‘ಬಿಗ್ ಬಾಸ್ ಕನ್ನಡ ಸೀಸನ್ 10’ (BBK 10) ಆರಂಭಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಇವೆ. ಈ ಬಾರಿ ಬಿಗ್ ಬಾಸ್ಗಾಗಿ ಹೊಸ ಮನೆ ನಿರ್ಮಾಣ ಮಾಡಲಾಗಿದೆ ಅನ್ನೋದು ವಿಶೇಷ. ಈ ಮನೆಯನ್ನು ನೋಡೋಕೆ ಅಭಿಮಾನಿಗಳು ಕಾದಿದ್ದಾರೆ. ಪ್ರೋಮೋದಲ್ಲಿ ಈ ಮನೆಯನ್ನು ತೋರಿಸಲಾಗಿದ್ದು, ವೀಕ್ಷಕರು ಸಖತ್ ಇಷ್ಟಪಟ್ಟಿದ್ದಾರೆ. ಕಳೆದ ಬಾರಿ ಫಿಲ್ಮ್ ಸಿಟಿಯಲ್ಲಿ ದೊಡ್ಮನೆ ಇತ್ತು. ಈ ಬಾರಿ ಅದನ್ನು ಬೇರೆ ಕಡೆ ಶಿಫ್ಟ್ ಮಾಡಲಾಗಿದೆ. ಈ ಮನೆಗೆ ಹೊಸ ಲುಕ್ ನೀಡಲಾಗಿದೆ. ಈ ಬಾರಿ ಬಿಗ್ ಬಾಸ್ ಮನೆಗೆ ಬರುವವರ ಒಂದಷ್ಟು ಹೆಸರು ಲಭ್ಯವಾಗಿದೆ.
ಸ್ನೇಕ್ ಶ್ಯಾಮ್
ಬಾಲಸುಬ್ರಹ್ಮಣ್ಯ ಅನ್ನೋದು ಸ್ನೇಕ್ ಶ್ಯಾಮ್ ಅವರ ಮೂಲ ಹೆಸರು. ಅವರು ಹಾವುಗಳನ್ನು ಹಿಡಿದು ರಕ್ಷಣೆ ಮಾಡುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಕೆಲವು ಯೂಟ್ಯೂಬ್ಗಳಿಗೆ ಅವರು ಸಂದರ್ಶನ ಕೂಡ ನೀಡಿದ್ದಾರೆ. ಅವರು ಮೈಸೂರು ಮೂಲದವರು. ಅವರು ಈ ಬಾರಿ ಬಿಗ್ ಬಾಸ್ ಮನೆಗೆ ತೆರಳುತ್ತಿದ್ದಾರೆ.
ನಮೃತಾ ಗೌಡ
ನಮೃತಾ ಗೌಡ ಅವರು ‘ನಾಗಿಣಿ 2’ ಮೂಲಕ ಫೇಮಸ್ ಆದವರು. ಅವರು ಕೂಡ ಈ ಬಾರಿ ಬಿಗ್ ಬಾಸ್ ಮನೆಗೆ ತೆರಳಿದ್ದಾರೆ. ಈ ಮೊದಲು ‘ನಾಗಿಣಿ’ ಧಾರಾವಾಹಿಯಲ್ಲಿ ನಟಿಸಿದ್ದ ದೀಪಿಕಾ ದಾಸ್ ಅವರು ಬಿಗ್ ಬಾಸ್ ಮನೆಗೆ ಬಂದು ಫೇಮಸ್ ಆದರು. ಈ ಬಾರಿ ನಮೃತಾ ಗೌಡ ಅವರು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಚಾರ್ಲಿ
‘777 ಚಾರ್ಲಿ’ ಸಿನಿಮಾದಲ್ಲಿ ನಟಿಸಿದ್ದ ಚಾರ್ಲಿ ಶ್ವಾನ ಕೂಡ ದೊಡ್ಮನೆಗೆ ಎಂಟ್ರಿ ನೀಡುತ್ತಿದೆ. ಇದು ಬಿಗ್ ಬಾಸ್ನ ಪ್ರಮುಖ ಹೈಲೈಟ್ ಆಗುವ ಸಾಧ್ಯತೆ ಇದೆ. ಈ ಶ್ವಾನ ಕೂಡ ಮನೆಯ ನಿಯಮ ಪಾಲಿಸಬೇಕೇ ಎನ್ನುವ ಪ್ರಶ್ನೆ ಅನೇಕರಲ್ಲಿದೆ.
ರಕ್ಷಕ್ ಬುಲೆಟ್
ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಅವರು ‘ಗುರು ಶಿಷ್ಯರು’ ಸಿನಿಮಾದಲ್ಲಿ ನಟಿಸಿದ್ದರು. ಮೊದಲ ಸಿನಿಮಾದಲ್ಲೇ ಎಲ್ಲರ ಗಮನ ಸೆಳೆದೆ ಎಂದು ಬೀಗಿದ್ದರು. ಅವರು ಸಾಕಷ್ಟು ಸಂದರ್ಶನಗಳಲ್ಲಿ ತಮ್ಮ ಬಗ್ಗೆ ಬಡಾಯಿ ಕೊಚ್ಚಿಕೊಂಡಿದ್ದರು. ಈ ಮೂಲಕ ಅವರು ಸಖತ್ ಟ್ರೋಲ್ ಆಗಿದ್ದರು.
ವಿನಯ್ ಗೌಡ
ಸುವರ್ಣದಲ್ಲಿ ಪ್ರಸಾರ ಕಂಡಿದ್ದ ‘ಹರ ಹರ ಮಹಾದೇವ’ ಧಾರಾವಾಹಿ ಮೂಲಕ ಫೇಮಸ್ ಆದವರು ವಿನಯ್ ಗೌಡ. ಇವರು ಈಶ್ವರನ ಪಾತ್ರ ಮಾಡಿದ್ದರು.
ಗೌರೀಶ್ ಅಕ್ಕಿ
ಜರ್ನಲಿಸ್ಟ್ ಗೌರೀಶ್ ಅಕ್ಕಿ ಕೂಡ ದೊಡ್ಮನೆಗೆ ಎಂಟ್ರಿ ನೀಡಿದ್ದಾರೆ. ಕಳೆದ ಬಾರಿಯೂ ಓರ್ವ ಜರ್ನಲಿಸ್ಟ್ ಎಂಟ್ರಿ ದೊಡ್ಮನೆಗೆ ಆಗಿತ್ತು.
ನೀತು ವನಜಾಕ್ಷಿ
‘ಮಿಸ್ ಟ್ರಾನ್ಸ್ ಕ್ವೀನ್ ಇಂಡಿಯಾ 2019’ ಪಟ್ಟ ಗೆದ್ದ ನೀತು ವನಜಾಕ್ಷಿ ಕೂಡ ದೊಡ್ಮನಗೆ ಬರುತ್ತಿದ್ದಾರೆ.
ಇದನ್ನೂ ಓದಿ: Divya Uruduga: ಬಿಗ್ ಬಾಸ್ ಫಿನಾಲೆಯಿಂದ ಹೊರಬಿದ್ದ ದಿವ್ಯಾ ಉರುಡುಗಗೆ ಸಿಕ್ಕ ಹಣವೆಷ್ಟು?
ಹಳೆಯ ಸ್ಪರ್ಧಿಗಳು?
ಈ ಮೊದಲ ಸೀಸನ್ಗೆ ಬಂದ ಕೆಲವು ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ನೀಡುತ್ತಿದ್ದಾರೆ ಎನ್ನಲಾಗಿದೆ. ಆ ಸ್ಪರ್ಧಿಗಳು ಯಾರ್ಯಾರು ಎನ್ನುವ ಕೂತೂಹಲ ಅಭಿಮಾನಿಗಳಲ್ಲಿ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:50 am, Sun, 8 October 23