
‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಆಸಿಯಾ ಫಿರ್ದೋಸ್ ಅವರು ತಮ್ಮ ಆಟವನ್ನು ಅತ್ಯುತ್ತಮವಾಗಿ ಆಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಬಹುತೇಕ ಸಂದರ್ಭಗಳಲ್ಲಿ ಅವರು ಸೈಲೆಂಟ್ ಆಗಿರೋಕೆ ಇಷ್ಟಪಡುತ್ತಾರೆ. ಎಷ್ಟೇ ದೊಡ್ಡ ಜಗಳಗಳು ನಡೆದರೂ ಅವರು ಸುಮ್ಮನೆ ಇರುತ್ತಾರೆ. ಈ ವಿಷಯವಾಗಿ ಕಳೆದವಾರ ಅವರು ಬೈಸಿಕೊಂಡಿದ್ದರು. ಈಗ ಆಸಿಯಾ ಅವರು ಗಾನವಿ ವಿರುದ್ಧ ಸಿಡಿದೆದ್ದಿದ್ದಾರೆ. ನಾನು ಸೈಲೆಂಟ್ ಆಗಿದೀನಿ ಅಂದ ಮಾತ್ರಕ್ಕೆ ಅದು ನನ್ನ ವೀಕ್ನೆಸ್ ಅಲ್ಲ ಎಂದು ಗುಡುಗಿದ್ದಾರೆ.
‘ಬಿಗ್ ಬಾಸ್’ ಮನೆಯಲ್ಲಿ ಆಸಿಯಾ ಅವರು ಹಲವು ಸಂದರ್ಭಗಳಲ್ಲಿ ಕಿರುಚಾಡಿದ್ದು ಇದೆ. ಆದರೆ, ಒಂದು ಹಂತಕ್ಕೆ ಹೋದ ಬಳಿಕ ಅದು ಕಣ್ಣೀರಾಗಿ ಬದಲಾಗುತ್ತದೆ. ಈ ಕಾರಣಕ್ಕೆ ಆಸಿಯಾ ಯಾರ ಜೊತೆಗೂ ಹೆಚ್ಚು ಜಗಳಕ್ಕೆ ಹೋಗೋದಿಲ್ಲ, ಕಿರುಚಾಡುವುದಿಲ್ಲ. ಕಳೆದ ವಾರ ಅವರು ಉಸ್ತುವಾರಿ ಮಾಡುವಾಗ ಮಂಜು ಕೂಗಾಡಿದರೂ ಆಸಿಯಾ ಅದನ್ನು ತಡೆಯಲು ಹೋಗಿಲ್ಲ. ಈ ಬಗ್ಗೆ ಸುದೀಪ್ ಪ್ರಶ್ನೆ ಮಾಡಿದ್ದರು. ಉಸ್ತುವಾರಿ ಸರಿ ಮಾಡಿಲ್ಲ ಎಂದು ಸುದೀಪ್ ಹೇಳಿದ್ದರು. ಈ ವಿಷಯ ಇಟ್ಟುಕೊಂಡು ಗಾನವಿ ಅವರು ಆಸಿಯಾನ ಟಾರ್ಗೆಟ್ ಮಾಡಿದ್ದಾರೆ.
ಈ ವಾರ ಪಾಯಿಂಟ್ಸ್ ಬಿಲ್ಲೆಗಳನ್ನು ಬಿಗ್ ಬಾಸ್ ನೀಡಿದೆ. ಇಡೀ ಮನೆಯನ್ನು ಎರಡು ತಂಡಗಳನ್ನಾಗಿ ಮಾಡಲಾಗಿದೆ. ಪ್ರತಿ ತಂಡದ ನಾಯಕ ಬಿಲ್ಲೆಗಳನ್ನು ಹಂಚಬೇಕು. ಈ ವೇಳೆ ಗಗನ್ ಅವರು 50 ಪಾಯಿಂಟ್ಸ್ ಪೈಕಿ ಗಾನವಿಗೆ 5 ಹಾಗೂ ಆಸಿಯಾಗೆ 8 ಪಾಯಿಂಟ್ಸ್ ನೀಡಿದರು. ಇದನ್ನು ಗಾನವಿ ಪ್ರಶ್ನೆ ಮಾಡಿದ್ದಾರೆ. ನನಗೆ ಬಂದಿರೋ ಪಾಯಿಂಟ್ಸ್ ಮೇಲೆ ಖುಷಿ ಇಲ್ಲ ಎಂದಿದ್ದಾರೆ.
ಇದನ್ನೂ ಓದಿ: ‘ಇದು ಸ್ಪ್ಲಿಟ್ಸ್ವಿಲ್ಲಾ ಅಲ್ಲ, ಬಿಗ್ ಬಾಸ್’: ಸೌಂದರ್ಯಾಗೆ ಎಚ್ಚರಿಕೆ ನೀಡಿದ ಆಸಿಯಾ
ಇದೇ ವೇಳೆ ಆಸಿಯಾ ವಿಷಯಕ್ಕೂ ಅವರು ತೆರಳಿದರು. ‘ಆಸಿಯಾ ಅವರು ಕಳೆದವಾರ ಉಸ್ತುವಾರಿಯನ್ನು ಸರಿಯಾಗಿ ನಿರ್ವಹಿಸಿಲ್ಲ’ ಎಂದು ಟೀಕೆ ಮಾಡಿದರು. ಈ ವಿಷಯ ಆಸಿಯಾನ ಟ್ರಿಗರ್ ಮಾಡಿದೆ. ‘ಪ್ರತಿ ವಿಷಯಕ್ಕೂ ಅರಚಾಡುವುದು ಸರಿ ಅಲ್ಲ. ನಾನು ಸೈಲೆಂಟ್ ಆಗಿದ್ದೇನೆ ಎಂದ ಮಾತ್ರಕ್ಕೆ ಅದು ನನ್ನ ವೀಕ್ನೆಸ್ ಅಂದುಕೊಳ್ಳಬೇಡಿ. ಈ ಜಗಳ, ಕಿರುಚಾಟ ಬೇಡ ಎಂದೇ ನಾನು ಸೈಲೆಂಟ್ ಆಗಿದ್ದೇನೆ’ ಎಂದು ಆಸಿಯಾ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ..