ಪ್ರತಾಪ್​ ಇಂದಾಗಿ ಮೊಬೈಲ್ ಹೊಗೆ, ಇದ್ಯಾರು ವರ್ತೂರು ವೆಂಕಟೇಶ್?

|

Updated on: Jan 28, 2024 | 8:27 PM

Bigg Boss Kannada: ಫಿನಾಲೆ ದಿನ ಟೆನ್ಷನ್​ನಲ್ಲಿ ಮನೆ ಸದಸ್ಯರನ್ನು ನಗಿಸಲು ಮೀಮ್​ ವಿಡಿಯೋಗಳನ್ನು ಪ್ರದರ್ಶಿಸಿದರು ಸುದೀಪ್. ಅಂದಹಾಗೆ ಈ ವರ್ತೂರು ವೆಂಕಟೇಶ್ ಯಾರು?

ಪ್ರತಾಪ್​ ಇಂದಾಗಿ ಮೊಬೈಲ್ ಹೊಗೆ, ಇದ್ಯಾರು ವರ್ತೂರು ವೆಂಕಟೇಶ್?
Follow us on

ಬಿಗ್​ಬಾಸ್ (BiggBoss) ಕನ್ನಡ ಸೀಸನ್ 10ರ ಫಿನಾಲೆ ಪ್ರಾರಂಭವಾಗಿದೆ. ಕೆಲವೇ ಗಂಟೆಗಳಲ್ಲಿ ಸುದೀಪ್ ಅವರು ವಿನ್ನರ್ ಅನ್ನು ಘೋಷಣೆ ಮಾಡಲಿದ್ದಾರೆ. ಎಪಿಸೋಡ್ ಪ್ರಾರಂಭಿಸುತ್ತಿದ್ದಂತೆ ಮನೆಯ ಸದಸ್ಯರನ್ನು ನಗಿಸುವುದು, ವಾತಾವರಣ ತಿಳಿ ಮಾಡುವುದು ಸುದೀಪ್ ಅವರ ಅಭ್ಯಾಸ. ಅಂತೆಯೇ ಇಂದೂ ಸಹ ಸುದೀಪ್ ಅವರು ಲಘುವಾಗಿ ಎಪಿಸೋಡ್ ಪ್ರಾರಂಭ ಮಾಡಿದರು. ಮನೆಯ ಸ್ಪರ್ಧಿಗಳಿಗೆ ಅವರದ್ದೇ ಮೀಮ್ ವಿಡಿಯೋಗಳನ್ನು ತೋರಿಸಿದರು. ಮೀಮ್​ಗಳನ್ನು ನೋಡಿ ಬಿದ್ದು-ಬಿದ್ದು ನಕ್ಕರು ಮನೆ ಮಂದಿ. ಅದರಲ್ಲೂ ಡ್ರೋನ್ ಪ್ರತಾಪ್​ರ ಮೀಮ್ ಅಂತೂ ಅದ್ಭುತವಾಗಿತ್ತು.

ಮೊದಲು ತೋರಿಸಿದ್ದು ಸಂಗೀತಾರ ಮೀಮ್. ಅವರು ಹಾಗೂ ನೀತು ನಡುವೆ ನಡೆದಿದ್ದು ‘ಹೌದಾ-ಹೌದಾ’ ಸಂಭಾಷಣೆ ಹಲವು ವಾರಗಳಿಂದಲೂ ಟ್ರೆಂಡಿಂಗ್ ಮೀಮ್ ಆಗಿದೆ. ಬೇರೆ-ಬೇರೆ ಸನ್ನಿವೇಶಗಳಲ್ಲಿ ಆ ಮೀಮ್ ಅನ್ನು ಬಳಸಲಾಗುತ್ತಿದೆ. ಶನಿವಾರದ ಎಪಿಸೋಡ್​ನಲ್ಲಿ ಸಹ ಸಂಗೀತಾರಿಂದ ಸುದೀಪ್ ‘ಹೌದಾ’ ಎಂದು ಹೇಳಿದರು. ಇಂದು ಆ ಮೀಮ್ ತೋರಿಸಿದಾಗ ಬಿದ್ದು-ಬಿದ್ದು ನಕ್ಕರು ಸಂಗೀತಾ. ಅವರ ಸಹಜ ಸಂಭಾಷಣೆ ಮೀಮ್ ಆಗಿ ಹರಿದಾಡುತ್ತಿರುವುದು ಗೊತ್ತೇ ಇರಲಿಲ್ಲ.

ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ರಾಜನಾದ ತುಕಾಲಿ, ಪ್ರತಾಪ್ ಖುಷಿಗೆ ಪಾರವೇ ಇಲ್ಲ

ಅದಾದ ಬಳಿಕ ಪ್ರತಾಪ್​ರ ಮೀಮ್ ಪ್ರಸಾರವಾಯ್ತು. ಕೆಲವು ದಿನಗಳ ಹಿಂದೆ ಮಿಡ್ ವೀಕ್ ಎಲಿಮಿನೇಷನ್​ ಹೆಸರಿನಲ್ಲಿ ಪ್ರತಾಪ್ ಅನ್ನು ಹೊರಗೆ ಕಳಿಸುವ ನಿರ್ಧಾರ ಮಾಡಲಾಗಿತ್ತು. ಇನ್ನೇನು ಪ್ರತಾಪ್ ಹೊರಗೆ ಹೋಗಬೇಕು ಎಂದಾಗ ಅವರನ್ನು ಉಳಿಸಿಕೊಳ್ಳಲಾಯಿತು. ಪಾಪ ವೀಕ್ಷಕರೊಬ್ಬರು, ಆ ಎಪಿಸೋಡ್ ನೋಡುತ್ತಾ ಪ್ರತಾಪ್ ಎಲಿಮಿನೇಟ್ ಆದರು ಎಂದುಕೊಂಡು ಸಿಟ್ಟಿನಲ್ಲಿ ಮೊಬೈಲ್ ಒಡೆದು ಹಾಕಿದರಂತೆ. ಅದಾದ ಬಳಿಕ ಪ್ರತಾಪ್ ಹೊರಗೆ ಹೋಗಿಲ್ಲವೆಂದು ಗೊತ್ತಾಗಿದೆ. ಇದನ್ನೇ ವಿಡಿಯೋ ಮಾಡಿ ಹೇಳಿದ್ದ ಆ ವ್ಯಕ್ತಿ, ಇನ್ನು ಒಂಬತ್ತು ನಿಮಿಷ ತಾಳ್ಮೆಯಿಂದ ಶೋ ನೋಡಿದಿದ್ದರೆ ಮೊಬೈಲ್ ಉಳಿಯುತ್ತಿತ್ತು. ಇರಲಿ ಬಿಡಿ ಪ್ರತಾಪ್ ಉಳಿದುಕೊಂಡನಲ್ಲ. ಚೆನ್ನಾಗಿ ಆಡಲಿ’ ಎಂದಿದ್ದರು.

ಈ ಮೀಮ್ ವಿಡಿಯೋ ನೋಡಿ ಸ್ವತಃ ಸುದೀಪ್ ನಕ್ಕು ಸುಸ್ತಾದರು. ಪ್ರತಾಪ್​ಗೆ, ‘ನೀವು ಹೊರಗೆ ಬಂದ ಮೇಲೆ ಆ ವ್ಯಕ್ತಿಯನ್ನು ಹುಡುಕಿ ಪಾಪ ಅವರಿಗೊಂದು ಮೊಬೈಲ್ ಕೊಡಿಸಿ’ ಎಂದರು. ಪ್ರತಾಪ್ ಸಹ ಒಪ್ಪಿಕೊಂಡರು. ಅದಾದ ಬಳಿಕ ಯಾರೋ ಒಬ್ಬ ವ್ಯಕ್ತಿಗೆ, ‘ನೀವು ಬಿಗ್​ಬಾಸ್ ಕನ್ನಡ ಸೀಸನ್ 10 ನೋಡುತ್ತೀರ?’ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಆ ವ್ಯಕ್ತಿ ಹೌದು ನೋಡುತ್ತೀನಿ ಎಂದಿದ್ದಾರೆ. ನಿಮ್ಮ ಪ್ರಕಾರ ಯಾರು ಗೆಲ್ಲಬೇಕು? ಎಂದು ಕೇಳಿದ್ದಕ್ಕೆ, ತುಸು ಯೋಚಿಸಿದ ಆ ವ್ಯಕ್ತಿ, ‘ವರ್ತೂರು ವೆಂಕಟೇಶ್’ ಎಂದಿದ್ದಾರೆ. ಇದನ್ನು ಕೇಳಿ ವರ್ತೂರು ಸೇರಿದಂತೆ ಎಲ್ಲರೂ ಬಿದ್ದು-ಬಿದ್ದು ನಕ್ಕಿದ್ದಾರೆ.

ಅಸಲಿಗೆ ಈ ಬಾರಿ ಬಿಗ್​ಬಾಸ್ ಮನೆಯಲ್ಲಿ ಸಾಕಷ್ಟು ಜಗಳಗಳು ನಡೆದಿವೆಯಾದರೂ ಅಷ್ಟೇ ಸಂತಸದ ಕ್ಷಣಗಳೂ ಇವೆ. ಮೀಮ್​ ಪೇಜ್​ಗಳಂತೂ ಹಬ್ಬವನ್ನೇ ಮಾಡಿಕೊಂಡಿದ್ದಾರೆ. ಹಲವಾರು ಮೀಮ್​ಗಳು ಬಿಗ್​ಬಾಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ