹೆಸರಿಗಷ್ಟೆ. ಈ ಬಾರಿಯೂ ಸಹ ಅಷ್ಟೆ. ಈ ಸೀಸನ್​​ನಲ್ಲಿ ಕೆಲವರಂತೂ ಗೆಳೆತನವನ್ನು ಗೇಮ್​​ಗೆ ಬಳಸಿಕೊಂಡು ಆಡುತ್ತಿದ್ದಾರೆ. ಈ ವಾರ ಕೆಲವು ಒಳ್ಳೆಯ ಟಾಸ್ಕ್​​ಗಳನ್ನು ಆಡಿಸಲಾಯ್ತು. ಅದರಲ್ಲೂ ನಂಬಿಕೆ, ದ್ರೋಹ, ಚಾಣಾಕ್ಷತನಗಳು ಬಳಸಿ ಆಡಬೇಕಾದ ಟಾಸ್ಕುಗಳು ಇವಾಗಿದ್ದವು. ಶುಕ್ರವಾರ ಪ್ರಸಾರವಾದ ಎಪಿಸೋಡಿನಲ್ಲಿ ಗಾನವಿ ತನ್ನ ಆಪ್ತರು ಎನಿಸಿಕೊಂಡವರಿಗೆ ಸರಿಯಾಗಿ ಕೈ ಕೊಟ್ಟರು.

ಗಾನವಿ ಹಾಗೂ ಧನುಶ್​ ಮನೆಯಲ್ಲಿ ಆಪ್ತರು. ಗಾನವಿ, ಗಗನ್, ತಾಂಡವ್ ಜೊತೆಗೂ ಆತ್ಮೀಯವಾಗಿದ್ದಾರೆ. ಆದರೆ ಶುಕ್ರವಾರ ಕೊಟ್ಟ ಟಾಸ್ಕಿನಲ್ಲಿ, ಗಾನವಿ ಗಗನ್, ಧನುಶ್​​ಗೆ ಕೈಕೊಟ್ಟರು. ಮನೆಯ ಸದಸ್ಯರಲ್ಲಿ ಒಬ್ಬರನ್ನು ಸಿಂಹವಾಗಿ ಆಯ್ಕೆ ಮಾಡಬೇಕಿತ್ತು. ಪ್ರತಿಯೊಬ್ಬರು ಕಿರೀಟವನ್ನು ತೆಗೆದುಕೊಂಡು, ಮನೆಯಲ್ಲಿ ಸಿಂಹ ಯಾರಾಗಬೇಕು ಎಂದು ತಮಗೆ ಅನಿಸುತ್ತದೆಯೋ ಅವರಿಗೆ ಕೊಡಬೇಕು. 13ನೇ ಬಾರಿ ಯಾರ ತಲೆಯಲ್ಲಿ ಕಿರೀಟ ಇರುತ್ತದೆಯೋ ಅವರು ಸಿಂಹ ಆಗಿ ಆಯ್ಕೆ ಆಗುತ್ತಾರೆ ಎಂಬುದು ನಿಯಮ.

Loading...

ತಾಂಡವ್ ಮೊದಲೇ ತಲೆ ಓಡಿಸಿ, ನಾವೆಲ್ಲ ಒಂದೇ ಗುಂಪಿನವರು ಕಿರೀಟ ನಮ್ಮಲ್ಲೇ ಉಳಿಯುವಂತೆ ಮಾಡಿಕೊಳ್ಳೋಣ ಎಂದರು. ಮೊದಲಲ್ಲಿ ಅದು ಹಾಗೆಯೇ ನಡೆಯಿತು. ಆದರೆ ಧನುಶ್, ಗಾನವಿಗೆ ಕಿರೀಟ ಕೊಟ್ಟರು. ಆದರೆ ಗಾನವಿ ಅದನ್ನು ವಾಪಸ್ ಕೊಡಲಿಲ್ಲ. ಧನುಶ್ ಗಾನವಿಗೆ ಕಿರೀಟ ಕೊಟ್ಟ ಬಳಿಕ ಕಿರೀಟ ಮತ್ತೆ ತಾಂಡವ್, ಧನುಶ್, ಗಗನ್ ಅವರ ಬಳಿಗೆ ಬರಲೇ ಇಲ್ಲ. ಕೊನೆಗೆ ಅದು ಹೋಗಿ ಕುಳಿತಿದ್ದು ಗುಳ್ಳೆನರಿ ಆಗಿದ್ದ ಯಶಸ್​ ತಲೆಯ ಮೇಲೆ.

ಇದನ್ನೂ ಓದಿ:ಬಿಗ್​​ಬಾಸ್ ಮನೆಗೆ ಎಂಟ್ರಿ ಕೊಟ್ಟ ‘ಪವಿತ್ರ ಬಂಧನ’ದ ದೇವ್

ಆದರೆ ಗಾನವಿಯ ಈ ಮೋಸದಿಂದ ತೀವ್ರ ಬೇಸರಗೊಂಡ ಗಗನ್, ಗಾನವಿಗೆ ಸರಿಯಾಗಿ ಬುದ್ಧಿ ಕಲಿಸಬೇಕು. ಅದು ಹೇಗಿರಬೇಕೆಂದರೆ ಗಾನವಿಗೆ ನಂಬಿಕೆ ದ್ರೋಹ ಎಂದರೆ ಏನು ಎಂದು ಅರ್ಥ ಆಗಬೇಕು. ಗಾನವಿಗೆ ಈಗಲೂ ನಾವು ಗೆಳೆಯರಾಗಿಯೇ ಇರೋಣ, ಆದರೆ ಮುಖ್ಯವಾದ ಸಮಯದಲ್ಲಿ ಕೈಕೊಡೋಣ. ಹೇಗಿರಬೇಕು ಎಂದರೆ ನಂಬಿಸಿ ಕತ್ತು ಕೊಯ್ದ ಹಾಗೆ ಇರಬೇಕು, ಬೆನ್ನಿಗೆ ಚೂರಿ ಹಾಕಿದ ಹಾಗೆ ಇರಬೇಕು. ಗಾನವಿಗೆ ಶಾಕ್ ಆಗಬೇಕು, ಅದರಲ್ಲಿರುವ ಮಜಾ ಇನ್ಯಾವುದರಲ್ಲೂ ಇಲ್ಲ’ ಎಂದು ಗಗನ್, ತಾಂಡವ್ ಮತ್ತು ಪ್ರಶಾಂತ್ ಬಳಿ ಹೇಳಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us