ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆಯೇ ತಂದಿಟ್ಟು ಮಜಾ ತೆಗೆದುಕೊಳ್ಳುತ್ತಿದ್ದಾರೆ ಅವಿನಾಶ್

ಬಿಗ್ ಬಾಸ್ ಮನೆಯಲ್ಲಿ ದೈಹಿಕ ಸಾಮರ್ಥ್ಯಕ್ಕಿಂತ ಬುದ್ಧಿವಂತಿಕೆಯೇ ಪ್ರಮುಖ ಶಕ್ತಿಯಾಗಿದೆ. ಸೈಲೆಂಟ್ ಆಗಿದ್ದ ಅವಿನಾಶ್ ಈಗ ತಂದಿಡುವ ತಂತ್ರ ಬಳಸಿ ಸ್ಪರ್ಧಿಗಳ ಮಧ್ಯೆ ಬೆಂಕಿ ಹಚ್ಚುತ್ತಿದ್ದಾರೆ. ಸೌಂದರ್ಯಾ, ವೈಷ್ಣವಿ, ಧನುಷ್ ಹಾಗೂ ಕಾವ್ಯಾ ನಡುವೆ ಅನಗತ್ಯ ಗೊಂದಲ ಸೃಷ್ಟಿಸಿ ಆಟದ ಚಿತ್ರಣವನ್ನೇ ಬದಲಾಯಿಸುತ್ತಿದ್ದಾರೆ. ಅವಿನಾಶ್ ನಡೆಗೆ ಮನೆಮಂದಿ ಹಾಗೂ ವೀಕ್ಷಕರು ತೀವ್ರ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆಯೇ ತಂದಿಟ್ಟು ಮಜಾ ತೆಗೆದುಕೊಳ್ಳುತ್ತಿದ್ದಾರೆ ಅವಿನಾಶ್
ಬಿಗ್ ಬಾಸ್

Updated on: Sep 15, 2026 | 7:02 AM

ಮುಖ್ಯಾಂಶಗಳು

  • ಬಿಗ್ ಬಾಸ್ ಮನೆಯ ಹೊಸ ಮಾಸ್ಟರ್ ಮೈಂಡ್
  • ಸೈಲೆಂಟ್ ಕಿಲ್ಲರ್ ಅವಿನಾಶ್
  • ತಂದಿಟ್ಟು ಮಜಾ ತಗೊಂಡ ಅವಿನಾಶ್

ಬಿಗ್ ಬಾಸ್ ಮನೆಯಲ್ಲಿ ದೈಹಿಕ ಸಾಮರ್ಥ್ಯಕ್ಕಿಂತ ಬುದ್ಧಿ ಶಕ್ತಿ ಎಷ್ಟಿದೆ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಬುದ್ಧಿ ಚುರುಕಾಗಿದ್ದರೆ ಅಲ್ಲಿ ಸುಲಭದಲ್ಲಿ ಜೀವಿಸಬಹುದು. ಇಲ್ಲವಾದಲ್ಲಿ ಬೇರೆಯವರ ಕೈಗೊಂಬೆಯಾಗಿ ಎಲ್ಲರೂ ಹೇಳಿದಂತೆ ಕೇಳುತ್ತಾ ಕುಳಿತುಕೊಳ್ಳಬೇಕಾಗುತ್ತದೆ. ಈ ಬಾರಿಯ ಸೀಸನ್ ಅಲ್ಲಿ ಅವಿನಾಶ್ ಅವರು ಅತಿಯಾದ ಬುದ್ಧಿವಂತಿಕೆ ಉಪಯೋಗಿಸಿ ಎಲ್ಲರ ಮಧ್ಯೆ ತಂದಿಡುವ ಕೆಲಸ ಮಾಡುತ್ತಿದ್ದಾರೆ. ಈ ವಿಷಯ ಚರ್ಚೆಗೆ ಕಾರಣ ಆಗಿದೆ.

ಅವಿನಾಶ್ ಅವರು ಇಷ್ಟು ದಿನ ಫ್ಲೈಟ್​ನಲ್ಲಿ ಇದ್ದರು. ಆ ಸಮಯದಲ್ಲಿ ಅವರಿಗೆ ಹೆಚ್ಚು ಸ್ಪೇಸ್ ಸಿಕ್ಕಿರಲಿಲ್ಲ. ಹೀಗಾಗಿ, ಸೈಲೆಂಟ್ ಆಗಿಯೇ ಇದ್ದರು. ಆದರೆ, ಈಗ ಬಿಗ್ ಬಾಸ್ ಮನೆಗೆ ಬಂದಮೇಲೆ ಬದಲಾಗಿದ್ದಾರೆ. ಮೊದಲಿಗಿಂತ ಹೆಚ್ಚು ಆ್ಯಕ್ಟೀವ್ ಆಗಿದ್ದು, ತಂದಿಡೋ  ಕೆಲಸವನ್ನು ಮಾಡುತ್ತಿದ್ದಾರೆ. ಮೊದಲು ಸೌಂದರ್ಯಾ ಹಾಗೂ ವೈಷ್ಣವಿ ಮಧ್ಯೆ ಬೆಂಕಿ ಹಚ್ಚಿದರು. ಆ ಬಳಿಕ ಧನುಷ್ ಹಾಗೂ ಕಾವ್ಯಾ ಮಧ್ಯೆ ಬೆಂಕಿ ಹೊತ್ತಿ ಉರಿಯುವಂತೆ ಮಾಡಿದರು.

ಸೌಂದರ್ಯಾ ಹಾಗೂ ಅವಿನಾಶ್ ಮಾತನಾಡುತ್ತಿದ್ದರು. ‘ನಿಮ್ಮ ವಿರುದ್ಧ ವೈಷ್ಣವಿ ಕೆಟ್ಟ ಶಬ್ದ ಬಳಕೆ ಮಾಡಿದ್ದಾರೆ’ ಎಂದು ಸೌಂದರ್ಯಾ ಬಳಿ ಅವಿನಾಶ್ ಹೇಳಿದರು. ಇದನ್ನು ನಂಬಿದ ಸೌಂದರ್ಯಾ, ವೈಷ್ಣವಿ ಜೊತೆ ಜಗಳಕ್ಕೆ ಇಳಿದರು. ಇಬ್ಬರ ಮಧ್ಯೆ ತಂದಿಟ್ಟು ಅವಿನಾಶ್ ಮಜಾ ತೆಗೆದುಕೊಂಡರು. ಈ ಸಂದರ್ಭದಲ್ಲಿ ಅವಿನಾಶ್ ಅವರು ಸಣ್ಣದಾಗಿ ನಗುತ್ತಾ ಇದ್ದರು.

ಇದನ್ನೂ ಓದಿ: ಮಂಜು ಮೇಲೆ ಹಲ್ಲೆ ಮಾಡಿದ್ರಾ ಸೌಂದರ್ಯಾ? ಬಿಗ್ ಬಾಸ್ ಮಾಡಿದ ನಿರ್ಧಾರ ಏನು?

ಆ ಬಳಿಕ ಇಷ್ಟಕ್ಕೆ ನಿಲ್ಲದ ಅವರು, ಧನುಷ್ ಬಳಿ ತೆರಳಿದರು. ‘ನೀನು ಹೋಗಿ ಕಾವ್ಯಾ ಅವರಿಗೆ ಕೋಪ ಬರುವಂತೆ ಮಾಡು. ನೀನು ಮಾಡುವ ಪ್ರ್ಯಾಂಕ್ ರಿಯಲ್ ಆಗಿರಬೇಕು’ ಎಂದು ಛೂ ಬಿಟ್ಟರು. ಈ ವೇಳೆ ಹಿಂದೂಮುಂದೆ ಯೋಚಿಸದ ಧನುಷ್, ಕಾವ್ಯಾ ಅವರನ್ನು ಕೆರಳಿಸಿದರು. ನಂತರ ಇದು ಪ್ರ್ಯಾಂಕ್ ಎಂದು ವಿವರಿಸಿದರೂ ಅವರು ಅದನ್ನು ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಈ ಬೆಳವಣಿಗೆಯಿಂದ ಧನುಷ್ ಅವರು ಸುಖಾಸುಮ್ಮನೆ ಕಾವ್ಯಾ ಅವರ ದ್ವೇಷ ಕಟ್ಟಿಕೊಂಡಿದ್ದಾರೆ. ಅವಿನಾಶ್ ಎಲ್ಲರ ಮಧ್ಯೆ ತಂದಿಟ್ಟು ಮಜಾ ತೆಗೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us