
ಮಾಡರ್ನ್ ಕವಿ ಮಂಜ, ಅಗ್ನಿಪರೀಕ್ಷೆ ಮೂಲಕ ಟಿಕೆಟ್ ಪಡೆದು ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಆದರೆ ಬಿಗ್ಬಾಸ್ ಮನೆಯಲ್ಲಿ ರೌಡಿ ವರ್ತನೆ, ಕೊಳಕುತನ ತೋರಿಸಿದ ಕಾರಣ ಆತನನ್ನು ಮನೆಯಿಂದ ಹೊರಗೆ ಹಾಕಲಾಗಿತ್ತು. ಆದರೆ ಸುದೀಪ್ ಅವರು ಮಂಗನ ಮೇಲೆ ಕರುಣೆ ತೋರಿಸಿ ಮಂಜನ್ನು ಮತ್ತೆ ಬಿಗ್ಬಾಸ್ ಮನೆಗೆ ಕಳಿಸಿದ್ದರು. ಆದರೆ ಮನೆಗೆ ಹೋದ ಕೆಲವೇ ವಾರದಲ್ಲಿ ಮಂಜನನ್ನು ಮತ್ತೆ ಹೊರಗೆ ಕಳಿಸಲಾಗಿದೆ.
ಮಂಜನನ್ನು ಮರಳಿ ಮನೆಗೆ ಕಳಿಸಬೇಕಾದರೆ ಮಂಜನನ್ನು ಅತಿಥಿಯಾಗಿ ಮಾತ್ರವೇ ಒಳಗೆ ಕಳಿಸುತ್ತಿರುವುದಾಗಿ ಪ್ರೇಕ್ಷಕರಿಗೆ ಹೇಳಲಾಗಿತ್ತು. ಮಂಜ ಇದ್ದ ಮೂರು ವಾರ, ಸ್ಪರ್ಧಿಯಾಗಿ ಅಲ್ಲ ಬದಲಿಗೆ ಅತಿಥಿ ಆಗಿ ಮಾತ್ರವೇ ಮನೆಯಲ್ಲಿದ್ದರು. ಈ ವಾರ ಯಾವುದೇ ಎಲಿಮಿನೇಷನ್ ಇರಲಿಲ್ಲ, ಬದಲಿಗೆ ಅತಿಥಿಯಾಗಿ ಮನೆಯ ಸತ್ಕಾರ ಸ್ವೀಕರಿಸಿದ ಮಂಜನನ್ನೇ ಸುದೀಪ್ ಅವರು ಹೊರಗೆ ಬರುವಂತೆ ಹೇಳಿದರು.
ಇದನ್ನೂ ಓದಿ:ಕಿರಣ್ ಶಾಸ್ತ್ರಿ ದಿಟ್ಟ ಆಟಕ್ಕೆ ಸುದೀಪ್ ಕಡೆಯಿಂದ ಸಿಕ್ತು ವಿಶೇಷ ಉಡುಗೊರೆ
ಆದರೆ ಮಂಜ, ಹೊರಗೆ ಬರುವ ಮುಂಚೆ ಸ್ಪರ್ಧಿಗಳೊಟ್ಟಿಗೆ ಮಾತನಾಡಿದ ಸುದೀಪ್, ‘ಎಲ್ಲರೂ ತಪ್ಪುಗಳನ್ನು ಮಾಡುತ್ತಾರೆ. ಮಂಜನೂ ಮಾಡಿದ್ದ. ಆದರೆ ಆತ ವೇದಿಕೆ ಮೇಲೆ ಬಂದಾಗ ಆತನ ಕಣ್ಣಲ್ಲಿ ನಿಜವಾದ ಪಶ್ಚಾತ್ತಾಪವನ್ನು ನಾನು ನೋಡಿದೆ, ಅವನಿಗೆ ಇನ್ನೊಂದು ಅವಕಾಶ ಕೊಡಬೇಕು ಅನಿಸಿತು. ಅಲ್ಲದೆ. ಬೇರೆ ಶೋಗಳಲ್ಲಿ ತಪ್ಪು ಮಾಡಿದ ಸ್ಪರ್ಧಿಗಳು ರೆಡ್ ಕಾರ್ಡ್ ತೋರಿಸಿಬಿಡುತ್ತಾರೆ. ಆದರೆ ಯಾವುದೇ ಸ್ಪರ್ಧಿಗೆ ರೆಡ್ ಕಾರ್ಡ್ ತೋರಿಸುವ ಇಚ್ಛೆ ನನಗೆ ಇಲ್ಲ. ಅದರಿಂದ ಸ್ಪರ್ಧಿಯ ಜೀವನವೇ ಹಾಳಾಗಿ ಹೋಗುತ್ತದೆ’ ಎಂದರು ಸುದೀಪ್.
ಮನೆಯಿಂದ ಹೊರಗೆ ಹೋಗುವ ಎಲ್ಲ ಸ್ಪರ್ಧಿಗಳದ್ದು ಒಂದು ಒಳ್ಳೆಯ ವಿಟಿ ಇರಬೇಕು ಎಂಬುದು ನನ್ನ ಆಸೆ, ಬಿಗ್ಬಾಸ ಒಂದು ಸುಂದರ ಪಯಣವಾಗಿ ಅವರಿಗೆ ಕಾಣಿಸಬೇಕು ಎಂಬುದೇ ನನ್ನ ಆಸೆ. ಹಾಗಾಗಿ ಮಂಜನಿಗೆ ಇನ್ನೊಂದು ಅವಕಾಶ ಕೊಟ್ಟೆ, ಅದು ನನ್ನ ವೈಯಕ್ತಿಕ ಆಯ್ಕೆ ಆಗಿತ್ತು. ಮಂಜ ತಪ್ಪು ಮಾಡಿ ಹೊರಗೆ ಹೋದ ಆದರೆ ಬದಲಾಗಿ ಹೊರಗೆ ಬರುತ್ತಿದ್ದಾನೆ’ ಎಂದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:50 pm, Sun, 22 November 26