‘ಸುಧಿ ಅಸುರಾಧಿಪತಿ ಅಲ್ಲ, ಜೋಕರ್’; ಸುದೀಪ್​ಗೂ ಹೀಗೆಯೇ ಅನಿಸಿತು

ಬಿಗ್ ಬಾಸ್ ಕನ್ನಡ ಮನೆಯಲ್ಲಿ ಕಾಕ್ರೋಚ್ ಸುಧಿ ಅವರಿಗೆ ಅಸುರಾಧಿಪತಿ ಪಾತ್ರ ನೀಡಲಾಗಿತ್ತು. ಆದರೆ, ಅವರು ಜೋಕರ್ ರೀತಿ ನಡೆದುಕೊಂಡಿದ್ದು ಮನೆಯ ಸದಸ್ಯರ ಹಾಗೂ ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಕಳೆದ ಸೀಸನ್‌ಗಳಲ್ಲಿ ಯಶಸ್ವಿಯಾಗಿ ನಿರ್ವಹಿಸಿದ ಈ ಪಾತ್ರವನ್ನು ಸುಧಿ ನಿರೀಕ್ಷಿತ ಮಟ್ಟದಲ್ಲಿ ನಿರ್ವಹಿಸಲಿಲ್ಲ.

‘ಸುಧಿ ಅಸುರಾಧಿಪತಿ ಅಲ್ಲ, ಜೋಕರ್’; ಸುದೀಪ್​ಗೂ ಹೀಗೆಯೇ ಅನಿಸಿತು
ಸುದೀಪ್-ಸುಧಿ
Updated By: ರಾಜೇಶ್ ದುಗ್ಗುಮನೆ

Updated on: Oct 12, 2025 | 9:53 AM

ಬಿಗ್ ಬಾಸ್ ಮನೆಯಲ್ಲಿ ನಡೆಯುವ ಡ್ರಾಮಗಳು ಒಂದೆರಡಲ್ಲ. ಇದೆಲ್ಲವನ್ನು ವೀಕ್ಷಕರು ಸಹಿಸಿಕೊಳ್ಳಲೇಬೇಕು. ಈ ವಾರವೂ ಬಿಗ್ ಬಾಸ್ ಮನೆಯಲ್ಲಿ ಹಲವು ಡ್ರಾಮಾಗಳು ನಡೆದವು ಎಂದರೂ ಅದು ತಪ್ಪಾಗಲಿಕ್ಕಿಲ್ಲ. ಕಾಕ್ರೋಚ್ ಸುಧಿ ಅವರನ್ನು ಅಸುರಾಧಿಪತಿ ಎಂದು ಘೋಷಿಸಲಾಯಿತು ಮತ್ತು ಅವರಿಗೆ ಮನೆಯನ್ನು ನಿಯಂತ್ರಿಸುವ ಅಧಿಕಾರವನ್ನು ನೀಡಲಾಯಿತು. ಆದರೆ, ಅವರು ಕೊನೆಗೆ ಆಗಿದ್ದು ಜೋಕರ್ ಎಂದರೂ ತಪ್ಪಾಗಲಿಕ್ಕಿಲ್ಲ.

ಕಳೆದ ಸೀಸನ್​ನಲ್ಲಿ ಉಗ್ರಂ ಮಂಜುಗೆ ಇದೇ ರೀತಿಯ ಕ್ಯಾರೆಕ್ಟರ್ ನೀಡಲಾಗಿತ್ತು ಮತ್ತು ಅದನ್ನು ಅವರು ಸಮರ್ಥವಾಗಿ ನಿರ್ವಹಿಸಿದರು. ಈ ಹಿಂದಿನ ಸೀಸನ್​ಗಳಲ್ಲಿ ಎಲ್ಲರೂ ಇದನ್ನು ಒಳ್ಳೆಯ ರೀತಿಯಲ್ಲಿ ನಿರ್ವಹಿಸಿಕೊಂಡು ಹೋಗಿದ್ದರು. ಆದರೆ, ಈ ಬಾರಿ ಅದೆಲ್ಲವೂ ತಲೆಕೆಳಗಾಗಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಎಲ್ಲರೂ ತಮ್ಮ ಮನಸ್ಸಿಗೆ ಬಂದಂತೆ ಆಟ ಆಡುವುದನ್ನು ಕಾಣಬಹುದು.

ಕಾಕ್ರೋಚ್ ಸುಧಿಗೆ ಅಸುರನ ಸ್ಥಾನ ನೀಡಲಾಯಿತು. ಆದರೆ, ಅವರು ಅಕ್ಷರಶಃ ಜೋಕರ್ ರೀತಿ ನಡೆದುಕೊಂಡರು. ಮನೆಯಲ್ಲಿ ಅನೇಕ ಸ್ಪರ್ಧಿಗಳು ಇದೇ ರೀತಿಯ ಅಭಿಪ್ರಾಯ ನೀಡಿದ್ದಾರೆ. ರಾಶಿಕಾ ಅವರು, ‘ಮಂಜು ಅಸುರ ರಾಕ್ಷಸ ಆಗಿರಲಿಲ್ಲ. ಅವರು ಜೋಕರ್​ನಂತೆ ಕಂಡು ಬಂದರು’ ಎಂದು ಹೇಳಿದರು. ಅನೇಕರು ಇದನ್ನು ಒಪ್ಪಿದರು.

ಇದನ್ನೂ ಓದಿ
‘ನಂದ ಗೋಕುಲ’ ಧಾರಾವಾಹಿಯಲ್ಲಿ ವಲ್ಲಭ-ಅಮೂಲ್ಯ ವಿವಾಹ; ದೊಡ್ಡ ಟ್ವಿಸ್ಟ್
ಈ ವಾರ ಬಿಗ್ ಬಾಸ್​ನಿಂದ ಎಲಿಮಿನೇಟ್ ಆಗಿದ್ದು ಯಾರು? ಕಾದಿದೆ ದೊಡ್ಡ ಟ್ವಿಸ್
ವಿದೇಶದಲ್ಲೂ ಆಸ್ತಿ ಹೊಂದಿದ್ದಾರೆ ಅಮಿತಾಭ್ ಬಚ್ಚನ್; ಇಲ್ಲಿದೆ ವಿವರ
ಒಂದಲ್ಲ, ಎರಡಲ್ಲ ಆರು ಗಂಟೆ ಸ್ನಾನ ಮಾಡಿದ ಸತೀಶ್; ಒಡೆಯಿತು ತಾಳ್ಮೆಯ ಕಟ್ಟೆ

ಸುಧಿ ಅವರು ಯಾವ ರೀತಿ ಇದ್ದರು ಎಂಬುನ್ನು ತೋರಿಸಲು ವಿಡಿಯೋ ಕೂಡ ಪ್ಲೇ ಮಾಡಲಾಯಿತು. ಇದನ್ನು ನೋಡಿದ ಬಳಿಕ ಅನೇಕರಿಗೆ ಈ ವಿಚಾರ ಮತ್ತಷ್ಟು ಮನದಟ್ಟು ಆಯಿತು. ಸುಧಿ ಅವರನ್ನು ಅನೇಕರು ಜೋಕರ್ ಎಂದು ಒಪ್ಪಿಕೊಂಡರು. ಸುದೀಪ್ ಅವರಿಗೂ ಇದೇ ರೀತಿಯ ಅಭಿಪ್ರಾಯ ಬಂತು.

ಇದನ್ನೂ ಓದಿ: ಈ ವಾರ ಬಿಗ್ ಬಾಸ್​ನಿಂದ ಎಲಿಮಿನೇಟ್ ಆಗಿದ್ದು ಯಾರು? ಕಾದಿದೆ ದೊಡ್ಡ ಟ್ವಿಸ್ಟ್

ಸುಧಿ ಅವರು ವಿಲನ್ ಪಾತ್ರಗಳ ಮೂಲಕ ಗಮನ ಸೆಳೆದವರು. ಅವರು ದೊಡ್ಮನೆಯಲ್ಲಿ ಖಡಕ್ ಆಗಿ ಇರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ನಿರೀಕ್ಷೆ ಸುಳ್ಳಾಗಿದೆ. ಅವರು ಎಲ್ಲರ ಮನ ಒಲಿಸಿ ಬಿಗ್ ಬಾಸ್ ಮನೆಯಲ್ಲಿ ಸರ್ವೈವ್ ಆಗುವ ನಿರ್ಧಾರಕ್ಕೆ ಬಂದಿದ್ದಾರೆ. ಈ ರೀತಿ ಆಡಿದರೆ ಗೆಲ್ಲಲು ಸಾಧ್ಯವಿಲ್ಲ ಎಂದು ಸುದೀಪ್ ಈಗಾಗಲೇ ಅನೇಕ ಬಾರಿ ಎಚ್ಚರಿಕೆ ನೀಡಿದ್ದಾರೆ. ಆದರೆ, ಯಾರೊಬ್ಬರೂ ಎಚ್ಚೆತ್ತುಕೊಳ್ಳಲಿಲ್ಲ, ಪಾಠವನ್ನೂ ಕಲಿಯಲಿಲ್ಲ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.