ಬಿಗ್ ಬಾಸ್ ನಿಯಮ ಉಲ್ಲಂಘಿಸಿದ ಯಶಸ್ ಪರ ನಿಂತ ಆಸಿಯಾ; ಕಿಚ್ಚನ ಚಪ್ಪಾಳೆ ಕೊಟ್ಟ ಮರುದಿನವೇ ತಪ್ಪು

ಬಿಗ್ ಬಾಸ್ ಕನ್ನಡದಲ್ಲಿ ನಿಯಮ ಉಲ್ಲಂಘಿಸಿದ ಯಶಸ್ ಪರ ನಿಂತು ಆಸಿಯಾ ಫಿರ್ದೋಸ್ ವಿವಾದಕ್ಕೆ ಸಿಲುಕಿದ್ದಾರೆ. ಕಿಚ್ಚನ ಚಪ್ಪಾಳೆ ಪಡೆದ ಬೆನ್ನಲ್ಲೇ ಆಸಿಯಾ ತೋರಿದ ಈ ಪಕ್ಷಪಾತದ ನಡೆಗೆ ವೀಕ್ಷಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಿಯಮ ಮೀರಿದ ಆಟಗಾರನಿಗೆ ಬೆಂಬಲ ನೀಡಿ ಆಸಿಯಾ ದೊಡ್ಡ ತಪ್ಪು ಮಾಡಿದ್ದಾರೆ ಎಂದು ಪ್ರೇಕ್ಷಕರು ಚರ್ಚಿಸುತ್ತಿದ್ದಾರೆ.

ಬಿಗ್ ಬಾಸ್ ನಿಯಮ ಉಲ್ಲಂಘಿಸಿದ ಯಶಸ್ ಪರ ನಿಂತ ಆಸಿಯಾ; ಕಿಚ್ಚನ ಚಪ್ಪಾಳೆ ಕೊಟ್ಟ ಮರುದಿನವೇ ತಪ್ಪು
ಯಶಸ್-ಆಸಿಯಾ
Image Credit source: Colors Kannada

Updated on: Sep 29, 2026 | 7:01 AM

ಮುಖ್ಯಾಂಶಗಳು

  • ಕಿಚ್ಚನ ಚಪ್ಪಾಳೆ ಪಡೆದ ಮರುದಿನವೇ ತಪ್ಪು ಹೆಜ್ಜೆ ಇಟ್ಟ ಆಸಿಯಾ
  • ಸೋಫಾ ಏರಿ ನಿಯಮ ಮುರಿದ ಯಶಸ್
  • ಅನ್ಯಾಯ ಪ್ರಶ್ನಿಸುವ ಆಸಿಯಾ ಸ್ವಪಕ್ಷಪಾತ?

ಬಿಗ್ ಬಾಸ್ ಕನ್ನಡ ಸೀಸನ್ 13ರ ಆಟದ ಗತಿ ದಿನ ಕಳೆದಂತೆ ಬದಲಾಗುತ್ತಾ ಇದೆ. ಸ್ಪರ್ಧಿಗಳು ತಮ್ಮ ಆಟವನ್ನು ಉತ್ತಮ ರೀತಿಯಲ್ಲಿ ಪ್ರದರ್ಶಿಸುತ್ತಿದ್ದಾರೆ. ಕಳೆದ ವಾರ ಕಿಚ್ಚ ಸುದೀಪ್ ಅವರು ಆಸಿಯಾ ಫಿರ್ದೋಸ್​ಗೆ ಚಪ್ಪಾಳೆ ನೀಡಿದ್ದರು. ವಾರ ಪೂರ್ತಿ ಉತ್ತಮವಾಗಿ ಆಡಿದ ಅವರಿಗೆ ಮೆಚ್ಚುಗೆಯ ಮಹಾಪೂರವೇ ಬಂದಿತ್ತು. ಕಿಚ್ಚನ ಚಪ್ಪಾಳೆ ಪಡೆದ ಮರುದಿನವೇ ಅವರು ದೊಡ್ಡ ತಪ್ಪು ಮಾಡಿದ್ದಾರೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ.

ಯಶಸ್ ಅವರು ಈ ವಾರ ಫ್ಲೈಟ್ ಏರುವ ಪರಿಸ್ಥಿತಿ ಬಂದಿದೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಗಾನವಿ ಅವರ ಆಯ್ಕೆಯಂತೆ, ಈ ಮನೆಯಲ್ಲಿ ಇರಲು ಅರ್ಹರಲ್ಲದವರು ಎಂದು ಕಿರಣ್ ಶಾಸ್ತ್ರಿ ಹಾಗೂ ಯಶಸ್ ಹೆಸರನ್ನು ತೆಗೆದುಕೊಂಡರು. ಇದರ ಅನುಸಾರ ಇವರಿಬ್ಬರೂ ಮನೆಯ ಗಾರ್ಡನ್ ಏರಿಯಾದಲ್ಲಿ ಇರುವ ಫ್ಲೈಟ್​ನಲ್ಲಿ ಇರಬೇಕು. ವಾಶ್ ರೂಂ ಬಳಕೆಗೆ ಮನೆಗೆ ಒಳಗೆ ಬರಬಹುದು. ಮನೆಯಲ್ಲಿರುವ ಯಾವುದೇ ವಸ್ತುವನ್ನು ಇವರು ಬಳಕೆ ಮಾಡುವಂತೆ ಇಲ್ಲ. ಈ ಆದೇಶವನ್ನು ಕಿಚ್ಚ ಸುದೀಪ್ ಅವರು ಕಟ್ಟು ನಿಟ್ಟಾಗಿ ಹೇಳಿದ್ದರು.

ಬಿಗ್ ಬಾಸ್ ಆದೇಶ ಹೊರಡಿಸುವಾಗ ಒಂದು ವಿಶೇಷ ಸೂಚನೆ ನೀಡಲಾಗಿತ್ತು. ಈ ನಿಯಮಗಳನ್ನು ಮಂಜು ಅವರು ಪಾಲನೆ ಮಾಡಿಕೊಳ್ಳುವಂತೆ ನೋಡಿಕೊಳ್ಳಲು ತಿಳಿಸಲಾಗಿತ್ತು. ಆದರೆ, ಯಶಸ್ ಅವರು ನಿಯಮ ಮೀರಿದ್ದಾರೆ. ಸೋಫಾ ಮೇಲೆ ಅವರು ಕುಳಿತುಕೊಂಡಿದ್ದಾರೆ. ಬಿಗ್ ಬಾಸ್ ಆ ಬಳಿಕ ಮನೆಗೆ ನೀಡಿದ ಮೊಟ್ಟೆಯಲ್ಲಿ ಅರ್ಧವನ್ನು ಹಿಂಪಡೆದಿದ್ದಾರೆ.

ಯಶಸ್ ಅವರು ಅಷ್ಟೂ ಮೊಟ್ಟೆ ನೀಡಬೇಕು ಎಂಬುದು ಮನೆಯವರ ವಾದ ಆಗಿತ್ತು. ಕೊನೆಗೆ ಅವರು ಇದಕ್ಕೆ ಒಪ್ಪಿದರು. ಯಶಸ್ ಬಳಿ ಬಂದ ಅವರು, ‘ನಿಮ್ಮ ಎಲ್ಲಾ ಮೊಟ್ಟೆಯನ್ನು ಕೊಟ್ಟಿದ್ದೇನೆ. ಕಾಮನ್ ಆಗಿ ನಾಲ್ಕು ಮೊಟ್ಟೆ ಉಳಿದಿದೆ. ಅದನ್ನು ನಾನು ನಿಮಗೆ ನೀಡುತ್ತೇನೆ’ ಎಂದು ಆಸಿಯಾ ಅವರು ಯಶಸ್​ಗೆ ಹೇಳಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಕನ್ನಡ ಸೀಸನ್ 13: ಯಶಸ್, ಶಾಸ್ತ್ರಿಗೆ ಬುದ್ಧಿ ಕಲಿಸಿದ ವೈಲ್ಡ್ ಕಾರ್ಡ್ ಸ್ಪರ್ಧಿ ಗಾನವಿ ಗೌಡ

‘ಬೇರೆಯವರು ತಪ್ಪು ಮಾಡಿದಾಗ ಆಸಿಯಾ ಪ್ರಶ್ನೆ ಮಾಡುತ್ತಾರೆ. ಯಶಸ್ ತಪ್ಪು ಮಾಡಿದಾಗ ಅದನ್ನು ತಿದ್ದಿ ಹೇಳಬೇಕು. ಅದನ್ನು ಬಿಟ್ಟು ಹೀಗೆ ಮಾಡಿದರೆ ಹೇಗೆ’ ಎನ್ನುವ ಪ್ರಶ್ನೆಯನ್ನು ಆಸಿಯಾಗೆ ವೀಕ್ಷಕರು ಕೇಳುತ್ತಾ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us