ಸುದೀಪ್ ಮಾತಿನಿಂದ ಬದಲಾದ ಕಿರಣ್; ಎಲ್ಲರ ಮನಸ್ಸು ಗೆದ್ದ ಶಾಸ್ತ್ರಿ

ಬಿಗ್ ಬಾಸ್ ಕನ್ನಡ 13ರ ವೀಕೆಂಡ್ ಪಂಚಾಯಿತಿಯಲ್ಲಿ ಸುದೀಪ್ ಕ್ಲಾಸ್ ತಗೆದುಕೊಂಡ ನಂತರ ಕಿರಣ್ ಸಂಪೂರ್ಣ ಬದಲಾಗಿದ್ದಾರೆ. ಈ ಮೂಲಕ ಅವರು ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಆದರೆ ಟಾಸ್ಕ್‌ನಿಂದ ಹೊರಗುಳಿದಿದ್ದಕ್ಕೆ ಕೋಪಗೊಂಡ ಮಂಜು, ಸಹ ಸ್ಪರ್ಧಿಗಳನ್ನು ಮತ್ತೆ ಬಾಡಿ ಶೇಮಿಂಗ್ ಮಾಡುವ ಮೂಲಕ ತೀವ್ರ ಆಕ್ರೋಶ ಹಾಗೂ ಅನೇಕರ ಬೇಸರಕ್ಕೆ ಕಾರಣವಾಗಿದ್ದಾರೆ.

ಸುದೀಪ್ ಮಾತಿನಿಂದ ಬದಲಾದ ಕಿರಣ್; ಎಲ್ಲರ ಮನಸ್ಸು ಗೆದ್ದ ಶಾಸ್ತ್ರಿ
ಕಿರಣ್ ಶಾಸ್ತ್ರಿ

Updated on: Sep 22, 2026 | 7:00 AM

ಮುಖ್ಯಾಂಶಗಳು

  • ಸಂಪೂರ್ಣವಾಗಿ ಬದಲಾಗಿ ಎಲ್ಲರ ಮನಸ್ಸು ಗೆದ್ದ ಕಿರಣ್ ಶಾಸ್ತ್ರಿ
  • ಕೋಪದಲ್ಲಿ ಮತ್ತೆ ಬಾಯಿಗೆ ಬಂದಂತೆ ಆಡಿದ ಮಂಜು
  • ಟಾಸ್ಕ್‌ನಿಂದ ಮಂಜು ಔಟ್, ಜೋರಾಯ್ತು ಬಿಗ್ ಬಾಸ್ ಸ್ಪರ್ಧೆ

‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಎರಡನೇ ವಾರದ ವೀಕೆಂಡ್ ವೇಳೆ ಕಿಚ್ಚ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡಿದ್ದರು. ಅಗ್ನಿ ಪರೀಕ್ಷೆ ಸ್ಪರ್ಧಿಗಳು, ಅದರಲ್ಲೂ ಕಿರಣ್ ಹಾಗೂ ಮಂಜುಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳಲಾಗಿತ್ತು.ಸುದೀಪ್ ಮಾತಿನಿಂದ ಕಿರಣ್ ಸಂಪೂರ್ಣವಾಗಿ ಬದಲಾಗಿದ್ದಾರೆ. ಅವರ ಬದಲಾವಣೆ ಮನೆಯವರಿಗೆ ಖುಷಿ ಕೊಟ್ಟಿದ್ದು ಚಪ್ಪಾಳೆ ಸಿಕ್ಕಿದೆ.

ಈ ವಾರ ಎಲ್ಲರನ್ನೂ ನಾಮಿನೇಟ್ ಮಾಡಿ ಸುದೀಪ್ ಆದೇಶ ಹೊರಡಿಸಿದ್ದಾರೆ. ಮಧ್ಯ ವಾರದ ಎಲಿಮಿನೇಷನ್ ನಡೆಯಲಿದೆ ಎಂದು ಈಗಾಗಲೇ ಸುದೀಪ್ ಘೋಷಣೆ ಮಾಡಿದ್ದಾರೆ. ಹೀಗಾಗಿ, ಸ್ಪರ್ಧೆ ಜೋರಾಗಿದೆ. ಇದರ ಭಾಗವಾಗಿ ಈ ವಾರದ ಟಾಸ್ಕ್​ಗಳಿಂದ ಒಬ್ಬರನ್ನು ಹೊರಕ್ಕೆ ಇಡುವಂತೆ ಬಿಗ್ ಬಾಸ್ ಸೂಚಿಸಿದರು. ಆಗ ಎಲ್ಲರೂ ಮಂಜು ಹಾಗೂ ಕಿರಣ್ ಹೆಸರನ್ನು ತೆಗೆದುಕೊಂಡರು.

ಮಂಜು ಅವರ ಹೆಸರನ್ನು ಬಹುತೇಕರು ಆಯ್ಕೆ ಮಾಡಿಕೊಂಡರು. ಇದಕ್ಕೆ ಸಿಟ್ಟಾದ ಮಂಜು, ಮತ್ತೆ ಎಲ್ಲರನ್ನೂ ಬಾಡಿ ಶೇಮಿಂಗ್ ಮಾಡಿದ್ದಾರೆ. ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಇದು ಅನೇಕರ ಬೇಸರಕ್ಕೆ ಕಾರಣ ಆಗಿದೆ. ‘ಮಂಜು ಬದಲಾಗುವವರೇ ಅಲ್ಲ’ ಎಂಬ ಮಾತನ್ನು ಆಡಿದ್ದಾರೆ.

ಇನ್ನು, ಕಿರಣ್ ಅವರ ಹೆಸರನ್ನು ತೆಗೆದುಕೊಂಡಾಗ ಅವರು ನಡೆದುಕೊಂಡ ರೀತಿ ಅನೇಕರಿಗೆ ಅಚ್ಚರಿ ತರಿಸಿದೆ. ಹೌದು, ಕಿರಣ್ ಶಾಸ್ತ್ರಿ ಅವರು ಈ ವಾರ ಭಿನ್ನವಾಗಿ ಕಾಣಿಸಿಕೊಂಡರು. ಕಳೆದ ವಾರದ ತಪ್ಪನ್ನು ಎತ್ತಿ ಹೇಳಿದಾಗ ಅವರು ಸಂಪೂರ್ಣವಾಗಿ ಅದನ್ನು ಒಪ್ಪಿಕೊಂಡರು. ‘ನನ್ನಿಂದ ತಪ್ಪಾಗಿದೆ. ಅದನ್ನು ಒಪ್ಪಿಕೊಳ್ಳುತ್ತೇನೆ. ತಿದ್ದಿಕೊಳ್ಳಲು ಬಿಗ್ ಬಾಸ್ ಅವಕಾಶ ಕೊಟ್ಟಿದ್ದಾರೆ. ಅದನ್ನು ಮಾಡೋಣ’ ಎಂದು ಕಿರಣ್ ಹೇಳಿದರು.

ಇದನ್ನೂ ಓದಿ: ಬಿಗ್ ಬಾಸ್ ಕನ್ನಡ ಸೀಸನ್ 13: ಅತಿಯಾಗಿ ಮಾತಾಡಿದ ಮಂಜನಿಗೆ ಬುದ್ಧಿ ಕಲಿಸಿದ ಮನೆ ಮಂದಿ

ಇನ್ನು, ಕಿರಣ್ ಅವರು ಈ ವಾರದ ಟಾಸ್ಕ್​ನಿಂದ ಮಂಜು ಅವರನ್ನು ಹೊರಗಿಟ್ಟರು. ‘ಅವನು ಬದಲಾಗುವವನೇ ಅಲ್ಲ. ಹೀಗಾಗಿ, ಮನೆಯಲ್ಲಿ ಇರಲು ಅರ್ಹನಲ್ಲ’ ಎಂದರು. ಈ ಮೂಲಕ ಕಿರಣ್ ಶಾಸ್ತ್ರಿ ಎಲ್ಲರ ಮನಸ್ಸು ಗೆದ್ದರು. ಬಹುತೇಕರು ಕಿರಣ್ ಬದಲಾವಣೆಗೆ ಚಪ್ಪಾಳೆ ತಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us